Home ರಾಜಕೀಯವಿಜಯ್ ಸರ್ಕಾರ ರಚನೆಗೆ ನೀಡದ ಹಿಂದೆ ಕುತಂತ್ರ ರಾಜಕಾರಣವಿದೆಯೇ ?

ವಿಜಯ್ ಸರ್ಕಾರ ರಚನೆಗೆ ನೀಡದ ಹಿಂದೆ ಕುತಂತ್ರ ರಾಜಕಾರಣವಿದೆಯೇ ?

by Kumara Raitha
0 comments

ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿ. ಇವರು ಕೇಂದ್ರದಲ್ಲಿ‌‌ ಆಡಳಿತ‌‌ ಚುಕ್ಕಾಣಿ ‌ಹಿಡಿದ ಪಕ್ಷದಿಂದಲೇ ನೇಮಕವಾದರೂ ಸಾಂವಿಧಾನಿಕ ಕರ್ತವ್ಯ‌ ಮರೆಯುವಂತಿಲ್ಲ. ಪಕ್ಷಪಾತ ಮಾಡುವಂತಿಲ್ಲ.‌ಆದರೆ‌ ಬಿಜೆಪಿಯ ಕೇಂದ್ರಾಳಿತ ಅವಧಿಯಲ್ಲಿ ಕೆಲವು ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.‌
ರಾಜ್ಯಪಾಲರ‌ ಕರ್ತವ್ಯವು ಚುನಾಯಿತ ಶಾಸಕರ‌ ತಲೆ ‌ಎಣಿಸುವುದಲ್ಲ. ಸರ್ಕಾರದ ವಿಶ್ವಾಸಮತ ಪರೀಕ್ಷೆ ಸದನದಲ್ಲಿಯೇ ಆಗಬೇಕು ಎಂದು‌ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಎಸ್.ಆರ್. ಬೊಮ್ಮೊಯಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ಹೇಳಿದೆ.
ಲೋಕಸಭೆಯಲ್ಲಿ ವಾಜಪೇಯಿ ಪ್ರಕರಣ, ಕರ್ನಾಟಕದಲ್ಲಿ‌ ಬಿ.ಎಸ್. ಯಡಿಯೂರಪ್ಪ ಪ್ರಕರಣದಲ್ಲಿ ಶಾಸಕರ ಬೆಂಬಲ ಎಷ್ಟರ ಮಟ್ಟಿಗಿದೆ ಎಂದು ಪರೀಕ್ಷಿಸದೇ ಸರ್ಕಾರ ರಚನೆಗೆ ಆಹ್ವಾನ ನೀಡಿದ ಉದಾಹರಣೆಗಳು ಇದೆ.
ಇಷ್ಟೆಲ್ಲ ಹಿನ್ನೆಲೆ‌ ಇದ್ದೂ ನಟ, ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (ತಮಿಳಿಗ ವೆಟ್ರಿ ಕಳಗಂ – 108 ಸ್ಥಾನ + ಕಾಂಗ್ರೆಸ್ ಬೆಂಬಲ 5 ಒಟ್ಟು 113) ಗೆ ಸರ್ಕಾರ ರಚನೆಗೆ ರಾಜ್ಯಪಾಲ ನೆಪಗಳನ್ನು ಹೇಳಿ ನಿರಾಕರಿಸುತ್ತಿರುವುದೇಕೆ ? ಈ ಕ್ರಮಕ್ಕೆ ದೇಶದ ಸಾಂವಿಧಾನಿಕ ಪರಿಣಿತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಟಿವಿಕೆ ಏನಾದರೂ ಸುಪ್ರೀಮ್ ಕೋರ್ಟ್ ಮೊರೆ ಹೋದರೆ ಎಸ್.ಆರ್. ಬೊಮ್ಮಾಯಿ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಸಸನದಲ್ಲಿಯೇ ವಿಶ್ವಾಸಮತ ಸಾಬೀತು ಆಗಬೇಕು ಎಂದು ಕೋರ್ಟ್ ಹೇಳಬಹುದು. ಆಗ ತಮಿಳುನಾಡು ರಾಜ್ಯಪಾಲರಿಗೆ ಮುಖಭಂಗವಾಗುವದಿಲ್ಲವೇ ?
ಏನೇ ಮುಖಭಂಗವಾಗಲಿ ಟಿವಿಕೆ ಸರ್ಕಾರ ರಚನೆ ವಿಳಂಬಿಸುತ್ತೇವೆ, ತನ್ಮೂಲಕ ಡಿಎಂಕೆ + ಎಎಐಡಿಕೆ ಹೊಂದಾಣಿಕೆಗೆ ದಾರಿ ಮಾಡಿಕೊಟ್ಟು ಸರ್ಕಾರದಲ್ಲಿ (ಊಟಿ – ಉದಕಮಂಡಲಂ ಕ್ಷೇತ್ರದಲ್ಲಿ ಓರ್ವ ಬಿಜೆಪಿ ಶಾಸಕ‌ ಆಯ್ಕೆಯಾಗಿದ್ದಾರೆ. ಇವರಿಗೆ ಕ್ಯಾಬಿನೆಟ್‌ ಮಂತ್ರಿಗಿರಿ‌ ದೊರಕಿದರೆ ಸರ್ಕಾರದಲ್ಲಿ‌ ಬಿಜೆಪಿಯೂ ಪಾಲುದಾರ ಪಕ್ಷವಾಗುತ್ತದೆ) ನುಸುಳುತ್ತೇವೆ ಎಂಬುದು ಬಿಜೆಪಿ ಉನ್ನತ ನಾಯಕರ ಇರಾದೆಯಾಗಿದೆಯೇ ?
ಹಿಂದಿನ‌ ಸರ್ಕಾರದ ಮುಖ್ಯಮಂತ್ರಿಯಾಗಿದ್ದ‌‌ ಸ್ಟಾಲಿನ್ ರಾಜಿನಾಮೆಯೊಂದಿಗೆ ತಮಿಳುನಾಡು‌ ವಿಧಾನಸಭೆ ‌ವಿಸರ್ಜನೆಯಾಗಿದೆ ! ಹೊಸದಾಗಿ ಬಂದ ಶಾಸಕರು ಪ್ರಮಾಣ ವಚನಕ್ಕೆ ಕಾಯುತ್ತಿದ್ದಾರೆ. ಸರ್ಕಾರವಿಲ್ಲದಿದ್ದರೆ‌ ಶೂನ್ಯ ಸ್ಥಿತಿ ‌ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಅತೀದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿ ವಿಶ್ವಾಸಮತ ಕೋರಲು ಸಮಯಾವಕಾಶ ನೀಡಲಾಗುತ್ತದೆ.‌ಇದು‌ ಸಾಂವಿಧಾನಿಕ ಪರಂಪರೆ
ಇದ್ಯಾವುದಕ್ಕೂ ತಮಿಳುನಾಡು ರಾಜ್ಯಪಾಲ‌ ಅವಕಾಶ ನೀಡುತ್ತಿಲ್ಲ. ಒಂದು ವೇಳೆ ಡಿಎಂಕೆ – ಅಣ್ಣಾ‌ ಡಿಎಂಕೆ (DMK 59, AIADMK 47 ಇವೆರಡೂ ಸರ್ಕಾರ ರಚಿಸಲು ಬೇಕಾದ 118ಕ್ಕೆ 12 ಸ್ಥಾನಗಳ ಕೊರತೆ ಎದುರಾಗುತ್ತದೆ. ಡಿಎಂಕೆ ಜೊತೆ ಇರುವ ಪಾರ್ಟಿಗಳು ಕೈ ಜೋಡಿಸುವ ಸಾಧ್ಯತೆ ಇಲ್ಲ) ಸೇರಿ ಸರ್ಕಾರ ರಚನೆಯಾಗಿ ಬಿಜೆಪಿ ಒಳ‌ನುಸುಳಲು‌ ಸಾಧ್ಯವಾಗದಿದ್ದರೆ ಯಾರಿಗೂ ಬಹುಮತ ಇಲ್ಲ‌ ಎಂದು ಹೇಳಿ ರಾಷ್ಟ್ರಪತಿ ಆಳ್ವಿಕೆ ಮೂಲಕ ಹಿಂಬಾಗಿಲಿಂದ ತಮಿಳುನಾಡು ಅಧಿಕಾರ ಹಿಡಿಯುವ ಇರಾದೆ ಬಿಜೆಪಿಗಿದೆಯೇ

You may also like

Leave a Comment

error: Content is protected !!