Home ಪರಿಸರKannadaಕೇರಳಕ್ಕೆ ಮುಂಗಾರು ಆಗಮನ ಮುನ್ಸೂಚನೆ;   ಐಎಂಡಿ ದಿನಾಕ ನಿಗದಿ

ಕೇರಳಕ್ಕೆ ಮುಂಗಾರು ಆಗಮನ ಮುನ್ಸೂಚನೆ;   ಐಎಂಡಿ ದಿನಾಕ ನಿಗದಿ

by Kumara Raitha
0 comments

ಭಾರತೀಯ ಹವಾಮಾನ ಇಲಾಖೆಯ  ಪ್ರಕಟಣೆಯ ಪ್ರಕಾರ, ನೈಋತ್ಯ ಮುಂಗಾರು ಮಳೆಯು  ಜೂನ್ 4 ರ ಸುಮಾರಿಗೆ ಕೇರಳವನ್ನು ಪ್ರವೇಶಿಸಲಿದೆ.

ವಿಳಂಬಕ್ಕೆ ಕಾರಣ: ಮುಂಗಾರು ಆರಂಭದಲ್ಲಿ ಮೇ 26 ರಂದೇ ಕೇರಳಕ್ಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ವಾತಾವರಣದ ಬದಲಾವಣೆಗಳಿಂದಾಗಿ ಇದು ಸ್ವಲ್ಪ ತಡವಾಗಿದೆ. ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಕೇರಳಕ್ಕೆ ಪ್ರವೇಶಿಸುತ್ತದೆ.

ಮಳೆ ಮುನ್ಸೂಚನೆ:  ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಕೇರಳದ ಕೆಲವು ಭಾಗಗಳಲ್ಲಿ ಮುಂದಿನ 6-7 ದಿನಗಳ ಕಾಲ ಭಾರಿ ಉಂಟಾಗಲಿದ್ದು, 7 ಸೆಂ.ಮೀ ನಿಂದ 20 ಸೆಂ.ಮೀವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಿಗೂ ಭಾರಿ ಮಳೆಯ ಅಲರ್ಟ್ ನೀಡಲಾಗಿದೆ.

ಮುಂಗಾರು ಮುನ್ಸೂಚನೆ: ಈ ವರ್ಷ ದೇಶದಲ್ಲಿ  ವಾಡಿಕೆಗಿಂತ ಕಡಿಮೆ (Below Normal) ಅಂದರೆ ದೀರ್ಘಾವಧಿ ಸರಾಸರಿಯ (LPA) ಶೇಕಡಾ 90 ರಷ್ಟು ಮಳೆಯಾಗಬಹುದು ಎಂದು  ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್ ನಿನೋ’ (El Nino) ಪರಿಸ್ಥಿತಿಗಳು ಸಕ್ರಿಯವಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

You may also like

Leave a Comment

error: Content is protected !!