ನನ್ನ ಪ್ರಯಾಣ

ನಾನು ಕುಮಾರ ರೈತ - ಪ್ರವಾಸಿಗ, ಬ್ಲಾಗರ್ ಮತ್ತು ವನ್ಯಜೀವಿ ಛಾಯಾಗ್ರಾಹಕ. ನನ್ನ ಅನುಭವಕ್ಕೆ ಬಂದ ಸಂಗತಿಗಳು, ಸರಿ - ತಪ್ಪು ಎನಿಸಿದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಅನುಭವಗಳಿಂದ ಅರ್ಥಪೂರ್ಣ ಕಥೆಗಳವರೆಗೆ

ನಾನು ಗಂಧದ ಗುಡಿ ಕರ್ನಾಟಕದ ನಿವಾಸಿ. ಕನ್ನಡಿಗ. ಮನಃಶಾಸ್ತ್ರ, ಸಮಾಜಶಾಸ್ತ್ರ, ಮಾಧ್ಯಮ ಅಧ್ಯಯನ ಕ್ಷೇತ್ರಗಳ ವಿದ್ಯಾರ್ಥಿ. ಛಾಯಾಗ್ರಹಣ ಹವ್ಯಾಸ. ಬೈಕಿಂಗ್ ಅಂದರೆ ಅಚ್ಚುಮೆಚ್ಚು. ಪ್ರವಾಸ ಮತ್ತು ಬೈಕಿಂಗ್ ವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನು ನೀಡುತ್ತಿವೆ. ವಿವಿಧ ಅನುಭವಗಳಿಗೆ ತೆರೆದುಕೊಳ್ಳಲು ಅವಕಾಶವಾಗುತ್ತಿದೆ. ಕೃಷಿಯೂ ನನ್ನ ನೆಚ್ಚಿನ ಕ್ಷೇತ್ರಗಳಲ್ಲಿ ಸೇರಿದೆ. ಇದರ ಬಗ್ಗೆಯೂ ಹೆಚ್ಚು ಓದುತ್ತೇನೆ, ಸಂದರ್ಶನಗಳನ್ನು ಮಾಡುತ್ತೇನೆ. ಲೇಖನಗಳನ್ನೂ ಬರೆಯುತ್ತೇನೆ.

whatsapp image 2026 04 23 at 11.07.24 am
error: Content is protected !!