ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.  ಈ ಸಂಬಂಧ ನಿಗಮ ಸುತ್ತೋಲೆ ಹೊರಡಿಸಿದೆ.

ಪ್ರಸ್ತುತ  ಶೈಕ್ಷಣಿಕ ವರ್ಷದಲ್ಲಿ ದಿನಾಂಕ 01.03.2025 ರಿಂದ ಕರ್ನಾಟಕದ  ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ದಿನಾಂಕ:21.03.2025 ರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿವೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರ ವಿದ್ಯಾಸಂಸ್ಥೆಗಳ  ಪರೀಕ್ಷಾ ಕೇಂದ್ರಗಳು  ನಿಯೋಜನೆಯಾಗಿರುತ್ತದೆ.

ಕೆ.ಎಸ್‌ ಆರ್‌ ಟಿ ಸಿ ಹೊರಡಿಸಿರುವ ಸುತ್ತೋಲೆ

 ಪರೀಕ್ಷೆಗಳ  ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಿ  ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗಳು ದಿನಾಂಕ 01.03.2025 ರಿಂದ 20.03.2025 ರವರೆಗೆ ನಿಗದಿಯಾಗಿವೆ.  ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ದಿನಾಂಕ 21.03.2025 ರಿಂದ 04.04.2025 ರವರೆಗೆ ನಿಗದಿಯಾಗಿವೆ. ಈ ಪರೀಕ್ಷೆಗಳಿಗೆ  ಹಾಜರಾಗುವ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ” ಪರೀಕ್ಷಾ ಪ್ರವೇಶ ಪತ್ರ”ವನ್ನು ಬಸ್ಸಿನ ಕಂಡಕ್ಟರ್‌ ಗೆ  ತೋರಿಸಿ  ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಇದರ ಬಗ್ಗೆ ನಿಗಮದ ಎಲ್ಲ ಚಾಲಕರು ಹಾಗೂ ಮಾಹಿತಿ ನೀಡಲು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ. ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ಮಾಡಬೇಕೆಂದು ಸೂಚಿಸಲಾಗಿದೆ.

Similar Posts

1 Comment

  1. ತುಂಬಾ ಚೆನ್ನಾಗಿದೆ ಸರ್ ನೀವು ಪಿಯುಸಿ ದ್ವಿತೀಯ ಪಿಯುಸಿ ಎಲ್ ಎಲ್ ಸೀ ಬಾಲಕರಿಗೆ ಬಸ್ಸನ್ನು ಫ್ರೀ ಮಾಡಿದ್ದಕ್ಕಾಗಿ ತುಂಬಾ ಚೆನ್ನಾಗಿ ಆಯ್ತು ಏಕೆಂದರೆ ಬಾಲಕರು ಬಸ್ಸು ಸಿಗಲಾರದೆ ಪರೀಕ್ಷೆಗೆ ಲೇಟಾಗಿ ಹೋಗುತ್ತಿದ್ದರು ಈಗ ಬಾಲಕರಿಗೆ ಫ್ರೀ ಬಸ್ ಆಗಿದ್ದಕ್ಕಾಗಿ ಎಕ್ಸಾಮ್ ಗೆ ಸರಿಯಾದ ಸಮಯಕ್ಕೆ ಹೋಗಬಹುದು

    Thank you sir 🙏

Leave a Reply

Your email address will not be published. Required fields are marked *