ರಾಜಕೀಯ

ದಳಪತಿ ವಿಜಯ್ ಕೈ ಹಿಡಿಯುವವರು ಯಾರು

ತಮಿಳುನಾಡು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ (108 ಸ್ಥಾನಗಳು) ಗೆ ಸರಳ ಬಹುಮತ (118 ) ದೊಂದಿಗೆ ಸರ್ಕಾರ ರಚಿಸಲು ಇನ್ನೂ ಹತ್ತು ಸ್ಥಾನಗಳ ಕೊರತೆ ಇದೆ. ಇಂಥ ಸಂದರ್ಭದಲ್ಲಿ ದಳಪತಿ ವಿಜಯ್ ಕೈ ಹಿಡಿಯುವವರು ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರವೂ ಸರಳವಲ್ಲ. ಏಕೆಂದರೆ ಪ್ರಸಕ್ತ ತಮಿಳುನಾಡು ರಾಜಕೀಯವೇ ಹಾಗಿದೆ.
ಅತೀ ಹೆಚ್ಚಿನ ಸಾಧ್ಯತೆಗಳೆಂದರೆ ಕಾಂಗ್ರೆಸ್ (INC) ಪಕ್ಷದ ಬೆಂಬಲ. ಇದು 5 ಸೀಟುಗಳು ಸೀಟುಗಳನ್ನಷ್ಟೇ ಪಡೆದಿದೆ. ವಿಜಯ್ ಅವರ ತಂದೆಯೇ ಈಗಾಗಲೇ ಕಾಂಗ್ರೆಸ್ಗೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಪವರ್ ಶೇರಿಂಗ್ಗೆ ಸಿದ್ಧತೆ ತೋರಿಸಲಾಗಿದೆ. ಕಾಂಗ್ರೆಸ್ ನಾಯಕರು ಸಹ ಟಿವಿಕೆಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ರಾಹುಲ್‌ ಗಾಂದಿ ಸಹ ಟಿವಿಕೆ ವಿಶೇಷವಾಗಿ ದಳಪತಿ ವಿಜಯ್‌ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ.

ಕಾಂಗ್ರೆಸ್ ಜೊತೆಗೆ 4 ಸೀಟುಗಳನ್ನು ಪಡೆದಿರುವ ಪಟ್ಟಾಳಿ ಮಕ್ಕಳ್ ಕಚ್ಚಿ (PMK) ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆ ಹೆಚ್ಚು . 2 ಪ್ಲಸ್ ಸೀಟುಗಳನ್ನು ಪಡೆದಿರುವ ಎಡಪಕ್ಷಗಳು (CPI ಮತ್ತು CPI(M)) ಸೈದ್ದಾಂತಕ ಕಾರಣಗಳಿಗಾಗಿ ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆಗಳಿವೆ. ವಿದುತಲೈ ಚಿರುತೈಗಳ್ ಕಚ್ಚಿ (VCK) , IUML, DMDK ಕೂಡ ಬೆಂಬಲ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಎಐಡಿಎಂಕೆ ಮತ್ತು ಬಿಜೆಪಿ ಹೊಂದಾಣಿಕೆ ಕಾರಣದಿಂದ ಟಿವಿಕೆಯು ಬಿಜೆಪಿಯನ್ನು”ಐಡಿಯಾಲಜಿಕಲ್ ಎನಿಮಿ” ಎಂದು ಕರೆದಿದೆ. ಡಿಎಂಕೆಯನ್ನು ರಾಜಕೀಯ ವಿರೋಧಿ ಎಂದು ಪರಿಗಣಿಸಿದೆ. ಎಐಡಿಎಂಕೆ ಜೊತೆ ಹೊಂದಾಣಿಕೆ ಸಾಧ್ಯವೇ ಇಲ್ಲದ ಪರಿಸ್ಥಿತಿಯಿದೆ.
ವಿಜಯ್ ನೇತೃತ್ವದ ಸರ್ಕಾರ ರಚನೆಗೆ ಸಿದ್ಧತೆ ನಡೆಯುತ್ತಿದೆ. ಬಹುಶಃ ಇವತ್ತು ಅಥವಾ ನಾಳೆ ದಳಪತಿ ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಅನುಮತಿ ಕೋರಬಹುದು. ಇದೇ ಸಂದರ್ಭದಲ್ಲಿ ಬಹುಮತ ಸಾಬೀತಿಗೆ ಎರಡು ವಾರ ಅವಧಿ ಕೇಳುವ ಸಾಧ್ಯತೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!