ಕಡಕ್ ನಾಥ್ … ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು..ಕೃಷಿಮೇಳಗಳಿರಲಿ, ಸ್ವ ಉದ್ಯೋಗ ಅಲ್ಲಿ ಯೋಜನೆಗಳಲ್ಲಿ ಈ ಹೆಸರು ಸರ್ವೇಸಾಮಾನ್ಯವಂತಾಗಿದೆ. ಅಷ್ಟಕ್ಕೂ ಕಡಕ್ ನಾಥ್ ಅನ್ನೋದು ಯಾವುದೇ ವ್ಯಕ್ತಿಯ ಹೆಸರಾಗಲಿ, ವಸ್ತುವಿನ ಹೆಸರಾಗಲಿ ಅಲ್ಲ. ಇದೊಂದು ದೇಶಿತಳಿಯ ಕೋಳಿಯ ಹೆಸರು..ಹೌದು, ಕಡಕ್ ನಾಥ್ ಹೆಚ್ಚು ಲಾಭದಾಯಕವೂ, ಹೆಸರುವಾಸಿಯಾದ ಕಪ್ಪುಕೋಳಿ ಬ್ಲಾಕ್ ಚಿಕನ್,ಆಯಾಮ್ ಸಿಮಾಲಿ ಅಂತ ಕೂಡ ಇದು ಪ್ರಚಲಿತ, ಕಡಕ್ ನಾಥ್ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿಯಾಗ್ತಿರೋದಕ್ಕೆ ಆ ಕೋಳಿಯಲ್ಲಿರುವ ವಿಶೇಷತೆಗಳೇ ಕಾರಣ.
ಅಷ್ಟಕ್ಕೂ ಈ ಕೋಳಿಯ ಮೇಲ್ಮೈ ಕಪ್ಪು, ಮೂಳೆ,ಕಣ್ಣು, ಮಾಂಸ,ನಾಲಿಗೆಯೂ ಕಪ್ಪು.. ಒಳ ಅಂಗಾಂಗಳು ಕಪ್ಪೇ.ಆದ್ರೆ ಇದ್ರ ರಕ್ತಮಾತ್ರ ಕಪ್ಪುಮಿಶ್ರಿತ ಕಡುಗೆಂಪು..ಬರಿ ಮೈಬಣ್ಣ ಕಪ್ಪಗಿದ್ದ ಮಾತ್ರಕ್ಕೆ ಇದು ವಿಶೇಷವಾಗಿದೆಯಾ ಅಂತಂದುಕೊಂಡ್ರೆ. ಅದು ತಪ್ಪು.. ಯಾಕಂದ್ರೆ ಕಡಕ್ನಾಥ್ ತುಂಬೆಲ್ಲಾ ಔಷಧೀಯ ಗುಣಗಳೇ ಹೆಚ್ಚು.
ಅಂದ್ಹಾಗೆ ಈ ಕಪ್ಪುಕೋಳಿ ಭಾರತದಲ್ಲಿ ಮೊದಲು ಕಂಡುಬಂದಿದ್ದು ಮಧ್ಯಪ್ರದೇಶದಲ್ಲಿ. ಮಧ್ಯಪ್ರದೇಶದ ಜಗುವಾ ಆದಿವಾಸಿಗಳು ತಮ್ಮ ಆರೋಗ್ಯಕ್ಕಾಗಿಯೇ ಇದನ್ನು ಸಾಕುತ್ತಿದ್ದರು. ಇನ್ನು ಕಪ್ಪುಕೋಳಿಯ ಮೂಲವನ್ನ ನೋಡೋಕೆ ಹೊರಟರೆ, ಇದು ಇಂಡೋನೇಷಿಯ, ಜಾವಾ ದ್ವೀಪದಲ್ಲಿ ಮೊದಲಿಗೆ ಕಂಡುಬಂತು. ನಂತ್ರ ಯೂರೋಪ್..ಅಲ್ಲಿಂದ ಭಾರತ.. ಬ್ರೀಡಿಂಗ್ ನಂತ್ರ ಇಡಿ ದೇಶಾದ್ಯಂತ ಕಂಡುಬರುತ್ತಿವೆ. ಅದ್ರಲ್ಲೂ ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದಲ್ಲಿ.
ಈ ಕೋಳಿಗೆ ಹೈಪರ್ ಪಿಗ್ಮೆಂಟೇಷನ್, ಮೆಲಾನಿನ್ ಕಾರಣದಿಂದಲೇ ಕಪ್ಪು ಬಣ್ಣ ಬಂದಿದೆ. ಚೀನಾದಲ್ಲಿ ಬ್ಲಾಕ್ ಚಿಕನ್ ಅಂತಾನೆ ಇದು ಫೇಮಸ್. ಸಾಮಾನ್ಯವಾಗಿ ನಾಟಿ ಕೋಳಿ ಹೆಚ್ಚು ರುಚಿಕರ ಅಂತಾರೆ.ಇದು ಅದಕ್ಕಿಂತಲೂ ಹೆಚ್ಚು ಟೇಸ್ಟಿ..ರುಚಿಯಲ್ಲಷ್ಟೇ ಅಲ್ಲ. ಔಷಧೀಯ ಗುಣಗಳ ಸಾರವೇ ಇದ್ರಲ್ಲಿ ಹೆಚ್ಚು. ಇತರೆ ಕೋಳಿಗಳಲ್ಲಿ ಕೊಬ್ಬು ಹೆಚ್ಚಾಗಿರುತ್ತೆ. ಆದ್ರೆ ಕಪ್ಪುಕೋಳಿ ಫ್ಯಾಟ್ಲೆಸ್. ಇದನ್ನ ರೋಗಿಗಳು ಕೂಡ ಬಳಸಬಹುದು. ಡಯಾಬಿಟಿಕ್,ಹೃದಯ, ರೋಗಿಗಳಿಗೆ ಇದು ಉತ್ತಮ ಆಹಾರ. ವೈದ್ಯಕೀಯ ಗುಣಗಳೇ ಇದ್ರಲ್ಲಿ ತುಂಬಿದ್ದು, ಇದ್ರ ಮಾಂಸ ನ್ಯೂಟ್ರಿಷಿಯನ್ ವ್ಯಾಲ್ಯೂ ಹೆಚ್ಚಿದೆ. ಅಮೋನೋ ಆಸಿಡ್ ಹೆಚ್ಚು, ಕ್ಯಾಲ್ಸಿಯಂ ಹೆಚ್ಚು, ಇದ್ರಲ್ಲಿ ಹಿಮೋಗ್ಲೋಬಿನ್ ಕೂಡ ಅಧಿಕವಾಗಿರುತ್ತೆ.
ಬಿ1, ಬಿ2, ಬಿ6,ಬಿ12, ಸಿ ಮತ್ತು ಈ ವಿಟಮಿನ್, ಪಾಸ್ಪರೆಸ್ ಕೂಡ ತುಂಬಿದೆ. ಬರಿ ಇಷ್ಟೇನಾ ಅಂದ್ರೆ ಊಹುಂ.. ಇದು ರೋಗ ನಿರೋಧಕ ಜೊತೆಗೆ ಲೈಂಗಿಕ ವರ್ಧಕವೂ ಅಂತಾರೆ ವಿಶೇಷಜ್ಞರು. ಹಾಗಾದ್ರೆ ಇಷ್ಟೆಲ್ಲ ವಿಶೇಷ ಗುಣಗಳಿರುವ, ಔಷಧೀಯ ಕಡಕ್ ನಾಥ್ ಪಾಲನೆಯೂ ಹೆಚ್ಚುತ್ತಿದೆ. ಕಪ್ಪುಕೋಳಿಯ ಸಾಕಾಣಿಕೆ ಹೇಗೆ..ಎಲ್ಲಿ ಸಿಗುತ್ತೆ ಅನ್ನೋ ಮಾಹಿತಿ ಮುಂದಿನ ಭಾಗದಲ್ಲಿ.
good information
motte are mari yelli sigthave
Supet
Super
Very useful information