ಪರಿಸರ

ಕಬಿನಿ ರಕ್ಷಿಸಿ ಹೋರಾಟ; ಲಕ್ಷಾಂತರ ದೀವಿಗೆಗಳು

“ಕಬಿನಿ ರಕ್ಷಿಸೋಣ; ಇದು ನಮ್ಮೆಲ್ಲರ ಹೊಣೆ” ಘೋಷವಾಕ್ಯ ಎಲ್ಲೆಡೆ ಮೊಳಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಂದೋಲನವೇ ಆಗಿದೆ. “Save Kabini” ಹೆಸರಿನಲ್ಲಿ ಕ್ಯಾಂಪೇನ್ ಶುರುವಾಗಿದೆ. ಯುವಜನತೆಯೂ ಸೇರಿದಂತೆ ಲಕ್ಷಾಂತರ ಮಂದಿ ಬೆಂಬಲ ಸೂಚಿಸುತ್ತಿದ್ದಾರೆ.

ಕಬಿನಿ ವಲಯದ ಸೂಕ್ಷ್ಮ ಪರಿಸರದಲ್ಲಿ ಅನೇಕ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಅಕ್ರಮ ರೆಸಾರ್ಟುಗಳದೇ ಹಾವಳಿಯಾಗಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚಿರುವ ಅವುಗಳನ್ನು ತೆರವುಗೊಳಿಸಬೇಕು, ಕಬಿನಿ ಕಾಡನ್ನು, ವನ್ಯಪ್ರಾಣಿಗಳನ್ನು ರಕ್ಷಿಸಬೇಕು” ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.

Kabini

“ಕಬಿನಿ ಅಪಾಯದಲ್ಲಿದೆ. 20 ಅಕ್ರಮ ರೆಸಾರ್ಟ್ಗಳಿಂದ ನೀರಿನ ಮಟ್ಟ 4 ಅಡಿ ಇಳಿಕೆಯಾಗಿದೆ ಕಾಡುಗಳು ನಾಶವಾಗುತ್ತಿವೆ. ಇನ್ನೂ ಕಾಯುವುದಕ್ಕೆ ಸಾದ್ಯವಿಲ್ಲ” ಎಂದಿರುವ ಹೋರಾಟಗಾರರು ಶುಕ್ರವಾರ, ಜುಲೈ 25 ಜಾಥಾ ಹೊರಡುತ್ತಿದ್ದಾರೆ. ಅಂದು ಬೆಳಿಗ್ಗೆ 11:00 ಗಂಟೆಗೆ ಮೈಸೂರು ನಗರದ ಬಳ್ಳಾಳ ವೃತ್ತದಿಂದ ಜಾಥಾ ಹೊರಡಲಿದೆ. ಮೆಟ್ರೊಪೊಲ್ ಸರ್ಕಲ್ ಸನಿಹ ಇರುವ ಮುಖ್ಯ ಅರಣ್ಯಾಧಿಕಾರಿ (CCF) ಕಚೇರಿಯನ್ನು ತಲುಪಿ ಮನವಿ ಸಲ್ಲಿಸಲಾಗುತ್ತದೆ” ಎಂದು ಹೋರಾಟದ ಮುಂಚೂಣಿಯಲ್ಲಿ ಇರುವವರು ತಿಳಿಸಿದರು.

Save Kabini
ಹೆಚ್ಚಿನ ಮಾಹಿತಿಗೆ
ವಿನೋದ್ – ರೀಪ್ ಬೆನೆಫಿಟ್ ಫೌಂಡೇಶನ್
☎️ +91 77952 93211

3 thoughts on “ಕಬಿನಿ ರಕ್ಷಿಸಿ ಹೋರಾಟ; ಲಕ್ಷಾಂತರ ದೀವಿಗೆಗಳು

  • Please save the kabini forest 🌳 area and save wildlife

    Reply
  • Save wildlife 🙏🙏🙏🙏

    Reply
  • Vasanthkumar Mysoremath

    Authorities in charge of protecting reserve forests are themselves hand in glove with violators. They are aware of the illegal activities because either they have received money to look the other way or some political interventions prevents them from taking action. It is like the proverbial “you scratch my back, I will scratch your back”.

    Reply

Leave a Reply

Your email address will not be published. Required fields are marked *

error: Content is protected !!