ಹಿಂದಿಯ ಜನರಿಗೆ ಹೇಳಲು ಹಿಂದಿ ನಾಯಕರ ಬಳಿ ಏನು ಉಳಿದಿಲ್ಲ. ಹೀಗಾಗಿ ಅವರು ದಕ್ಷಿಣದ ಜನರ ಮೇಲೆ ಭಯ ಹೇರುತ್ತಿದ್ದಾರೆ ಎಂದು ಮ್ಯಾಗ್ ಸ್ಸೇ, ಗೌರಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್ ಕುಮಾರ್ ಹೇಳಿದರು. ನಗರದ ಸೆಂಟ್ ಜೋಸೆಫ್ ಕಾಲೇಜು ಸಭಾಂಗಣದಲ್ಲಿ ಗೌರಿ ಲಂಕೇಶ್ ಟ್ರಸ್ಟ್ ವತಿಯಿಂದ ‘ಗೌರಿ ಲಂಕೇಶ್’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಹಿಂದಿ ಎನ್ನುವುದು ಇದು ಕೇವಲ ಭಯ ಹುಟ್ಟಿಸುವುದು ಮಾತ್ರ. ಹೀಗಾಗಿ ಅವರು ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಹಿಂದಿಯ ಬಗ್ಗೆ ಹೆದರಿಕೆ ಬೇಡ. ಹಿಂದಿ ಹೆಸರಿನಲ್ಲಿ ಹಿಂದೂಸ್ತಾನವನ್ನು ಒಡೆಯುವ ಪ್ರಯತ್ನ ಬೇಡ ಎಂದರು.
ಅವರು ಕೇವಲ ಹಿಂದಿ ಮಾತನಾಡುವವರನ್ನು ಹೆದರಿಸಿ ಆಗಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಹಿಂದಿ ಹೇರಿದರೆ ಅವರನ್ನೂ ಸಹ ಹೆದರಿಸಬಹುದೆಂಬ ಉದ್ದೇಶ ಅವರದ್ದಾಗಿದೆ. ಹಿಂದಿ ಮಾತನಾಡುವ ನಾಯಕರೇ ಹಿಂದಿ ಕ್ಷೇತ್ರಗಳ ಜನರ ಬದುಕನ್ನೇ ದುಸ್ಥರಗೊಳಿಸಿದ್ದಾರೆ. ಈಗ ಹಿಂದಿ ಮಾತನಾಡುವ ಜನರ ಬಳಿ ಏನೂ ಉಳಿದಿಲ್ಲ. ಹೀಗಾಗಿ ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು , ಕೊಂಕಣಿ ಮಾತನಾಡುವವರ ಮೇಲೆ ಭಯ ಹುಟ್ಟಿಸಲಾರಂಭಿಸಿದ್ದಾರೆ. ಆದರೆ ಇದಕ್ಕೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ.
ಯಾರಾದರೂ ಉತ್ತರ ಭಾರತದಿಂದ ನಿಮ್ಮನ್ನು ಹಿಂದಿ ಹೆಸರಿನಲ್ಲಿ ಭಯ ಹುಟ್ಟಿಸಿದರೆ ಅದಕ್ಕೆ ಹೆದರಬಾರದು. ಹೇರಿಕೆಯಾಗುತ್ತಿರುವ ಹಿಂದಿ ಬಗ್ಗೆ ಹೆದರುವ ಬದಲು ಕರುಣೆ ತೋರಬೇಕು. ಹಿಂದಿ ಪ್ರದೇಶಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ ಗಳಲ್ಲಿ ತಲೆಯೆತ್ತಿ ಯುವಕರು ನಡೆಯುವಂತೆ ಮಾಡುವಂತಹ ಯಾವುದೇ ವಿಶ್ವೀವಿದ್ಯಾಲಯಗಳು ಈಗ ಉಳಿದಿಲ್ಲ. ಈ ಹಿಂದಿ ಪ್ರದೇಶಗಳ ಯುವಕರ ಹತ್ತಿರ ಹಿಂದಿ ಬಿಟ್ಟು ಏನು ಉಳಿದಿಲ್ಲ. ಹಿಂದಿ ಪ್ರದೇಶದ ಯುವಕರು ಖಾಲಿ ಪಾತ್ರೆಗಳಂತೆ ತಿರುಗಾಡುತ್ತಿದ್ದಾರೆ. ಅವರ ಬಳಿ ಏನು ಉಳಿದಿಲ್ಲ. ಹಿಂದಿ ಪ್ರದೇಶದ ಜನರು ಮತ್ತು ಹಿಂದಿ ಮಾತನಾಡುವವರಿಗಷ್ಟೇ ದುಃಸ್ಥಿತಿ ಬಂದಿಲ್ಲ ಎಂದರು.
ವಿಪಕ್ಷಗಳ ನೆರವಿನಿಂದ ಪ್ರಜಾಪ್ರಭುತ್ವ ಉಳಿಯುತ್ತದೆ ಎಂದು ಭಾವಿಸಿದರೆ ಅದು ಸುಳ್ಳು. ವಿಪಕ್ಷ ನಾಯಕರ ಬಳಿ ನೈತಿಕತೆ ಉಳಿದಿಲ್ಲ. ಯಾವುದೇ ಪ್ರಮುಖ ಅಸ್ತ್ರ ಅಲ್ಲ. ನೈತಿಕತೆಯಿಲ್ಲ. ಹಿಂದೂ-ಮುಸಲ್ಮಾನ್ ಸಂಘರ್ಷ ನಡೆಯುತ್ತಿದ್ದ ಸಂದರ್ಭದ ನಡುವೆ ಮಹಾತ್ಮ ಗಾಂಧೀಜಿ ನೈತಿಕತೆಯ ಅಸ್ತ್ರದೊಂದಿಗೆ ನಡೆಯುತ್ತಿದ್ದರು. ಆಗ ಗಾಂಧೀಜಿ ತಾವು ಹಿಂದೂ, ಪಾರ್ಸಿ, ಸಿಖ್, ಮುಸ್ಲಿಂ ಎಲ್ಲವೂ ಆಗಿದ್ದೇನೆ ಎಂದು ನೈತಿಕತೆಯ ಆಧಾರದ ಮೇಲೆ ಹೇಳುತ್ತಿದ್ದರು. ಆದರೀಗ ವಿಪಕ್ಷಗಳಲ್ಲಿ ಯಾವ ಧೈರ್ಯವೂ ಮಾರ್ಗವೂ ಇಲ್ಲ ಎಂದು ರವೀಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಸಂಘರ್ಷ – ಹೋರಾಟ – ನಾಯಕತ್ವ ಎನ್ನುವುದನ್ನು ವಿಪಕ್ಷಗಳಿಂದ ನಿರೀಕ್ಷಿಸುವುದು ಈಗ ಮೂರ್ಖತನ. ಏಕೆಂದರೆ ವಿರೋಧ ರಾಜಕೀಯ ಪಕ್ಷಗಳು ಸೋಲನ್ನು ಒಪ್ಪಿಕೊಂಡು ಆಗಿದೆ. ಅವುಗಳ ಬಳಿ ಹೋರಾಟ ಮಾಡಲು ಏನು ಉಳಿದಿಲ್ಲ. ಪ್ರಜಾಪ್ರಭುತ್ವ ಹೆಸರಿನಲ್ಲಿ ಬಹಳಷ್ಟು ಸುಳ್ಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಹೋರಾಟ ನಾಯಕತ್ವ, ಬದಲಾವಣೆಯ ಸಮಾಜವನ್ನು ನೀವುಗಳು ನಿರೀಕ್ಷಿಸುತ್ತೀರಿ ಎನ್ನುವುದೇ ಆದಲ್ಲಿ ಅದು ನಮ್ಮಿಂದ ನಿಮ್ಮಿಂದ ಸಾಧ್ಯ. ಪ್ರತಿಯೊಬ್ಬರ ಒಳಗೆ ನಾಯಕ ಹುಟ್ಟಬೇಕು ಎಂದು ಕರೆ ನೀಡಿದರು.
5 ವರ್ಷಗಳಿಗೊಮ್ಮೆ ಜನರ ಮುಂದೆ ಬರುವ ಚುನಾವಣಾ ಆಯೋಗ ಮತದಾನ ಮಾಡುವುದು ದೊಡ್ಡ ಕೆಲಸ ಎಂದು ಹೇಳುತ್ತದೆ. ಆದರೆ ಇದು ದೊಡ್ಡ ಕೆಲಸವೇನಲ್ಲ. ಇದೊಂದು ಸಣ್ಣಕೆಲಸ. ಆದರೆ ಬಹಳ ಜವಾಬ್ದಾರಿಯುಳ್ಳ ಕೆಲಸ. ಮತದಾನ ಮಾಡುವುದಕ್ಕೆ ನೀವು ಸರಿಯಾಗಿ ನಿರ್ಧರಿಸಿಲ್ಲ ಎಂದಾದರೆ ಜನರು ಮತದಾನ ಮಾಡುವ ಅವಶ್ಯಕತೆಯೇ ಇಲ್ಲ. ಮತದಾನ ಕೇಂದ್ರ ಎನ್ನುವುದು ಜನರನ್ನು ತೋಳಗಳಂತೆ ಕರೆದುಕೊಂಡು ಹೋಗುವುದಲ್ಲ. ಮತದಾನದ ಬೆರಳನ್ನು ಸೆಲ್ಫಿಗೆ ಪೋಸು ಕೊಡುವುದು ವಲ್ಗರ್ ಫೋಸ್. ಸೆಲ್ಫಿ ತೆಗೆದುಕೊಳ್ಳುವುದೇ ಮತದಾನ ಮಾಡುವ ಉದ್ದೇಶವಲ್ಲ. ಜವಾಬ್ದಾರಿ ಕೆಲಸ ಮಾಡಲು ಹೋಗುವವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅವಶ್ಯದಕತೆ ಇದೆಯೇ? ಮತದಾನ ಮಾಡುವುದು ನಿಜವಾದ ಪ್ರಜಾಪ್ರಭುತ್ವದ ಕೆಲಸವಲ್ಲ. ಮತದಾನ ಮಾಡಿದ ಬಳಿಕವೇ ನಿಜವಾದ ಪ್ರಜಾಪ್ರಭುತ್ವದ ಕೆಲಸ ಆರಂಭವಾಗುತ್ತದೆ. ಸರ್ಕಾರ ಹಾಗೂ ವಿಪಕ್ಷಗಳ ಕುರಿತು ಜನರು ಸರಿಯಾಗಿ ಮೌಲ್ಯಮಾಪನ ಮಾಡಬೇಕು. ಮೌಲ್ಯಮಾಪನದ ಆಧಾರ ಮಾಡಿ ಯೋಚಿಸಿ ಮತದಾನ ಮಾಡಬೇಕು ಎಂದು ತಿಳಿ ಹೇಳಿದರು.
ಟಿವಿಗಳಲ್ಲಿ ಲೈವ್ ಆಗುತ್ತಿದೆ ಎಂಬ ಮಾತ್ರಕ್ಕೆ ಯಾವುದನ್ನೂ ಒಪ್ಪಬೇಡಿ. ಇತರೆ ಭಾಷೆಗಳಿಗೂ ಇದೇ ಸ್ಥಿತಿ ಇದೆ. ದೇಶದ ಪ್ರಜಾಪ್ರಭುತ್ವ ಬಹುತೇಕ ಅಂತ್ಯಗೊಳ್ಳುವ ಸ್ಥಿತಿಗೆ ಬಂದಿದೆ. ಉದಾಹರಣೆಗೆ ಟಿವಿಯ ನಿರೂಪಕರ ಭಾಷೆಯನ್ನು ಗಮನಿಸಿದರೆ ಡಿಸೆಂಟ್ ಧ್ವಿನಿಯನ್ನು ಎನಿಮಿ, ಆ್ಯಂಟಿ ನ್ಯಾಷನಲ್, ಅರ್ಬನ್ ನಕ್ಸಲ್ ಎಂದು ಕರೆಯಲಾಗುತ್ತಿದೆ. ಮಾಧ್ಯಮಗಳ ಎಲ್ಲಾ ಬಾಗಿಲು ಜನಸಾಮಾನ್ಯರಿಗೆ ಮುಚ್ಚಲಾಗಿದೆ.
ಭಾರತದ ಪ್ರಜಾಪ್ರಭುತ್ವವನ್ನು ಪ್ರೀತಿಸುವವರು ಪ್ರಜಾಪ್ರಭುತ್ವ ವಿರೋಧಿ ಮಾಧ್ಯಮಗಳ ವಿರುದ್ಧ ಬೀದಿಗಳಿದು ಹೋರಾಟ ಮಾಡಬೇಕು. ಇಂದು ಇದು ಸಾಧ್ಯವಿಲ್ಲ ಎಂದಾದರೆ ನಾಳೆ ಇದನ್ನು ಮಾಡಲೇಬೇಕು. ಮನೆಗಳಿಂದ ಇಂತಹ ಪತ್ರಿಕೆಗಳನ್ನು ಹರಿದುಹಾಕಬೇಕು. ಟಿವಿ ಚಾನೆಲ್ ಗಳ ಚಂದಾದಾರಿಕೆ ನಿಲ್ಲಿಸಬೇಕು.
ಬಹಳಷ್ಟು ಸುಳ್ಳನ್ನು ಪ್ರಜಾಪ್ರಭುತ್ವ ಹೆಸರಿನಲ್ಲಿ ಅನುಭವಿಸುವಂತಾಗಿದೆ. ಸಾಮಾನ್ಯ ಜನರಿಗೆ 20 ವರ್ಷಗಳಾದರೂ ನ್ಯಾಯ ಸಿಗುತ್ತಿಲ್ಲ. ಹಿಂದೂಸ್ತಾನದ ಇಂದಿನ ಮಾಧ್ಯಮ, ಪ್ರಜಾಪ್ರಭುತ್ವದ ಹತ್ಯೆ ಮಾಡುತ್ತಿವೆ. ಪ್ರತಿ ದಿನ ಪ್ರಜಾಪ್ರಭುತ್ವದ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಸಮಾಜದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಹಾಗಾದರೆ ಇಂತಹ ಹತ್ಯೆಯನ್ನು ಪ್ರತಿದಿನ ನೋಡಬೇಕೇ?
ಜನರು ಕಣ್ಣಿಗೆ ಕನ್ನಡಕ ಹಾಕಿಕೊಂಡಿಲ್ಲ. ಅವರಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿನ ಶಕ್ತಿ ಇದೆ ಎಂದು ಮಾರ್ಮಿಕವಾಗಿ ನುಡಿದರು. ಮಾಧ್ಯಾಮಗಳು, ಅದರ ಮಾಲೀಕರು, ಸಂಪಾದಕರು ಮೋದಿಯನ್ನು ಪ್ರಧಾನಿಯಾಗಿ ತೋರಿಸುವುದಕ್ಕಿಂತ ಹೆಚ್ಚಾಗಿ ಅವರನ್ನು ಅವತಾರಪುರುಷನನ್ನಾಗಿ ಮಾಡಿವೆ. ಮೋದಿ ತಮ್ಮ ಅವತಾರ ಪ್ರದರ್ಶಿಸುತ್ತಿದ್ದಾರೆ ಎಂದು ಕುಟುಕಿದರು.
ಕಾಶ್ಮೀರಿಗರನ್ನು ಅಪ್ಪಿಕೊಳ್ಳುತ್ತೇವೆ, ಕಾಶ್ಮೀರವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ ಎಂದು ಮೋದಿ ಹಾಗೂ ಅವರ ಸರ್ಕಾರ ಹೇಳುತ್ತಿದೆ. ನಾಳೆ ಇವರು ರಾಮ, ವಿಷ್ಣುವನ್ನು ನಿರ್ಮಿಸುತ್ತಾರೆ. ಕಾಶ್ಮೀರವನ್ನು ಸ್ವರ್ಗ ಮಾಡುವ ಇವರು ಮೊದಲು ಉತ್ತರ ಪ್ರದೇಶ, ಬಿಹಾರ ರಾಜ್ಯಗಳನ್ನು ಸ್ವರ್ಗ ಮಾಡಲಿ. ಅಲ್ಲಿ ಯುವಕರಿಗೆ ಬೇಕಾದ ವಿಶ್ವವಿದ್ಯಾಲಯ ನಿರ್ಮಿಸಲಿ. ಉತ್ತರ ಪ್ರದೇಶ, ಬಿಹಾರವನ್ನು ನರಕವನ್ನಾಗಿಸಿರುವವರು ಕಾಶ್ಮೀರವನ್ನು ಸ್ವರ್ಗ ಮಾಡುತ್ತೇವೆ ಎನ್ನುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರದ ಯುವಕರಲ್ಲಿ ಹಿಂದೂ, ಮುಸ್ಲಿಂ ಎಂದು ಪಾಠ ಮಾಡಲಾಗುತ್ತಿದೆ. ಅಲ್ಲಿ ದ್ವೇಷದ ರಾಜಕಾರಣ ಕಲಿಸಲಾಗುತ್ತಿದೆ. ಇದು ತಮಾಷೆಯಲ್ಲ. ಶ್ರೀ ಮಂತರೇನೋ ತಮ್ಮ ಮಕ್ಕಳನ್ನು ಅಮೆರಿಕಾ, ಇಂಗ್ಲೆಂಡ್ ನಂತಹ ವಿದೇಶದ ವಿಶ್ವವಿದ್ಯಾಲಯಗಳಿಗೆ ಓದಿಸಲು ಕಳುಹಿಸಿದ್ದಾರೆ. ಆದರೆ ಜನಸಾಮಾನ್ಯರು ಏನು ಮಾಡಬೇಕು?ಎಂದು ಪ್ರಶ್ನಿಸಿದರು. ಇದನ್ನು ಹಿಂದಿ ಪ್ರದೇಶದ ಯುವಕರು ಅರ್ಥಮಾಡಿಕೊಳ್ಳಬೇಕು ಎಂದರು.
ಭಾಷೆಯಿಂದ ಸಂಬಂಧ ಬೆಳೆಯುತ್ತದೆ. ಇದು ಎಲ್ಲಾ ಭಾಷಿಗರ ಬದುಕಲ್ಲಿಯೂ ಆಗುತ್ತದೆ. ಇಂಗ್ಲೀಷ್ ಅನ್ನು ಭಯದಿಂದ ಕಲಿಯಲಾಗುತ್ತದೆ. ಹಿಂದಿಯನ್ನು ಇಂಗ್ಲೀಷ್ ಗೆ ಪರ್ಯಾಯವಾಗಿ ಕಲಿತೆ. ಹಿಂದಿ ನನ್ನನ್ನು ಅಪ್ಪಿಕೊಂಡಿತು. ನನ್ನ ಹಿಂದೆ ಅಮ್ಮನ ಸೆರಗಿನಂತಿತ್ತು. ಎಂದಿಗೂ ಅದು ಭಯ ಹುಟ್ಟಿಸಲಿಲ್ಲ. ಯಾವುದೇ ಭಾಷೆಯಿಂದ ಹೆದರುವ ಅವಶ್ಯಕತೆಯಿಲ್ಲ. ಭಾಷೆಯಿಂದ ಹೆದರಿಸುವ ಅವಶ್ಯಕತೆಯೂ ಇಲ್ಲ. ಭಾಷೆ ಪ್ರೀತಿ ಮಮತೆ ಸಂಬಂಧ ಬೆಳೆಸಬೇಕಷ್ಟೆ
ಪತ್ರಕರ್ತ ರವೀಶ್ ಕುಮಾರ್ ಅವರ ಮಾತುಗಳು ಚಿಂತನೆಗೆ ಹಚ್ಚಿವೆ. ಅವರು ಸಮತೋಲಿತ ರೀತಿಯಲ್ಲಿ ಮಾತನಾಡಿದ್ದು ನೆರೆದವರಿಗೆ ಮೆಚ್ಚುಗೆಯಾಯಿತು. ಅವರ ಮಾತುಗಳ ನಂತರ ನಿರಂತರವಾಗಿ ಕೇಳಿಸಿದ ಮೆಚ್ಚುಗೆಯ ಕರತಾಡನೇ ಇದಕ್ಕೆ ಸಾಕ್ಷಿ…
Авиабилеты дешево от проверенных авиакомпаний! https://avia-bilet.online/ – купить авиабилеты недорого. Купить авиабилеты дешево, авиабилеты онлайн. Поиск от 728 проверенных авиакомпаний по всему миру! Самые популярные направления перелетов по самым низким ценам в интернете!