ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ) ಘೋಷವಾಕ್ಯದೊಂದಿಗೆ 2025ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿತವಾಗಿದೆ. ಫೆಬ್ರವರಿ 27ರಿಂದ ಮಾರ್ಚ್ 1ರ ತನಕ ಬೆಂಗಳೂರು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆಯಲಿದೆ.
2025ನೇ ರಾಷ್ಟ್ರೀಯ ತೋಟಗಾರಿಕಾ ಮೇಳದ ಈ ಬಾರಿಯ ಮುಖ್ಯ ವಿಷಯ “ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ)” ಆಗಿದೆ. ಪೌಷ್ಠಿಕಾಂಶಯುಕ್ತ ಬೆಳೆಗಳ ಮೂಲಕ ಪೌಷ್ಠಿಕತೆ ಹೆಚ್ಚಿಸುವ ತಂತ್ರಜ್ಞಾನ ಮತ್ತು ಕ್ರಮಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುವುದು ಎಂದು ರಾಷ್ಟ್ರೀಯ ತೋಟಗಾರಿಕೆ ಮೇಳ 2025 ರ ಆಯೋಜನಾ ಸಮಿತಿಯ ಅಧ್ಯಕ್ಷರೂ ಆಗಿರುವ ನಿರ್ದೇಶಕ ಡಾ. ತುಷಾರ್ ಕಾಂತಿ ಬೇಹೇರಾ ಅವರು ತಿಳಿಸಿದರು.
ಚಿತ್ರದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ ಪ್ರಚಾರ ಸಮಿತಿಯ ಅಧ್ಯಕ್ಷ ಡಾ. ನಂದೀಶ ಪಿ., ಐ ಐ ಹೆಚ್ ಆರ್ ನಿರ್ದೇಶಕ ಡಾ. ತುಷಾರ್ ಕಾಂತಿ ಬೇಹೇರಾ ರಾಷ್ಟ್ರೀಯ ತೋಟಗಾರಿಕಾ ಮೇಳ 2025ರ ಆಯೋಜನಾ ಕಾರ್ಯದರ್ಶಿ ಡಾ. ಶಂಕರ ಹೆಬ್ಬಾರ ಇದ್ದಾರೆ
ರೈತರಿಗೆ ಅಗತ್ಯಯುಕ್ತ ಮಾಹಿತಿ, ತಂತ್ರಜ್ಞಾನ, ಮತ್ತು ತೋಟಗಾರಿಕಾ ಬೆಳೆಗಳ ವಿವಿಧ ಅಂಶಗಳ ಕುರಿತ ಕಾರ್ಯಕ್ರಮಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅನುಕೂಲಕರ ತಂತ್ರಜ್ಞಾನಗಳನ್ನು ಪರಿಚಯಿಸುವ, ಮತ್ತು ಸಾಮಾಜಿಕವಾಗಿ ಹೊಂದಿಕೊಳ್ಳುವ, ಆರ್ಥಿಕವಾಗಿ ಲಾಭದಾಯಕ ಹಾಗೂ ಪರಿಸರಕ್ಕೆ ಅನುಕೂಲಕರ ತೋಟಗಾರಿಕಾ ಬೆಳೆಗಳ ಮೂಲಕ ಉತ್ಪಾದನೆ, ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಈ ಮೇಳ ಹೊಂದಿದೆ ಎಂದು ನಿರ್ದೇಶಕರು ವಿವರಿಸಿದರು.
ತೋಟಗಾರಿಕಾ ಉತ್ಪಾದನೆ
ಭಾರತದಲ್ಲಿ ತೋಟಗಾರಿಕಾ ಉತ್ಪಾದನೆ 350 ಮಿಲಿಯನ್ ಟನ್ ದಾಟಿದೆ. ಕೃಷಿ ಉತ್ಪಾದನೆಯಾದ 330 ಮಿಲಿಯನ್ ಟನ್ ಅನ್ನು ಮೀರಿಸಿದೆ. ಈ ಸಾಧನೆಯು ದೇಶದ ಪೌಷ್ಠಿಕ ಸುರಕ್ಷತೆಯನ್ನು ಸುಧಾರಿಸುವುದರ ಜೊತೆಗೆ, ಇತರ ಅಗತ್ಯವಿರುವ ದೇಶಗಳಿಗೆ ರಫ್ತು ಮಾಡುವ ಅವಕಾಶವನ್ನು ಒದಗಿಸಿದೆ ಎಂದು ಉಲ್ಲೇಖಿಸಿದರು.
ಐ ಐ ಹೆಚ್ ಆರ್ ಪ್ರಧಾನ ಕೃಷಿವಿಜ್ಞಾನಿ ಡಾ. ಶಂಕರ ಹೆಬ್ಬಾರ ಅವರು ನವೀನ ತಂತ್ರಜ್ಞಾನದ ಮೂಲಕ ಗುಣಮಟ್ಟದ ಸಸಿಗಳ ಉತ್ಪಾದನೆ ಕುರಿತು ವಿವರಿಸಿದರು
ಪ್ರದರ್ಶನ ಮಳಿಗೆಗಳು
ಸುಮಾರು 250 ಸಂಸ್ಥೆಗಳು ತೋಟಗಾರಿಕಾ ತಂತ್ರಜ್ಞಾನಗಳ ವಿವಿಧ ವಿಭಾಗಗಳಲ್ಲಿ ತಮ್ಮ ನಾವೀನ್ಯತೆಗಳನ್ನು ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶಿಸಲಿವೆ ಎಂದು ವಿವರಿಸಿದರು. ಸಂಸ್ಥೆಯು 250 ಕ್ಕೂ ಹೆಚ್ಚು ತಳಿಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ರಾಷ್ಟ್ರೀಯ ತೋಟಗಾರಿಕಾ ಮೇಳ 2025ರ ಆಯೋಜನಾ ಕಾರ್ಯದರ್ಶಿ ಡಾ. ಶಂಕರ ಹೆಬ್ಬಾರ ವಿವರಿಸಿದರು.
ನವೀನ ತಂತ್ರಜ್ಞಾನ
ತಳಿಗಳ ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಮೇಲ್ಫಸಲು ನಿರ್ವಹಣೆ, ಮೌಲ್ಯ ವೃದ್ಧಿ, ತೋಟಗಾರಿಕಾ ಯಂತ್ರೋಪಕರಣಗಳು ಮತ್ತು ಉಪಕರಣಗಳು ಸೇರಿವೆ. ಇದಲ್ಲದೆ, ICAR ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು (SAUs), ಖಾಸಗಿ ಕೈಗಾರಿಕೆಗಳು, ರೈತ ಉತ್ಪಾದಕರ ಸಂಘಗಳು (FPOs), ಸ್ವಾಯತ್ತ ಸಂಸ್ಥೆಗಳು (NGOs) ಮತ್ತು ಉದ್ಯಮಿಗಳು ತೋಟಗಾರಿಕೆಗೆ ಸಂಬಂಧಿಸಿದ ತಮ್ಮ ನವೀನ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ವಿಶೇಷ ಸ್ಥಾವರಗಳನ್ನು ಹೊಂದಿರುತ್ತಾರೆ ಎಂದು ಶಂಕರ ಹೆಬ್ಬಾರ ಹೇಳಿದರು.
ವಾಹನ ವ್ಯವಸ್ಥೆ
ಮೂರು ದಿನಗಳ ಪ್ರದರ್ಶನದಲ್ಲಿ 75,000 ಕ್ಕೂ ಹೆಚ್ಚು ರೈತರು ಮತ್ತು ತೋಟಗಾರಿಕೆ ಕ್ಷೇತ್ರದ ಇತರ ಭಾಗೀದಾರರು ಭಾಗವಹಿಸುವ ನಿರೀಕ್ಷೆಯಿದೆ. ಹತ್ತಿರದ ಬಸ್ ನಿಲ್ದಾಣವಾದ ಟಿ. ಬಿ. ಕ್ರಾಸ್ ನಿಂದ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಪ್ರಚಾರ ಸಮಿತಿಯ ಅಧ್ಯಕ್ಷರಾದ ಡಾ. ನಂದೀಶ ಪಿ. ವಿವರಿಸಿದರು.
ವೃದ್ದರು – ಅಶಕ್ತರಿಗೆ ವಿಶೇಷ ವಾಹನ
ಮೇಳದ ಒಳಾಂಗಣದಲ್ಲಿ ಹಿರಿಯ ನಾಗರಿಕರ ಸಹಾಯಕ್ಕಾಗಿ ಎಲೆಕ್ಟ್ರಿಕ್ ಬಗ್ಗಿ ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ರೈತರಿಗೆ, ಮುಂಚಿತ ಮಾಹಿತಿ ನೀಡಿದರೆ ವಸತಿ ವ್ಯವಸ್ಥೆ ಮಾಡಲಾಗುವುದು.ಮೇಳದ ವೇಳೆ IIHR ತಂತ್ರಜ್ಞಾನಗಳ ರಾಯಭಾರಿಗಳಾಗಿರುವ ಪ್ರಗತಿಪರ ರೈತರನ್ನು ಗೌರವಿಸಲಾಗುವುದು. ಇದಲ್ಲದೆ, BESTT HORT, ಅಣಬೆ ಪ್ರಯೋಗಾಲಯ, ಮತ್ತು ತೋಟಗಾರಿಕಾ ಬೆಳೆಗಳ ಸಂರಕ್ಷಿತ ಕೃಷಿಯ ಕೇಂದ್ರವನ್ನು ಆಸಕ್ತರು ವೀಕ್ಷಿಸಬಹುದು ಎಂದು ನಂದೀಶ ತಿಳಿಸಿದರು.
Bangalore cityli madatiralla Elle ecchu agriculture madthare alli madabeku adu bitti city li madatahare