ಇಂಥ ಹಾಳೆಗಳನ್ನು ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯಲಾಗುತ್ತದೆ. ಈ ವಿಶೇಷ ಹಳದಿ ಅಂಟು ಬಲೆಗಳು ಹಾರುವ ಕೀಟಗಳ ಕಣ್ಣುಗಳಿಗೆ ಚಿಗುರುವ ಎಲೆಗೊಂಚಲಿನಂತೆ ಕಾಣುತ್ತವೆ. ಇದರಿಂದ ಆಕರ್ಷಿತವಾಗಿ ಬರುವ ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಅಲ್ಲಿರುವ ಅಂಟಿನ ಗುಣದಿಂದಾಗಿ ಬಂಧಿಯಾಗುತ್ತವೆ.

ಇನ್ನಿತರ ಅನುಕೂಲಗಳು: ಹಳದಿ ಬಣ್ಣದ ಅಂಟು ಹಾಳೆಗಳಿಂದ ಬೆಳೆಯ ಕ್ಷೇತ್ರದಲ್ಲಿರುವ ಕೀಟಗಳ ವಿಧಗಳು ಮತ್ತು ಅವುಗಳ ಸಾಂದ್ರತೆ ತಿಳಿಯಬಹುದು. ಇದು  ಕೀಟಗಳ ಬಗ್ಗೆ ಅಧ್ಯಯನ ಮಾಡುವ ಕೀಟಶಾಸ್ತ್ರಜ್ಞರಿಗೂ ಸಹಾಯಕ. ಜೊತೆಗೆ ಬೆಳೆಯ ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿ ಸಮಗ್ರ ಕೀಟ ನಿರ್ವಹಣೆ ವಿಧಾನಗಳನ್ನು ವಿಳಂಬ ಇಲ್ಲದಂತೆ ಕೈಗೊಳ್ಳುವಿಕೆ ಸಾಧ್ಯವಾಗುತ್ತದೆ. ಈ ಅಂಟು ಬಲೆಗಳ ಬಣ್ಣ ಒಂದು ಪ್ರತ್ಯೇಕ ತರಂಗಾಂತರದಲ್ಲಿದ್ದು ಕೀಟಗಳನ್ನು ತನ್ನತ್ತ ಸೆಳೆಯುವಂತೆ ವೈಜ್ಞಾನಿಕ ಸಂಶೋಧನೆ ಮಾಡಿ ತಯಾರಿಸಲಾಗಿರುತ್ತದೆ. ಹಾಳೆಯ ಎರಡೂ ಬದಿಗಳು ಈ ರೀತಿಯ ಆಕರ್ಷಣೆ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಅಧಿಕ ಸಂಖ್ಯೆಯಲ್ಲಿ ಬೆಳೆ  ಬಾಧಿಸುವ ಕೀಟಗಳನ್ನು ಆಕಷರ್ಷಣೆ ಮಾಡಿ ಅವು ಹಾಳೆಗೆ ಸಿಲುಕಿಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.

ಹೀಗೆ ಅಂಟಿಕೊಂಡ ಕೀಟಗಳ ಬಗ್ಗೆ ಕಿರುಮಾಹಿತಿ ಅಂಶಗಳನ್ನು ಹಾಳೆಯ ಮೇಲೆ ಬಾಲ್ ಪಾಯಿಂಟ್ ಪೆನ್ನಿನಿಂದ ಬರೆಯಲೂ ಸ್ಥಳವಕಾಶ ಇರುತ್ತದೆ. ಇಂಥ ಹಾಳೆಗಳನ್ನು ಬಳಸುವುದರಿಂದ ಅಪಾರ ಅನುಕೂಲಗಳಿವೆ. ಮೊದಲನೇಯದಾಗಿ ಕೀಟಗಳ ಬಾಧೆ ತಡೆಗಟ್ಟಿ ಅಪಾರ ಮೌಲ್ಯ್ ಬೆಳೆಗಳನ್ನು ಸಂರಕ್ಷಿಸಬಹುದು. ಎರಡನೇಯದಾಗಿ ಒಂದು ಪ್ರದೇಶದಲ್ಲಿ ಇರುವ ಕೀಟಗಳ ಪ್ರಬೇಧಗಳನ್ನು ತಿಳಿಯಬಹುದು. ಮೂರನೇಯದಾಗಿ ಸಮಗ್ರ ಕೀಟ ನಿಯಂತ್ರಣಾ ವಿಧಾನಗಳನ್ನು ಅನುಸರಿಸಬಹುದು. ಐದನೇಯದಾಗಿ ಕೀಟಗಳ ಬಗ್ಗೆ ವಿಶೇಷ ಅಧ್ಯಯನ ಮಾಡುವ ಕೃಷಿವಿಜ್ಞಾನಿಗಳಿಗೂ ಇದು ಸಹಾಯಕ. ಹಳದಿ ಬಣ್ಣದ ಅಂಟುಬಲೆಗಳನ್ನು ಎಲ್ಲ ರೀತಿಯ ಕ್ಷೇತ್ರಬೆಳೆ ಮತ್ತು ತೋಟಗಾರಿಕಾ ಬೆಳೆಗಳ ಕ್ಷೇತ್ರಗಳಲ್ಲಿಯೂ ಬಳಸಬಹುದು. ಇದನ್ನು ಕೋಳಿಫಾರಂಗಳಲ್ಲಿಯೂ ಬಳಸಬಹುದು. ಇದರಿಂದ ಕೀಟ ನಿಯಂತ್ರಣ ಪರಿಣಾಮಕಾರಿಯಾಗಿ ಆಗುತ್ತದೆ. ಕ್ಷೇತ್ರಬೆಳೆಗಳ ಸಂದರ್ಭದಲ್ಲಿ ಅತ್ಯುತ್ತಮ ಫಲಿತಾಂಶಕ್ಕಾಗಿ ಸಾಗುವಳಿ ಹಂತದಿಂದ ಫಸಲನ್ನು ಕೊಯ್ಲು ಮಾಡುವ ಹಂತದವರೆಗೂ ಬಳಸಬೇಕು.

ನಿಯಂತ್ರಣವಾಗುವ ಕೀಟಗಳು: ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಟೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ್, ಮಿಡ್ಜಸ್ ಇತ್ಯಾದಿ ಕೀಟಗಳು ಪರಿಣಾಮಕಾರಿಯಾಗಿ ನಿಯಂತ್ರಿತವಾಗುತ್ತವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಬ್ಯಾರಿಕ್ಸ್ ಕೃಷಿ ಸಂಶೋಧನಾ ಕೇಂದ್ರ

ಮೊಬೈಲ್ :ಮೊಬೈಲ್ :9900800033

 

Similar Posts

1 Comment

  1. ? Very good matters i like this type of sheets and very interesting subject we use very well this product i love Barrix agro sciences pvt ltd and its a very usefull to human all introdusing products in all over area. Big big company is there but no use in this product and its a not reaction on humans body so its a very usefull and health care also so many colors release and helo to us barrix agro sciences pvt ltd its a very usefull all farmers use this product in ur crops

Leave a Reply

Your email address will not be published. Required fields are marked *