Home ಸಾಹಿತ್ಯಇಂಟರ್ ನ್ಯಾಷನಲ್ ಬುಕರ್, ಪ್ರಶಸ್ತಿಯೋ, ಬಹುಮಾನವೋ‌ ?

ಇಂಟರ್ ನ್ಯಾಷನಲ್ ಬುಕರ್, ಪ್ರಶಸ್ತಿಯೋ, ಬಹುಮಾನವೋ‌ ?

by Kumara Raitha
0 comments

ಇಂಗ್ಲಿಷಿಗೆ ಅನುವಾದ ಸಾಹಿತ್ಯ‌ ಮತ್ತು ಅನುವಾದಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ “ಇಂಟರ್ ನ್ಯಾಷನಲ್ ಬುಕರ್ ಪ್ರೈಜ್” ಸ್ಥಾಪನೆಯಾಗಿದೆ. ಇದನ್ನು ಅವರು ಪ್ರಶಸ್ತಿ ಎಂದು ಹೇಳುವುದಿಲ್ಲ. ಪ್ರೈಜ್ ಅಂದರೆ ಬಹುಮಾನ ಎಂದು ಹೇಳುತ್ತಾರೆ. ಇದರಲ್ಲಿ‌ ಮುಖ್ಯವಾಗಿ ಕೆಲವು ಷರತ್ತುಗಳಿವೆ. ಮೊದಲನೇಯದು ಅನುವಾದಿಸಲು ಆರಿಸಿಕೊಂಡ ಸಾಹಿತ್ಯ ಯಾವುದೇ ಭಾಷೆಯದ್ದಾಗಿರಬಹುದು ಆದರೆ ಇಂಗ್ಲಿಷಿಗೆ ನೇರವಾಗಿ ಅನುವಾದವಾಗಿರಬೇಕು. ಇಂಗ್ಲೆಡಿನಲ್ಲಿಯೇ ಅಲ್ಲಿನ ಪ್ರಕಾಶನ ಸಂಸ್ಥೆಯಿಂದಲೇ ಮುದ್ರಿತವಾಗಿ, ಪ್ರಕಟವಾಗಿರಬೇಕು, ಪ್ರೈಜ್ ಪ್ರದಾನ ಮಾಡುವ ಸಮಯದಲ್ಲಿ ಮೂಲ ಲೇಖಕರು, ಅನುವಾದಕರು ಬದುಕಿರಬೇಕು. ಪ್ರೈಜ್ ಹಣವನ್ನು ಮೂಲ ಲೇಖಕರಿಗೆ ಮತ್ತು ಅನುವಾದಕರಿಗೆ ಸಮಾನವಾಗಿ ಹಂಚಲು ಇಬ್ಬರ ಒಪ್ಪಿಗೆಯೂ ಇರಬೇಕು.
ಪ್ರಮುಖವಾಗಿ ಗಮನಿಸಬೇಕಾದ್ದು ಇಂಗ್ಲಿಷ್‌ಗೆ ಅನುವಾದಿಸಲ್ಪಟ್ಟು ಯುನೈಟೆಡ್ ಕಿಂಗ್ಡಮ್ ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾದ ಒಂದು ಕಾದಂಬರಿ ಸಣ್ಣ ಕಥಾ ಸಂಕಲನ ಕೃತಿಗೆ ವಾರ್ಷಿಕವಾಗಿ ನೀಡಲಾಗುವ ಬಹುಮಾನ. “ಬಹುಮಾನ” ಎಂಬ ಪದವನ್ನು ಅದರ ಅಧಿಕೃತ ಶೀರ್ಷಿಕೆ ಮತ್ತು ವಿವರಣೆಗಳಲ್ಲಿಯೇ ಬಳಸಲಾಗುತ್ತದೆ. ಲೇಖಕ ಮತ್ತು ಅನುವಾದಕರ ನಡುವೆ ಸಮಾನವಾಗಿ £50,000 ನಗದು ಬಹುಮಾನ ಹಂಚಿಕೆಯಾಗುತ್ತದೆ. ಶಾರ್ಟ್ ಲಿಸ್ಟ್ ಆಗಿರುವ ಕೃತಿಗಳು ಮತ್ತು ಅವುಗಳ ಅನುವಾದಕರಿಗೂ ನಗದು ಬಹುಮಾನ ನೀಡಲಾಗುತ್ತದೆ. ಇದರ ಮೊತ್ತ £2,500. ಇದನ್ನು ಸಹ ಮೂಲ ಲೇಖಕರು, ಅನುವಾದಕರಿಗೆ ಸಮಾನವಾಗಿ ಹಂಚಲಾಗುತ್ತದೆ.
ಬುಕರ್ ಪ್ರೈಜ್ ಅನ್ನು ಸಾಹಿತ್ಯಕ ವಲಯದಲ್ಲಿ ಕೆಲವೊಮ್ಮೆ ಆಕಸ್ಮಿಕವಾಗಿ ಪ್ರಶಸ್ತಿ ಎಂದು ಕರೆಯಲಾಗುತ್ತದೆಯಾದರೂ, “ಬಹುಮಾನ” ಎಂಬುದೇ ಸೂಕ್ತ ಪದ. ಮುಖ್ಯವಾಗಿ ಈ ಪ್ರೈಜ್ ಅನುವಾದಕರು ಇಂಗ್ಲಿಷಿಗೆ ಹೆಚ್ಚುಹೆಚ್ಚು ಸಾಹಿತ್ಯ ಅನುವಾದಿಸಲಿ, ಅಲ್ಲಿಯ ಸ್ಥಳೀಯ ಪ್ರಕಾಶಕರಿಗೆ ನೇರವಾಗಿ ಅನುಕೂಲವಾಗಲಿ ಎಂಬ ಇರಾದೆಯೂ ಬುಕರ್ ಪ್ರೈಜ್ ನೀಡುವ ಸಂಸ್ಥೆಗೆ ಇದೆ.

You may also like

Leave a Comment

error: Content is protected !!