ಕಾಸರಗೋಡಿನಲ್ಲಿ ಕನ್ನಡ – ತುಳು ಸ್ಥಳನಾಮಗಳ ಬದಲಾವಣೆ ಬಗ್ಗೆ ಆಕ್ರೋಶ ಉಂಟಾಗಿದೆ. ಇದರಿಂದ ಕೇರಳ ಸರಕಾರ ವಿಚಲಿತವಾಗಿದೆ. “ಕಾಸರಗೋಡಿನ ಹಳ್ಳಿಗಳ ಕನ್ನಡ ಹೆಸರುಗಳನ್ನು ಬದಲಿಸುವ ನಿರ್ಧಾರವನ್ನು ಕೇರಳ ಸರಕಾರ ಕೈಗೊಂಡಿಲ್ಲ” ಎಂದು ಅಲ್ಲಿನ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ಇನ್ನು ಮಂಜೇಶ್ವರದ …
ರಾಜಕೀಯ
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು ಕೇರಳ ವಿಧಾನಸಭೆಯಲ್ಲಿ ಕರ್ನಾಟಕದ ರಾಷ್ಟ್ರಕವಿ ಗೋವಿಂದ ಪೈಗಳ ಕಾವ್ಯದ ಸಾಲುಗಳನ್ನು ವಾಚಿಸಿದರು ” ನಾವು ನೀವೆಂಬ ಹಳೆಬೇರು ಅಳಿಸು, ಸರಿಸಮಾನ ಸೌಂದರ್ಯದಿ ಸೌಹಾರ್ದದಿ ಐಕ್ಯತೆಯಿಂದ ಐಕ್ಯಮಂತ್ರದಿ ಬಾಳುವುದೇ ತಾಯಿ ಇಳೆಯ ಹೆಬ್ವಯಕೆಯ ಮರ್ಮ” ಹೀಗೆ …
ನಿಮಗೆ ನೆನಪಿರಬಹುದು. ಕೆಲವು ವರ್ಷಗಳ ಹಿಂದೆ ಕನ್ನಡ ಚಳವಳಿಗಾರರು ಬೆಂಗಳೂರಿನಲ್ಲಿ ಇಂಗ್ಲಿಷ್ – ಹಿಂದಿ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಅವರಿಗೇನೂ ಈ ಭಾಷೆಗಳ ಮೇಲೆ ದ್ವೇಷವಿರಲಿಲ್ಲ. ಕನ್ನಡಾಭಿಮಾನ ಪ್ರದರ್ಶಿಸಿದ ಕಾರಣಕ್ಕೆ ಪೊಲೀಸ್ ಕೇಸಿಗೂ ಗುರಿಯಾದರು. ನಾಮಫಲಕದಲ್ಲಿ ಮೊದಲು ಇಂಗ್ಲಿಷ್ ಅಥವಾ ಹಿಂದಿಯಿದ್ದರೆ …
ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಎಲ್ಲ ಪಠ್ಯ ವಿಷಯಗಳನ್ನೂ ಕನ್ನಡದಲ್ಲಿಯೇ ಬೋಧಿಸಬೇಕು. ಇಂಗ್ಲಿಷ್, ಹಿಂದಿ ಪಠ್ಯಗಳ ಅರ್ಥವನ್ನೂ ಕನ್ನಡದಲ್ಲಿಯೇ ಹೇಳಬೇಕು. ಹೀಗೆ ಮಾಡುವುದರ ಬದಲು ಸಮಾಜಶಾಸ್ತ್ರ,ವಿಜ್ಞಾನ ಗಣಿತ ಜೊತೆಗೆ ಇಂಗ್ಲಿಷ್ ವಿಷಯಗಳನ್ನೂ ಮಲೆಯಾಳದಲ್ಲಿಯೇ ಬೋಧಿಸಲು ಶುರು ಮಾಡಿದರೆ ವಿದ್ಯಾರ್ಥಿಗಳ ಸ್ಥಿತಿ ಏನಾಗಬಹುದು ? …
ನಿನ್ನೆ ರಾತ್ರಿ ಗೆಳೆಯರೊಬ್ಬರು ಕರೆ ಮಾಡಿದ್ದರು. “ಏಕೆ ಮಾರಾಯ, ಕಾಸರಗೋಡು ಹಿಂದೆ ಬಿದ್ದಿದ್ದೀಯಾ, ದಿನಾ ಫೇಸ್ಬುಕ್ ಪೋಸ್ಟ್ ಹಾಕ್ತಿದ್ದೀಯ, ಬ್ಲಾಗಿಂಗ್ ಮಾಡ್ತಿದ್ದೀಯ, ನಿನ್ನ ಎನರ್ಜಿ ಏಕೆ ವೇಸ್ಟ್ ಮಾಡ್ಕೋತೀಯ, ಅದೆಲ್ಲ ಮುಗಿದ ಕಥೆ” ಎಂದರು. ಬಹಳಷ್ಟು ಮಂದಿಗೆ ಇಂಥ ಭಾವನೆ ಇದೆ. …
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಪ್ ಕನ್ನಡದಲ್ಲಿ ಶಾಸಕತ್ವದ ಪ್ರಮಾಣ ವಚನ ಸ್ವೀಕರಿಸಿದರು. ಇದೇನು ಮಹಾ ಎಂದು ಹಲವರು ಹುಬ್ಬೇರಿಸಬಹುದು. ಆದರೆ ಅನ್ಯಾಯವಾಗಿ ಕಾಸರಗೋಡನ್ನು ಕೇರಳಕ್ಕೆ ಸೇರಿಸಿಕೊಂಡ ನಂತರ ಅಲ್ಲಿನ ಸರ್ಕಾರಗಳು ಈ ಪ್ರದೇಶದಲ್ಲಿ ಕನ್ನಡದ ಕಲರವ ಅಡಗಿಸುವ ಹುನ್ನಾರಗಳನ್ನು ಮಾಡುತ್ತಲೇ ಬಂದಿವೆ. ಈ …
“ಚೈನಾ ಸೈನ್ಯ ಭಾರತದ ಗಡಿಯೊಳಗೆ ನುಸುಳಿ ಯಾವುದೇ ಪೋಸ್ಟ್ ವಶಪಡಿಸಿಕೊಂಡಿಲ್ಲ. ನಮ್ಮ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆದರೆ ಭಾರತ ಮಾತೆಯನ್ನು ಕೆಣಕಲು ಬಂದವರಿಗೆ ತಕ್ಕ ಪಾಠ ಕಲಿಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಧಾನಿ ಅವರ ಹೇಳಿಕೆ ನಂಬೋಣ …
ಭಾರತ ಮತ್ತು ಚೀನಾ ಬಾಂಧವ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಾಣಿಜ್ಯ ವ್ಯವಹಾರಗಳು, ಅಧ್ಯಾತ್ಮಿಕ ಅನುಸಂಧಾನಗಳು ನಡೆದಿವೆ. ಆದರೆ ಬೇರೆಬೇರೆ ರಾಜಮನೆತನಗಳ ಆಳ್ವಿಕೆಯಲ್ಲಿ ಚೆದುರಿ ಹೋಗಿದ್ದ ಚೀನಾ, ಕಮ್ಯುನಿಸ್ಟ್ ಕ್ರಾಂತಿಯಿಂದ “ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ” ಅಡಿಯಲ್ಲಿ ಒಂದುಗೂಡಿತು. ಈ ನಂತರ ನೆರೆಹೊರೆಯವರೊಂದಿಗಿನ …
ಅರುಣಾಚಲ ಪ್ರದೇಶದ ತುಲಾಂಗ್ ಲಾ ಪ್ರದೇಶದಲ್ಲಿ 1975ರಲ್ಲಿ ಭಾರತೀಯರ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಇದರ ದುಷ್ಪರಿಣಾಮ ನಾಲ್ವರು ಭಾರತೀಯ ಸೈನಿಕರು ಜೀವ ತೆತ್ತಿದ್ದರು. ರಾಜಕೀಯ ಮಾರ್ಗದ ಮಾತುಕತೆಗಳಿಂದಾಗಿ ಘರ್ಷಣೆ ಮುಂದುವರಿಯಲಿಲ್ಲ. ಇದಾಗಿ ಬರೋಬ್ಬರಿ 45 ವರ್ಷಗಳ …
ಎಷ್ಟೊಂದು ವಿಫಲತೆಗಳು…. 2014ರಿಂದ 2019ರ ಅಧಿಕಾರದ ಪಯಣದಲ್ಲಿ ಒಂದೇಒಂದು ನೆನಪಿನಲ್ಲಿ ಉಳಿಯುವಂತಹ ಸಾಧನೆಯ ಮೈಲಿಗಲಿಲ್ಲ. ಆದರೂ ಪ್ರಚಂಡ ವಿಜಯ ಒಲಿದಿದೆ. ತಾರಕಕ್ಕೇರಿದ ನಿರುದ್ಯೋಗ ಪ್ರಮಾಣ, ಗ್ರಾಮೀಣರಿಗೆ ವರ್ಷದ ಒಂದಷ್ಟು ತಿಂಗಳು ಉದ್ಯೋಗ ಒದಗಿಸಿಕೊಡುತ್ತಿದ್ದ ನರೇಗಾ ಯೋಜನೆ ಕತ್ತು ಹಿಚುಕ್ಕಿದ್ದು, ಮೈಲಿಗಲ್ಲು ಎನ್ನುವಂತಹ …
ಪತ್ರಿಕೆಗಳಲ್ಲಿ, ಫೇಸ್ಬುಕ್ಕಿನಲ್ಲಿ ಮಂಡ್ಯ ಚುನಾವಣಾ ಅಖಾಡದ ವಿಶ್ಲೇಷಣೆ ಮಾಡಿದವರಲ್ಲಿ ಈ ಮುಂದಿನ ಒಂದು ಪ್ರಶ್ನೆ ಎತ್ತಿದ್ದವರು ಇದ್ದಾರೆ. “ವೈಯಕ್ತಿಕ ಮತ್ತು ಸಂಘಟನೆಗಳ ನೆಲೆಯಲ್ಲಿ ಬಿಜೆಪಿ ಮತ್ತು ಮೋದಿಯನ್ನು ವಿರೋಧಿಸುವ ಸಾಕಷ್ಟು ಪ್ರಗತಿಪರರು ಮಂಡ್ಯದ ಚುನಾವಣೆ ಸಂದರ್ಭದಲ್ಲಿ ಸುಮಲತಾ ಪರ ನಿಲುವು ತಳೆದಿದ್ದಾರೆ. …
ಅಡಗೂರು ಹುಚ್ಚೇಗೌಡ ವಿಶ್ವನಾಥ್ ತೀರಾ ಬಳಲಿದಂತೆ ಕಾಣುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಅದು ದೈಹಿಕ ಬಳಲಿಗೆಗಿಂತ ರಾಜಕೀಯ ಬಳಲಿಕೆಯೇ ಎಂದು ಗೊತ್ತಾಗುತ್ತಿತ್ತು. ಅವರ ಮಾತುಗಳಲ್ಲಿ ಎಂದಿನ ಚಾರ್ಮ್ ಇರಲಿಲ್ಲ. ಮೊನ್ನೆ ಪತ್ರಕರ್ತರು ಏರ್ಪಡಿಸಿದ್ದ ಸಂವಾದದಲ್ಲಿ ಅವರ ಒಳಮನಸು ಭಾಗಿಯಾದಂತೆ ಕಾಣುತ್ತಿರಲಿಲ್ಲ. ಯಾಂತ್ರಿಕವಾಗಿ ಮಾತನಾಡುತ್ತಿದ್ದರು. …
ಸದಾ ತಂಪು ನೀಡುವ, ತಂಗಾಳಿ ಸೂಸುವ ಮರಗಳೆಡೆಯ ಪ್ರೆಸ್ ಕ್ಲಬ್ಬಿನ ಸಭಾಂಗಣ ಕಿಕ್ಕಿರಿದಿತ್ತು. ಮೊನಚಾದ ಪ್ರಶ್ನೆಗಳು ರೊಯ್ಯನೆ ಬರುತ್ತಿದ್ದವು. ಅವುಗಳಿಂದ ವೇದಿಕೆಯಲ್ಲಿದ್ದ ಆ ಹೆಣ್ಣುಮಗಳು ವಿಚಲಿತರಾಗಲಿಲ್ಲ. ಪ್ರತಿಯೊಂದು ಪ್ರಶ್ನೆಗೂ ಸ್ಪಷ್ಟ, ದಿಟ್ಟ ಉತ್ತರ ನೀಡುತ್ತಿದ್ದರು. ಅವುಗಳ ಖಚಿತೆತೆ ಮುಂದಿನ ಸಾಲಿನಲ್ಲಿದ್ದ ಮಾಗಿದ …
ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ ಹಿರಿಯ ನಾಯಕರಿಗೆ ಕರ್ನಾಟಕ ಸಾಕಷ್ಟು ಬಾರಿ ಪುನಶ್ಚೇತನ ನೀಡಿದೆ. 1978ರಲ್ಲಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇವರನ್ನು ಸೋಲಿಸಲು ವಿರೋಧಪಕ್ಷಗಳು ಮಾಡಿದ ರಾಜಕೀಯ ಪ್ರಯತ್ನ ವಿಫಲವಾಗಿದ್ದವು. ಆದರೆ ಆ …
ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಪದವಿ ಹಂತದ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ರಾಜಕೀಯ ಒಲವುಗಳನ್ನು ತಿಳಿದುಕೊಳ್ಳುತ್ತಿದ್ದರು. ಮೈಕ್ ಹಿಡಿದವರು ಕೇಳುತ್ತಿದ್ದ ಪ್ರಶ್ನೆಗಳು ” ನಿಮ್ಮ ಆಯ್ಕೆ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ, ಒಮ್ಮೆ ಹೀಗೆ ಕೇಳಿದರೆ ಮತ್ತೊಮ್ಮೆ “ನಿಮ್ಮ ಒಲವು …
