ಸಾಹಿತ್ಯ

ರಷ್ಯಾದಲ್ಲಿ ಮದರ್ ರಷ್ಯಾ, ಉಕ್ರೇನ್ ನಲ್ಲಿ ಮದರ್ ಲ್ಯಾಂಡ್ ಪ್ರತಿಮೆ

ಜನ್ಮಭೂಮಿಯನ್ನು, ನಾವಾಡುವ ತಾಯಿ ನುಡಿಯನ್ನು ತಾಯಿ ಎಂದು ನೋಡುವುದು ಭಾರತಕ್ಕಷ್ಟೇ ಸೀಮಿತವಲ್ಲ. ರಷ್ಯಾದಲ್ಲಿ ಜನ್ಮಭೂಮಿಯನ್ನು ಮದರ್ ರಷ್ಯಾ ಎಂದು ಗೌರವಿಸುತ್ತಾರೆ. ಭಾಷೆಯನ್ನೂ ಹಾಗೆ ಕಾಣುತ್ತಾರೆ. ಉಕ್ರೇನ್ ದೇಶ ಕೂಡ ಇದಕ್ಕೆ ಹೊರತಲ್ಲ. ಅಲ್ಲಿ ಮದರ್ ಲ್ಯಾಂಡ್ ಪ್ರತಿಮೆಗಳೇ ಇವೆ.
ಭಾರತದಲ್ಲಿ, ದಕ್ಷಿಣ ಭಾರತದಲ್ಲಿ ಇಂಥ ಸಾಂಸ್ಕೃತಿಕ ಗೌರವಗಳು ವಿಶೇಷವಾಗಿ ಕಾಣುತ್ತವೆ. ಕರ್ನಾಟಕದಲ್ಲಿ ಭುವನೇಶ್ವರಿಯನ್ನು ನಾಡದೇವಿ, ಕನ್ನಡಾಂಬೆ ಎಂದು ಪರಿಭಾವಿಸಲಾಗಿದೆ. ವಿಜಯನಗರ ಸಾಮ್ರಾಜ್ಯಕ್ಕಿಂತಲೂ ಮೊದಲಿನಿಂದಲೇ ಭುವನೇಶ್ವರಿ ದೇಗುಲ ಇತ್ತು. ಮೈಸೂರು ಅರಮನೆ ಆವರಣದಲ್ಲಿಯೂ ಭುವನೇಶ್ವರಿಗೆ ಪೂಜೆ ಸಲ್ಲಿಕೆಯಾಗುತ್ತದೆ. ಮೊದಲೆಲ್ಲ‌ ನವರಾತ್ರಿಯ ಕೊನೆಯ ದಿನದಂದು ರಾಜಪ್ರಮುಖರೇ ಆನೆ ಅಂಬಾರಿಯಲ್ಲಿ ಕುಳಿತುಕೊಂಡು‌ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು.‌

Ukrain Mother Land
ಇದು 1969ರಲ್ಲಿ ರದ್ದಾದ ನಂತರ ರಾಜ ಪ್ರಮುಖ ಜಯ ಚಾಮರಾಜ ಒಡೆಯರ್ ಅವರು 1970ರಲ್ಲಿ ಅರಮನೆ ಆವರಣದಲ್ಲಿ ಇದ್ದ ಭುವನೇಶ್ವರಿ ಪ್ರತಿಮೆಯನ್ನು ವಿಜಯದಶಮಿಯಂದು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಿಸಿದ್ದರು. ನಂತರದಿಂದ ಚಾಮುಂಡೇಶ್ವರಿ ವಿಗ್ರಹವನ್ನು ಇಡುವುದು ರೂಢಿಗೆ ಬಂತು !
ನೆಲ, ಸಂಸ್ಕೃತಿ ಮತ್ತು ಭಾಷೆಯನ್ನು ತಾಯಿಯಾಗಿ ಕಾಣುವುದು ಸಾಂಸ್ಕೃತಿಕವಾಗಿ ಮಹತ್ವಪೂರ್ಣ.‌ ಇಂಥ ಪರಿಕಲ್ಪನೆಗಳ ವ್ಯಾಖ್ಯಾನ ಭಾರತೀಯ ತತ್ವಶಾಸ್ತ್ರದಲ್ಲಿಯೂ ಇದೆ ಎಂದು ಹೇಳುತ್ತಾರೆ. ತಿಳಿದವರು ಇದರ ಬಗ್ಗೆ ಬೆಳಕು ಚೆಲ್ಲಿ !

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!