ಬೆಂಗಳೂರಿನಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. ಇದಕ್ಕೇನು ಕಾರಣ ಎಂಬುದು ಹಲವರ ಪ್ರಶ್ನೆ. ಮೊದಲನೇಯ ಕಾರಣ ಏನೆಂದರೆ ಸಮುದ್ರಮಟ್ಟದಿಂದ ಬೆಂಗಳೂರು 900 ಮೀಟರ್ ಎತ್ತರದಲ್ಲಿದೆ. ಇದು ಕೂಡ ಒಂದು ಸಣ್ಣ ಗಿರಿಧಾಮ. ಇನ್ನೊಂದು ಕಾರಣ ನೆಲಗಾಳಿಯೆನ್ನುವುದು ಈಶಾನ್ಯ ಅಥವಾ ಉತ್ತರ ದಿಕ್ಕಿನಿಂದ ಬೀಸುತ್ತಿದೆ. …
ಪರಿಸರ
ಯುದ್ಧದ ಬಗ್ಗೆ ಹಲವರು ಭಾವೋದ್ವೇಗದಿಂದ ಮಾತನಾಡುತ್ತಿರುತ್ತಾರೆ. “ಆ ನೆರೆಯ ರಾಷ್ಟ್ರಕ್ಕೆ ಬುದ್ದಿ ಕಲಿಸಬೇಕಾದರೆ ಯುದ್ಧವಾಗಬೇಕು” ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿರುತ್ತಾರೆ. ಒಂದುವೇಳೆ ಯುದ್ಧ ಸಂಭವಿಸಿದರೆ ಅದರ ಪರಿಣಾಮಗಳ ಬಗ್ಗೆ ಅವರು ಯೋಚಿಸಿರುವುದಿಲ್ಲ. ಇದು ವಿವಿಧ ಉತ್ಪಾದಕ ರಂಗಗಳ ಮೇಲೆ ಕೆಟ್ಟ ಪ್ರಭಾವ ಉಂಟು …
ಇಂದು ವಿಶ್ವ ಹಾವುಗಳ ದಿನ. ಇಂಥ ಸಂದರ್ಭದಲ್ಲಿ ಹಾವುಗಳ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವುದು ಅಗತ್ಯ. ಹಾವುಗಳ ಸ್ವಭಾವಗಳನ್ನು ಅರಿಯುವುದು ಮತ್ತೊಬ್ಬರಿಗೆ ತಿಳಿಸುವುದು ಅತ್ಯಗತ್ಯ. ಈ ದಿಶೆಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಘಟನೆ ೧ ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ …
ನೈಋತ್ಯ ಮಾನ್ಸೂನ್ 2022 “ಸಾಮಾನ್ಯ” ಎಂದು ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ಭವಿಷ್ಯ ನುಡಿದಿದೆ. ಅದು ಭಾರತಕ್ಕೆ ಸತತ ನಾಲ್ಕನೇ ಸಾಮಾನ್ಯ ಮಾನ್ಸೂನ್ ಆಗಲಿದೆ. ನೈಋತ್ಯ ಮಾನ್ಸೂನ್ (ಜೂನ್-ಸೆಪ್ಟೆಂಬರ್) ಮಳೆಯು ದೀರ್ಘಾವಧಿಯ ಸರಾಸರಿ (LPA) 880.6 ಮಿಲಿಮೀಟರ್ಗಳ 98 ಪ್ರತಿಶತದಷ್ಟು (+/- …
ಶರದೃತು ದಿನಗಳ ಮುಂಜಾವು ಎಲ್ಲ ಮುಂಜಾವುಗಳಂತಲ್ಲ. ಈ ಸಮಯದಲ್ಲಿ ತೇಲಿತೇಲಿ ಬರುವ ತಂಗಾಳಿಗೆ ಮುಖವೊಡ್ಡಿ ಕಾಫಿ ಹೀರುವುದೆಂದರೆ ಅದೊಂದು ಅಪೂರ್ವ ಅನುಭೂತಿ. ಕಾಫಿ ಹೀರುವುದೆಂದರೆ ಅದೊಂದು ಧ್ಯಾನ. ಇನ್ನೂ ಪೂರ್ಣ ಬೆಳಗಾಗಿರುವುದಿಲ್ಲ. ಎರಡು ಅಂಗೈಗಳಲ್ಲಿ ಹಿಡಿದ ಸ್ಟೀಲ್ ಲೋಟದಲ್ಲಿ ಹಬೆಯಾಡುತ್ತಿರುವ ಬಿಸಿಯಾಗಿರುವ …
ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ ಬಂಗಾರದ ಎಸಳುಗಳಂತೆ ಕಾಣುತ್ತಿದ್ದವು. ಶುಭ್ರ ನೀಲಾಕಾಶ. ತೇಲಿ ಬರುತ್ತಿದ್ದ ತಂಗಾಳಿ, ಹೊಂಗೆ, ಬುಗುರಿ ಮರದ ನೆರಳು. ಬದುವಿನ ಮೇಲೆ ಒಂದೆರಡು ಇಂಚಿದ್ದ ಹಸಿರುಹುಲ್ಲು. ಅದರ ಮೇಲೆ ನನ್ನ ತಾಯಿ, ಸೋದರ ಮಾವಂದಿರು, ನನ್ನ ತಮ್ಮ …
ಮೇಲುಕಾಮನಹಳ್ಳಿ ತಲುಪುತ್ತಿದ್ದಂತೆ ಕಾಡಿನಲ್ಲಿ ಕಾರಿನ ವೇಗ ತಗ್ಗಿತು. ಬೆಂಕಿಯಿಂದ ಬಸವಳಿದಿದ್ದ ಕಾಡು ಚೇತರಿಸಿಕೊಳ್ಳತೊಡಗಿದ್ದು ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ಸುಟ್ಟುಗಾಯಗಳ ಚಹರೆ ಬೇಗ ಮರೆಯಾಗುವುದಿಲ್ಲ. ಇದರಿಂದ ಕಾಡು ಕೊರಗುತ್ತಿದೆಯೇನೊ ಎಂದು ಭಾಸವಾಗುತ್ತಿತ್ತು. ನಿರಂತರವಾಗಿ ಬಿದ್ದ ಮಳೆ, ವೈದ್ಯರಂತೆ ಕೆಲಸ ಮಾಡುತ್ತಿತ್ತು. ಹಲವೆಡೆ ಹಸಿರು …
ಕೆಲವು ದಿನಗಳ ಹಿಂದಿನ ಸಂಗತಿ…. ಕುದುರೆಮುಖ ಬೆಟ್ಟದ ಬುಡದಲ್ಲಿದ್ದೆ. ಅಲ್ಲೊಂದು ಪುಟ್ಟ ಅಂಗಡಿ. ಮಾತನಾಡುತ್ತಾ ನಿಂತವನ ಕಾಲ ಬಳಿ ಈ ನಾಯಿ ಬಂದು ನಿಂತಿತು. ಇದು ನಮ್ಮ ಮನೆಯಲ್ಲಿದ್ದ ರವಿ (ನಾಯಿಯ ಹೆಸರು) ನೆನಪಿಸಿತು. ಅಂಗಡಿಯಿಂದ ಬಿಸ್ಕೇಟ್ ಪ್ಯಾಕ್ ತೆಗೆದುಕೊಂಡೆ. ದಿಟ್ಟಿಸಿ …
ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಬಿದ್ದಿದ್ದೇವೆ. ರಾಮ, ಮಾಯಾಜಿಂಕೆಯ ಬೆನ್ನುಹತ್ತಿದ ಹಾಗೆ. ಅದು ಸಿಕ್ಕೇಬಿಟ್ಟಿತು ಎನಿಸುತ್ತದೆ. ಆದರೆ ಸಿಗುವುದಿಲ್ಲ. ಈಗ ಜಗತ್ತಿನ ಮುಂದಿರುವ ಅಭಿವೃದ್ಧಿಯೂ ಇದೇ ಮಾದರಿಯದು. ಲಕ್ಷಾಂತರ ಕೋಟಿ ರೂಪಾಯಿಗಳ ವೆಚ್ಚದ ದೊಡ್ಡದೊಡ್ಡ ಯೋಜನೆಗಳನ್ನು ರೂಪಿಸಲಾಗುತ್ತದೆ. ಅವುಗಳನ್ನು ಜಾರಿಗೊಳಿಸಲು ಅಧಿಕಾರ …
ಬಂಡೀಪುರದಲ್ಲಿ ಬೆಳಗ್ಗೆ ಇಳಿದಾಗ ಸೂರ್ಯ, ಆಗಷ್ಟೆ ಮುಖ ತೊಳೆದು ಮುಗುಳ್ನಗೆ ಸೂಸುವ ಕಂದಮ್ಮನಂತೆ ಹೊರಬರುತ್ತಿದ್ದ. ಅವನಿಗೆ ಹಾಯೆನ್ನಿಸುವಂತೆ ತಂಗಾಳಿ ಬೀಸುತ್ತಿತ್ತು. ಜಿಂಕೆಗಳಿಗೆ ಆ ಎಳೆಯ ಸೂರ್ಯನನ್ನು ನೋಡಿ ಅದೇನು ಖುಷಿಯೋ ನಿಂತಲ್ಲಿ ನಿಲ್ಲದೇ ಚಂಗನೆ ನೆಗೆಯುತ್ತಿದ್ದೆವು. ಅವುಗಳ ಚಿನ್ನಾಟ ಸೆರೆಹಿಡಿಯಲು ಕ್ಯಾಮೆರಾ …
ಬಂಡೀಪುರ ಹುಲಿ ಸಂರಕ್ಷಿತ ವಿಸ್ತಾರ ಅರಣ್ಯದ ಏರುತಗ್ಗು, ಹಾವಿನಂತೆ ನುಲಿದ ರಸ್ತೆಗಳಲ್ಲಿ ಜೀಪು ನಿಧಾನವಾಗಿ ಸಾಗುತ್ತಿತ್ತು. ಬೆಳಗ್ಗೆ 8 ರಚಸುಮಾರಿಗೆ ಹೊರಟ್ಟಿದ್ದು. ಆಗಲೇ ಮಧ್ಯಾಹ್ನ 3 ಗಂಟೆ ಕಳೆದಿತ್ತು. ಜಾರುರಸ್ತೆಗಳಲ್ಲಿ ಬ್ರೇಕು ಕಿರಕಿರನೇ ಸದ್ದು ಮಾಡುತ್ತಿತ್ತು. ಏರಿನಲ್ಲಿ ಇಂಜಿನ್ ತುಸು ಏದುಸಿರು …
“ನಾಡವೈದ್ಯರಿಗೆ ಗಿಡಮೂಲಿಕೆಗಳ ಬಗ್ಗೆ ಇದ್ದ ಜ್ಞಾನ ಅಪಾರ. ಆದರೆ ಅದೆಷ್ಟೋ ಅಮೂಲ್ಯ ಮಾಹಿತಿ ದಾಖಲೀಕರಣವಾಗಿಲ್ಲ” ಎಂದು ಪರಿಸರತಜ್ಞ ಪೂರ್ಣಚಂದ್ರ ತೇಜಸ್ವಿ ವಿಷಾದಿಸುತ್ತಿದ್ದರು. ಅರಣ್ಯದಲ್ಲಿನ ಔಷಧಯುಕ್ತ ಗಿಡಗಂಟೆ, ಬೇರುಬಳ್ಳಿಗಳ ಬಗ್ಗೆ ಇವರುಗಳಿಗೆ ತಿಳಿದಿತ್ತು. ಯಾವುದು ಯಾವ ಕಾಯಿಲೆಗೆ ಮದ್ದು ಎಂದು ಪಾರಂಪಾರಿಕ ತಿಳಿವಳಿಕೆಯಿಂದ …
ಪೋಟೋ ತೆಗೆದ ಮೇಲೆ ಅದನ್ನು ನಾವು ನಾಲ್ಕು ಗೋಡೆಗಳ ನಡುವಿನ ಒಂದು ಪೇಪರ್ ತುಂಡಿನಂತೆ ನೋಡ್ತೀವಿ. ಈ ವಾತಾವರಣ ನಮ್ಮಗಿಲ್ಲಿ ಯಾವ ಅನುಭವವನ್ನು ಕೊಡುತ್ತೋ ಅದೇ ಅನುಭೂತಿಯನ್ನು ಅಲ್ಲಿಯೂ ನೀಡಬೇಕು -ಪೂರ್ಣಚಂದ್ರ ತೇಜಸ್ವಿ ಚಿತ್ರಕಲಾ ಪರಿಷತ್, ಭಾರತ ಯಾತ್ರಾ ಕೇಂದ್ರ ಮತ್ತು …
