ಸಿನಿಮಾ

ಮಂಡಲ‌ ಮರ್ಡರ್ಸ್ ಕೌತುಕ, ನಿಗೂಢತೆಗಳ‌ ಸರಣಿ

ಯಂತ್ರ ತಂತ್ರ, ಮಾಯ ಮಾಟ, ವಿಜ್ಞಾನ, ರಾಜಕಾರಣ, ಭೂಗತ ಪ್ರಪಂಚ, ಪೊಲೀಸ್, ಗುಪ್ತಚರ ಪಡೆ, ಪ್ರೀತಿಪ್ರೇಮ ಹೀಗೆ ಹಲವು ವಿಷಯಗಳತ್ತ ಗಿರಿಗಿಟ್ಲೆ ಹೊಡೆಯುತ್ತಾ “ಮಂಡಲ‌ ಮರ್ಡರ್ಸ್” ವೆಬ್ ಸರಣಿ ಸಾಗುತ್ತದೆ.
ಫ್ಲಾಷ್ ಬ್ಯಾಕ್,‌ಪ್ರೆಸೆಂಟ್ ಮತ್ತು ಫ್ಯೂಚರ್ ಗಳ‌ ನಡುವೆ ತೊಯ್ದಾಡುತ್ತಾ‌ ನೋಡುಗರಲ್ಲಿ ಕೌತುಕ ಮೂಡಿಸುತ್ತದೆ. ಪ್ರತಿ ಕಂತಿನಿಂದ‌‌‌‌ ಕಂತಿಗೆ ನಿಗೂಢತೆ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ.
ಕಥೆಯ ಕೇಂದ್ರ ಬಿಂದು ಜೊತೆ ಅನಿರೀಕ್ಷಿತವಾಗಿ ದೊಡ್ಡ, ಸಣ್ಣ ಪಾತ್ರಗಳು‌‌ ಕನೆಕ್ಟ್ ಆಗುತ್ತವೆ. ಕರುಣೆಗೆ ಆಸ್ಪದವೇ ಇಲ್ಲದಂತೆ ದೊಡ್ಡ, ಸಣ್ಣ ವಯಸಿನವರ ಕೊಲೆಗಳು‌ ನಡೆಯುತ್ತವೆ.‌ವರದಾನಗಳೂ ಇವೆ. ಹೀಗೆ ಸಾಗುವ ಮಂಡಲ‌ ಮರ್ಡರ್ಸ್ ತಾರ್ಕಿಕ ಅಂತ್ಯ ಕೊನೆಯ ಕಂತಿನಲ್ಲಿ ಆಗುತ್ತದೆಯಾದರೂ ಅದೇ ಅಂತ್ಯವಲ್ಲವೇನೋ ಎಂಬಂತೆ ಭಾಸವಾಗುತ್ತದೆ.
ಈ ವೆಬ್ ಸೀರೀಸ್ ವೈಶಿಷ್ಟಗಳೆಂದರೆ ಜಾಳುಜಾಳಲ್ಲದ‌ ಚಿತ್ರಕಥೆ, ಬಿಗಿಯಾದ ಸೂತ್ರ, ಅಷ್ಟೆ ಬಿಗಿಯಾದ ನಿರ್ದೇಶನದ‌ ಸೂತ್ರಧಾರತ್ವ, ಛಾಯಾಗ್ರಹಣ.‌‌ ಇದರ‌ ಜೊತೆಗೆ ಪಾತ್ರಗಳಿಗೆ ಸೂಕ್ತವಾದ ನಟ‌ನಟಿಯರ ಆಯ್ಕೆ. ಸಿಐಬಿ ಆಫೀಸರ್ ರಿಯಾ ಥಾಮಸ್, ಪಾರ್ಟಿಕಲ್ ಫಿಸಿಸ್ಟ್ ನಂದಿನಿ‌ಪಂತ್ ಪಾತ್ರಗಳಲ್ಲಿ ವಾಣಿ ಕಪೂರ್ ಅನನ್ಯವಾಗಿ ಅಭಿನಯಿಯಿಸಿದ್ದಾರೆ. ಇವರ ಪಾತ್ರ ನಿರ್ವಹಣೆ ಸೂಜಿಗಲ್ಲಿನಂತೆ‌ ಸೆಳೆಯುತ್ತದೆ.‌ಅಂದ‌ಹಾಗೆ ಅನನ್ಯ ಎಂಬ ಹೆಸರಿನ ಪಾತ್ರವೂ ಇದೆ. ಅದರಲ್ಲಿ ಸುರ್ವೀನ್ ಚಾವ್ಲಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ.
ಹಿಂದಿ ಭಾಷೆಯ ಒಟ್ಟು ಎಂಟು ಕಂತುಗಳ ವೆಬ್ ಸೀರೀಸ್ ನಿರ್ದೇಶನದ ಸೂತ್ರ ಹಿಡಿದ ಗೋಪಿ ಪುತ್ರನ್, ಮನನ್ ರಾವತ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ವೆಬ್ ಸೀರೀಸ್ “ನೆಟ್ ಫ್ಲಿಕ್ಸ್”ನಲ್ಲಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!