ಸಾಹಿತ್ಯ

ಇಂಟರ್ ನ್ಯಾಷನಲ್ ಬುಕರ್ ಪ್ರಶಸ್ತಿ ಬಂದಿರುವುದು ಯಾರಿಗೆ ?

ದಸರಾ ಉದ್ಘಾಟನೆಗೆ ದೀಪಾ ಭಸ್ತಿ ಅವರನ್ನೂ ರಾಜ್ಯ ಸರ್ಕಾರ ಆಹ್ವಾನಿಸಬೇಕಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ಅನುವಾದಕರನ್ನು ಕರೆಯಲೇ ಬೇಕು ಅಂತಿಲ್ಲ; ಮೂಲ ಲೇಖಕರನ್ನು ಕರೆದಿದ್ದಾರಲ್ಲ ಎಂದು ಹೇಳುತ್ತಿದ್ದಾರೆ. ಯಾವುದು ಸರಿ ? ಎಂಬ ಪ್ರಶ್ನೆ ನನ್ನನ್ನೂ ಕಾಡಿತು. ವೈಯಕ್ತಿಕವಾಗಿ ನನ್ನ ದೃಷ್ಟಿಯಲ್ಲಿ ಇಬ್ಬರನ್ನೂ ಆಹ್ವಾನಿಸಬೇಕು.
ಇದೇ ಸಂದರ್ಭದಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರಶಸ್ತಿಯನ್ನು ಕೊಡುವುದು ಯಾವ ಉದ್ದೇಶಕ್ಕಾಗಿ ? ಈ ಪ್ರಶ್ನೆಯು ಮಹತ್ವದ್ದು ! ಏಕೆಂದರೆ ಅನುವಾದ ಕಲೆಯನ್ನು ಪುರಸ್ಕರಿಸಿ, ಉತ್ತೇಜಿಸುವ ಸಲುವಾಗಿಯೇ ಈ ಪ್ರಶಸ್ತಿ ಸ್ಥಾಪಿತವಾಗಿದೆ. ಅಲ್ಲಿಗೆ ಇಂಗ್ಲಿಷ್ ಅನುವಾದದ ಹಾರ್ಟ್ ಲ್ಯಾಂಪ್ ಮತ್ತು ಅನುವಾದಕಿ ದೀಪಾ ಭಸ್ತಿಯವರಿಗೆ ಪ್ರಶಸ್ತಿ ಸಂದಿದೆ. ಹೀಗಿದ್ದರೂ ಪ್ರಶಸ್ತಿ ನೀಡುವ ಬುಕರ್ ಪ್ರತಿಷ್ಠಾನದವರು ಪ್ರಶಸ್ತಿಯ ಹಣವನ್ನು ಅನುವಾದಕರು ಮತ್ತು ಮೂಲ ಲೇಖಕರಿಗೂ ನೀಡುತ್ತಾರೆ. ಇದು ಶ್ಲಾಘನೀಯ ಸಂಗತಿ. ಮೂಲವಿಲ್ಲದೇ ಅನುವಾದ ಮೂಡುವುದಾದರೂ ಹೇಗೆ ? ಹೀಗಿದ್ದೂ “ಹಾರ್ಟ್ ಲ್ಯಾಂಪ್” ಗೆ ಸಂದಿರುವ ಪ್ರಶಸ್ತಿಯು ಅನುವಾದವನ್ನು, ಅನುವಾದಕರನ್ನು ಉತ್ತೇಜಿಸುವ ಸಲುವಾಗಿಯೇ ಸ್ಥಾಪಿತವಾದ ಪ್ರಶಸ್ತಿ ಎಂಬುದನ್ನು ಮರೆಯಬಾರದು ಅಲ್ಲವೇ ?
ಅಲ್ಲಿಗೆ ಪ್ರಶಸ್ತಿ ಸ್ಥಾಪಕರೇ ತಾರತಮ್ಯ ಮಾಡದಿರುವಾಗ ಬುಕರ್ ಪ್ರಶಸ್ತಿ ಕಾರಣಕ್ಕಾಗಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ ಅವರು ದೀಪಾ ಭಸ್ತಿ ಅವರನ್ನೂ ಆಹ್ವಾನಿಸಲೇಬೇಕು ಅಲ್ಲವೇ

Leave a Reply

Your email address will not be published. Required fields are marked *

error: Content is protected !!