ಗ್ರಾಮಿಣ ಭಾರತದಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಕುಸ್ತಿ ಅಲ್ಲ ಎಂಬ ನಂಬಿಕೆ ಇದೆ. ಜೊತೆಗೆ ಅಪ್ಪ-ಅಮ್ಮನ ಆಸೆ ಈಡೇರಿಸುವವರು, ವಂಶದ ಉತ್ತರಾಧಿಕಾರಿಗಳು, ವಂಶೋದ್ಧಾರಕರು ಗಂಡು ಮಕ್ಕಳೇ ಎಂಬ ಕುರುಡು ನಂಬಿಕೆ ಇದೆ. ನಗರ ಪ್ರದೇಶವೂ ಇದಕ್ಕೆ ಹೊರತಲ್ಲ. ಇಂಥ ಪೊಳ್ಳುತನಗಳನ್ನೆಲ್ಲ ‘ದಂಗಲ್’ ಒಡೆಯುತ್ತಾ ಹೋಗುತ್ತದೆ.
ಪ್ರಸ್ತುತವೂ ಹರಿಯಾಣದಲ್ಲಿ ಜಾತಿ ಪಂಚಾಯ್ತಿಗಳು ಪ್ರಬಲವಾಗಿವೆ. ಹೆಣ್ಣು, ಗೃಹಿಣಿಯಾಗಷ್ಟೆ ಇರಬೇಕು. ಅವಳಿಗೆ ಸ್ವಾತಂತ್ರ್ಯ ನೀಡಬಾರದು ಎಂದು ಇವು ನಂಬುತ್ತವೆ. ಇಂಥ ಪ್ರದೇಶದ ತಂದೆಯೋರ್ವ ತನ್ನ ಕನಸು ಸಾಕಾರಗೊಳ್ಳುವ ಬೆಳಕನ್ನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಕಾಣುತ್ತಾನೆ ಎಂದರೆ ಅದು ದೊಡ್ಡ ಸಂಗತಿ.
2010ನೇ ಕಾಮನ್ವೇಲ್ತ್ ಕ್ರೀಡಾಕೂಟದಲ್ಲಿ ಗೀತಾ ಪೋಗಟ್ ಚಿನ್ನದ ಪದಕ ಪಡೆಯುತ್ತಾರೆ. ಬಬಿತಾ ಪೋಗಟ್ ಬೆಳ್ಳಿಪದಕ ಪಡೆಯುತ್ತಾರೆ. ಅದಕ್ಕಾಗಿ ಇವರಿಬ್ಬರು ಪಟ್ಟ ಶ್ರಮ, ತಂದೆ ಪೋಗಟ್ ತ್ಯಾಗ ಅಪಾರ. ಇವೆಲ್ಲವನ್ನೂ ಅನಗತ್ಯ ಮೆಲೋಡ್ರಾಮ ಇಲ್ಲದೆ ಸಿನೆಮಾ ಕಟ್ಟಿಕೊಟ್ಟಿರುವುದು ಬಹುಮುಖ್ಯ ವಿಷಯ.
ಅಭಿನಯ:


