ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ ಶುಕ್ರವಾರ, 28 ನೇ ಜುಲೈ 2023 / 06ನೇ ಶ್ರಾವಣ 1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು ಆದರೆ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಅತಿ ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ. ನಲ್ಲಿ): ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ ) 20.
ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):
ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ) 6; ಔರಾದ್ (ಬೀದರ್ ಜಿಲ್ಲೆ) 5; ಮಾಣಿ, ಮೂಲ್ಕಿ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಕದ್ರಾ, ಗೇರುಸೊಪ್ಪ, ಮಂಕಿ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ) ತಲಾ 4; ಕೋಟ, ಉಡುಪಿ, ಸಿದ್ದಾಪುರ, ಕೊಲ್ಲೂರು, ಕುಂದಾಪುರ, ಕಾರ್ಕಳ (ಎಲ್ಲಾ ಉಡುಪಿ ಜಿಲ್ಲೆ), ಉಪ್ಪಿನಂಗಡಿ, ಪಣಂಬೂರು, ಪುತ್ತೂರು, ಮಂಗಳೂರು, ಮಂಗಳೂರು ವಿಮಾನ ನಿಲ್ದಾಣ (ಎಲ್ಲಾ ದಕ್ಷಿಣ ಕನ್ನಡ ಜಿಲ್ಲೆ), ಶಿರಾಲಿ, ಅಂಕೋಲಾ, ಸಿದ್ದಾಪುರ, ಕುಮಟಾ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಬೀದರ್ ಪಿಟಿಓ, ಸಂತಾಪುರ, ಮಂಠಾಳ (ಎಲ್ಲಾ ಬೀದರ್ ಜಿಲ್ಲೆ), ಲೋಂಡಾ, ನಿಪ್ಪಾಣಿ (ಎರಡೂ ಬೆಳಗಾವಿ ಜಿಲ್ಲೆ), ಕಲಬುರ್ಗಿ, ಸೇಡಂ, ಚಿತ್ತಾಪುರ, ಖಜೂರಿ, ಮುಧೋಳೆ (ಎಲ್ಲಾ ಕಲಬುರ್ಗಿ ಜಿಲ್ಲೆ), ಬೀದರ್, ಸೋಮವಾರಪೇಟೆ (ಕೊಡಗು ಜಿಲ್ಲೆ), ಜಯಪುರ, ಶೃಂಗೇರಿ (ಎರಡೂ ಚಿಕ್ಕಮಗಳೂರು ಜಿಲ್ಲೆ), ತಾಳಗುಪ್ಪ (ಶಿವಮೊಗ್ಗ ಜಿಲ್ಲೆ) ತಲಾ 3; ಬೆಳ್ತಂಗಡಿ, ಸುಳ್ಯ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಹೊನ್ನಾವರ, ಬೇಲಿಕೇರಿ, ಜೋಯಿಡಾ, ಕಾರವಾರ, ಗೋಕರ್ಣ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಅಡಕಿ, ಚಿಂಚೋಳಿ, ನಿಂಬರ್ಗಾ ತಾಂಡಾ, ಕಮಲಾಪುರ, ಸುಲೇಪೇಟ, ಗುಂಡಗುರ್ತಿ, ನೆಲೋಗಿ, ಆಳಂದ, ಮಹಾಗಾವ್, ಫರಹತಾಬಾದ್ (ಎಲ್ಲಾ ಕಲಬುರ್ಗಿ ಜಿಲ್ಲೆ), ಹುಮನಾಬಾದ್, ಮುಡಬಿ, ನಿರ್ಣಾ, ರಾಜೇಶ್ವರ, ಸಾಯಿಗಾಂವ್ (ಎಲ್ಲಾ ಬೀದರ್ ಜಿಲ್ಲೆ), ಸಂಕೇಶ್ವರ (ಬೆಳಗಾವಿ ಜಿಲ್ಲೆ), ಭಾಗಮಂಡಲ (ಕೊಡಗು ಜಿಲ್ಲೆ), ಕೊಪ್ಪ, ಬಾಳೆಹೊನ್ನೂರು, ಕಮ್ಮರಡಿ, ಕೊಟ್ಟಿಗೆಹಾರ (ಎಲ್ಲ ಚಿಕ್ಕಮಗಳೂರು ಜಿಲ್ಲೆ), ಹಾಸನ ತಲಾ 2; ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಜಗಲಬೆಟ್, ಯಲ್ಲಾಪುರ, ಮಂಚಿಕೆರೆ (ಎಲ್ಲಾ ಉತ್ತರ ಕನ್ನಡ ಜಿಲ್ಲೆ), ಬೆಳಗಾವಿ ವಿಮಾನ ನಿಲ್ದಾಣ, ಕಣಬರ್ಗಿ AWS, ಬೆಳಗಾವಿ ನಗರ, ರಾಯಬಾಗ, ಸದಲಗಾ, ಚಿಕ್ಕೋಡಿ, ಅಥಣಿ, ಹುಕ್ಕೇರಿ, ಸೇಡಬಾಳ, ಹಿಡಕಲ್ ಅಣೆಕಟ್ಟು, ಕುಡಚಿ (ಎಲ್ಲಾ ಬೆಳಗಾವಿ ಜಿಲ್ಲೆ), ಬಿಳಗಿ (ಬಾಗಲಕೋಟೆ ಜಿಲ್ಲೆ), ಭಾಲ್ಕಿ (ಬೀದರ್ ಜಿಲ್ಲೆ), ಆಲಮಟ್ಟಿ, ಝಳಕಿ ಕ್ರಾಸ್ (ವಿಜಯಪುರ ಜಿಲ್ಲೆ), ಜೇವರ್ಗಿ, ಅಫಜಲಪುರ (ಎರಡೂ ಕಲಬುರ್ಗಿ ಜಿಲ್ಲೆ), ಸೈದಾಪುರ (ಯಾದಗಿರಿ ಜಿಲ್ಲೆ), ಎನ್ ಆರ್ ಪುರ, ಕಳಸ (ಎರಡೂ ಚಿಕ್ಕಮಗಳೂರು ಜಿಲ್ಲೆ), ಹಾರಂಗಿ, ಮೂರ್ನಾಡು, ಹುಡಕೆರೆ, ನಾಪೋಕ್ಲು, ವಿರಾಜಪೇಟೆ, ಶನಿವಾರಸಂತೆ (ಎಲ್ಲಾ ಕೊಡಗು ಜಿಲ್ಲೆ), ಹುಂಚದಕಟ್ಟೆ, ತ್ಯಾಗರ್ತಿ, ಮಂಡಗದ್ದೆ (ಎಲ್ಲಾ ಶಿವಮೊಗ್ಗ ಜಿಲ್ಲೆ) ತಲಾ 1.
30 ನೇ ಜುಲೈ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:
ಮುಂದಿನ 24 ಘಂಟೆಗಳು: ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಮುಂದಿನ 48 ಘಂಟೆಗಳು: ಕರಾವಳಿಯ ಬಹುತೇಕ ಕಡೆಗಳಲ್ಲಿ; ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.
ಭಾರೀ ಮಳೆ ಮುನ್ನೆಚ್ಚರಿಕೆ:
ಮುಂದಿನ 24 ಘಂಟೆಗಳು: ಕರಾವಳಿಯ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಿರುಗಾಳಿ ಮುನ್ನೆಚ್ಚರಿಕೆ:
ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಘಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ.
ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.
30 ನೇ ಜುಲೈ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.
ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.