ಜಗತ್ತಿನ ಬೇರೆಬೇರೆ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದ ಮಾಡುವುದನ್ನು ಪ್ರೋತ್ಸಾಯಿಸುವುದಕ್ಕಾಗಿ ಇಂಗ್ಲೆಂಡ್ ಅಂದರೆ ಯುನೈಟೆಡ್ ಕಿಂಗ್ಡಮ್ ಮತ್ತು ಐರ್ಲೇಂಡಿನಲ್ಲಿ ಅನೇಕ ಸಾಹಿತ್ಯಕ ಬಹುಮಾನಗಳಿವೆ. ಇವುಗಳಿಗೆ ಹುಬ್ಬೇರಿಸುವಷ್ಟು ಮೊತ್ತದ ನಗದು ಬಹುಮಾನಗಳಿವೆ. ಇಂಥವುಗಳಲ್ಲಿ ಇಂಟರ್ ನ್ಯಾಷನಲ್ ಬುಕರ್ ಪ್ರೈಜ್ ಒಂದಷ್ಟೆ ! ಇವುಗಳಲ್ಲಿ …
ಸಾಹಿತ್ಯ
ಇಂಗ್ಲಿಷಿಗೆ ಅನುವಾದ ಸಾಹಿತ್ಯ ಮತ್ತು ಅನುವಾದಕರನ್ನು ಪ್ರೋತ್ಸಾಹಿಸುವ ಸಲುವಾಗಿಯೇ “ಇಂಟರ್ ನ್ಯಾಷನಲ್ ಬುಕರ್ ಪ್ರೈಜ್” ಸ್ಥಾಪನೆಯಾಗಿದೆ. ಇದನ್ನು ಅವರು ಪ್ರಶಸ್ತಿ ಎಂದು ಹೇಳುವುದಿಲ್ಲ. ಪ್ರೈಜ್ ಅಂದರೆ ಬಹುಮಾನ ಎಂದು ಹೇಳುತ್ತಾರೆ. ಇದರಲ್ಲಿ ಮುಖ್ಯವಾಗಿ ಕೆಲವು ಷರತ್ತುಗಳಿವೆ. ಮೊದಲನೇಯದು ಅನುವಾದಿಸಲು ಆರಿಸಿಕೊಂಡ ಸಾಹಿತ್ಯ …
ದಸರಾ ಉದ್ಘಾಟನೆಗೆ ದೀಪಾ ಭಸ್ತಿ ಅವರನ್ನೂ ರಾಜ್ಯ ಸರ್ಕಾರ ಆಹ್ವಾನಿಸಬೇಕಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ಅನುವಾದಕರನ್ನು ಕರೆಯಲೇ ಬೇಕು ಅಂತಿಲ್ಲ; ಮೂಲ ಲೇಖಕರನ್ನು ಕರೆದಿದ್ದಾರಲ್ಲ ಎಂದು ಹೇಳುತ್ತಿದ್ದಾರೆ. ಯಾವುದು ಸರಿ ? ಎಂಬ ಪ್ರಶ್ನೆ ನನ್ನನ್ನೂ ಕಾಡಿತು. ವೈಯಕ್ತಿಕವಾಗಿ ನನ್ನ …
ನೋಂದಾಯಿತ ಸಂಸ್ಥೆಗಳಲ್ಲಿ ತುಂಬ ಅವಶ್ಯಕತೆ ಇದ್ದಾಗ ಬೈಲಾಕ್ಕೆ ತಿದ್ದುಪಡಿಯಾಗುವುದು ಸಹಜ. ಆದರೆ ಅಮೂಲಾಗ್ರ ಬದಲಾವಣೆಗಳಾಗುವುದಿಲ್ಲ. ಸಂಸ್ಥೆಯ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಗೆ ಧಕ್ಕೆ ತರುವ ತಿದ್ದುಪಡಿಗಳನ್ನು ಗಣನೀಯ ಸಂಖ್ಯೆಯ ಸದಸ್ಯರು ಒಪ್ಪುವುದಿಲ್ಲ. ಹೀಗಿರುವಾಗ “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪರಮಾಧಿಕಾರ” ನೀಡುವ ನಿಟ್ಟಿನಲ್ಲಿ …
ಕವಿ ಕಮಲಾಕರ ಕಡವೆ ಅವರ “ವಲಸೆ ಹಕ್ಕಿಗಳ ಹುಯಿಲು” ಓದಿದೆ. ಇಲ್ಲಿನ ಕಾವ್ಯ ಕನ್ನಡಿ ವರ್ತಮಾನದ ತಲ್ಲಣಗಳಿಗೆ ಮುಖಮುಖಿಯಾಗುತ್ತಾ ಸಮಾಜದ ಮುಖಗಳೂ ಕಾಣಿಸಿ ಬೆಚ್ಚಿ ಬೀಳಿಸುತ್ತವೆ. ನಿಂತಲ್ಲೇ ನಿಂತು ಕೊಳೆತು ನಾರುವ ಮಾದರಿ ಇರದೇ ಚಲನೆಯೇ ಸ್ಥಾಯಿಭಾವವಾಗಿರುವ ರಚನೆಗಳು ಓದುಗರನ್ನೂ ಹಲವು …
“ಸಾಹಿತ್ಯ ಸಮ್ಮೇಳದ ಸಂದರ್ಭ ದಲ್ಲಿ ಸಾಹಿತ್ಯದ ವಿಚಾರ ಮುನ್ನೆಲೆಗೆ ಬಾರದೆ ಊಟದ ವಿಚಾರವೇ ಅದರಲ್ಲೂ ಮಾಂಸಹಾರದ ಚರ್ಚೆಯೇ ದೊಡ್ಡ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ. ಸಾಹಿತ್ಯದ ಗೋಷ್ಠಿಗಳ ವಿಷಯಗಳೇನು, ಸಂವಾದದ ವಿಚಾರಗಳೇನು ಯಾವಯಾವ ಮುಖ್ಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ ಎಂಬುದರ ಸುತ್ತ ಆಗಬೇಕಿದ್ದ ಚರ್ಚೆಗಳು …
ಮಂಡ್ಯದಲ್ಲಿ ಸದ್ಯದಲ್ಲಿಯೇ ನಡೆಯುವ ಸಾಹಿತ್ಯ ಮೇಳದಲ್ಲಿ ಆಹಾರ ತಾರತಮ್ಯದ ಪ್ರಶ್ನೆ ಬೃಹದಾಕಾರವಾಗಿ ಬೆಳೆದಿದೆ. ಇದು ಇದಕ್ಕಿದ್ದ ಹಾಗೆಯೇ ಬೆಳೆಯಿತೇ ? ಖಂಡಿತ ಇಲ್ಲ. ಇದರ ಹಿಂದೆ ಕಾರಣಗಳಿವೆ. ಅವುಗಳಲ್ಲಿ ಆಹಾರದ ಹಕ್ಕು ಕೂಡ ಬಹುಮುಖ್ಯವಾಗಿದೆ. ವಾಕ್ ಸ್ವಾತಂತ್ರ್ಯದ ಹಕ್ಕು ಇದ್ದ ಹಾಗೆ …
ಜಪಾನಿನ ಹರುಕಿ ಮುರುಕಾಮಿ ಓರ್ವ ಯಶಸ್ವಿ ಉದ್ಯಮಿ, ಸಾಹಿತಿ ಮತ್ತು ಓಟಗಾರ. ಈತನ ಮ್ಯಾಜಿಕ್ ರಿಯಲಿಸಂ ತಂತ್ರಗಾರಿಕೆಯ ಸೃಜನಶೀಲ ಕೃತಿಗಳು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಓದುಗರನ್ನು ಮೋಡಿ ಮಾಡುತ್ತಿವೆ. ರನ್ನಿಂಗ್ ನಾವೆಲಿಸ್ಟ್ (What I talk about when I …
ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧ ಪ್ರಕಾರದಲ್ಲಿ ಸಾಕಷ್ಟು ಕೃಷಿ ಆಗಿದೆ. ಆದರೆ ಹಳ್ಳಿಗಾಡಿನ ಬಗ್ಗೆ ಬಂದಿರುವ ಬರೆಹಗಳು ಕಡಿಮೆ. ಅಲ್ಲಿ ಕಥೆ, ಕಾದಂಬರಿ, ಪತ್ರಿಕಾ ವರದಿಗೂ ವಸ್ತುವಾಗಬಲ್ಲ ವಿಷಯಗಳಿವೆ. ಲಲಿತ ಪ್ರಬಂಧ ಇವೆಲ್ಲವುಗಳಿಗೂ ಭಿನ್ನ. ಓದುವಾಗ ಸುಲಭವೆನ್ನಿಸಿದರೂ ಬರೆಯುವುದು ಕಷ್ಟ. ನಂದಿನಿ …
“ಪೂರ್ಣಚಂದ್ರ ತೇಜಸ್ವಿ ಅವರನ್ನು ಕಾಡು ತನ್ನ ಅನಂತ ವಿಸ್ಮಯಗಳಿಂದ ಕಾಡು ಬಂಧಿಸಿತ್ತು. ಹುಲಿ, ಚಿರತೆಗಳ ಜಾಡನ್ನಿಡಿದು ಕಾಡಿನಲ್ಲಿ ಅಲೆದಾಡಿದ ಕೆನೆತ್ ಅಂಡರ್ಸನ್, ಪತ್ತೆದಾರಿಯಂಥ ಕಥನಗಳನ್ನು ರಚಿಸಿದರು. ಇದೇ ರೀತಿ ಇಲ್ಲಿ ಸಿದ್ದು ಕೂಡಾ, ತಮ್ಮ ಪತ್ರಕರ್ತನ ಸಹಜ ಪ್ರವೃತ್ತಿಯಂತೆ, ಕಾಡಿನಲ್ಲಿ ಜರುಗಿದ …
ಕೇರಳ ರಾಜ್ಯವನ್ನು “ದೇವರ ನಾಡು” ಎಂದು ಅಲ್ಲಿನ ಸರ್ಕಾರ ಕರೆದುಕೊಂಡಿದೆ. ನಿಜ; ಅಲ್ಲಿ ಪ್ರಾಕೃತಿಕ ಸೌಂದರ್ಯ ಮನೆ ಮಾಡಿದೆ. ಆದರೆ ನಿಜವಾದ ಅರ್ಥದಲ್ಲಿ “ಪ್ರಕೃತಿ ದೇವರು ನೆಲೆಸಿರುವ ನಾಡು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ. ಏನು ಮಾಡುವುದು ಇಲ್ಲಿಯ ಜನ ಪ್ರತಿನಿಧಿಗಳಿಗಾಗಲಿ; …
ಬೀದಿಯಲ್ಲಿ ನಿಂತು ಪುಸ್ತಕಗಳನ್ನು ಮಾರುವುದು ಖಂಡಿತ ಅವಮಾನಕರವಲ್ಲ; ಅದೊಂದು ಹೆಮ್ಮೆಯ ಸಂಗತಿ. ಆದರೆ ಇಂಥ ಅನಿವಾರ್ಯತೆ ಕನ್ನಡ ಸಾಹಿತ್ಯಕ್ಕೆ ಏಕೆ ಉಂಟಾಗಿದೆ ಎಂಬುದೇ ನನ್ನ ಪ್ರಶ್ನೆ. ಇದು ದಿಢೀರ್ ಮೂಡಿದ್ದೇನು ಅಲ್ಲ; ಈ ಜಿಜ್ಞಾಸೆ ನನ್ನನ್ನೂ ಸೇರಿದಂತೆ ಅನೇಕ ಓದುಗರನ್ನು ಕಾಡುತ್ತಿದೆ. …
ಸಾಹಿತ್ಯ ಎಂದಿಗೂ ವಿಚಾರ ಪ್ರಚೋದಕವಾಗಿರಬೇಕು. ಇದನ್ನು ಹೊರತುಪಡಿಸಿ ಅವೈಚಾರಿಕತೆಯ ಬೀಡಾಗಬಾರದು. ಸಂತಸದ ಸಂಗತಿಯೆಂದರೆ ಕುವೆಂಪು ಆದಿಯಾಗಿ ಅನೇಕ ಸಾಹಿತಿಗಳು ವೈಚಾರಿಕತೆಯ ಸಾಹಿತ್ಯಪಥವನ್ನೇ ನಿರ್ಮಿಸಿಕೊಟ್ಟಿದ್ದಾರೆ. ಈ ಬೆಳಕಿನಲ್ಲಿ ಸಾಗಬೇಕಾದ ಸಾಹಿತ್ಯ ಪರಿಷತ್ ಆ ಹೆದ್ದಾರಿಯನ್ನೇ ಮರೆತಿದೆ. ಪೂರ್ಣಕುಂಭ ಸ್ವಾಗತ – ಮೆರವಣಿಗೆ ಇದಕ್ಕೊಂದು …
ಕಥೆಗಳೇ ಬೇರೆ ಪ್ರಬಂಧಗಳೇ ಬೇರೆ. ಏಕೆಂದರೆ ಅವುಗಳನ್ನು ಕಟ್ಟುವ ರೀತಿಯಲ್ಲಿ ಭಿನ್ನತೆಯಿದೆ. “ಬ್ರಾಹ್ಮಣ ಕುರುಬ” ಸಂಕಲನದ ಬರೆಹಗಳು ಮೌಲ್ಯಯುಕ್ತ ಕಥನಗಳಾಗಿವೆ. ಆದರೆ ಇದನ್ನು ಲೇಖಕ ನರಸಿಂಹಮೂರ್ತಿ ಪ್ಯಾಟಿ ಅವರು ಪ್ರಬಂಧಗಳೆಂದು ಕರೆದುಕೊಂಡಿದ್ದಾರೆ. ತನ್ನ ಗೆಳೆಯ ಗುರುರಾಜನ ಚೇಷ್ಟೆಗಳನ್ನು ಪ್ಯಾಟಿ ಅವರು ಅನಾವರಣ …
ಸಿದ್ದಲಿಂಗಯ್ಯ. ಹೀಗೆಂದೊಡನೆ ಯಾವ ಸಿದ್ದಲಿಂಗಯ್ಯ ಎಂಬ ಪ್ರಶ್ನೆ ಎದುರಾಗಬಹುದು. ದಲಿತ ಕವಿ. ಹೀಗೆಂದೊಡನೆ ಮುಗುಳ್ನಗೆ ಹೊದ್ದ ಚಿತ್ರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ. “ಖಡ್ಗಕ್ಕಿಂತ ಲೇಖನಿ” ಹರಿತ ಇಂಥದ್ದೊಂದು ನಾಣ್ಣುಡಿ ಪತ್ರಿಕಾರಂಗದಲ್ಲಿ ಇದೆ. ಕಾವ್ಯವೂ ದಲಿತ ವಿರೋಧಿ ವ್ಯವಸ್ಥೆ ಎದೆ ನಡುಗಿಸಬಲ್ಲದು ಎಂದು ಇವರೇ …
