ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಧ್ವನಿ ಹತ್ತಿಕ್ಕಲು ಕೇಋಳ ಸರ್ಕಾರ ಒಂದಿಲ್ಲೊಂದು ಕುತಂತ್ರ ಅನುಸರಿಸುತ್ತಿದೆ. ಕೇರಳ ರಾಜ್ಯವು ಜಾರಿಗೆ ತಂದಿರುವ ಮಲೆಯಾಳಂ ಕಡ್ಡಾಯ ಕಲಿಕೆ ಕಾಯ್ದೆ ಮತ್ತು ಕಾಸರಗೋಡು ಭಾಗದ ಕನ್ನಡ ಶಾಲೆಗಳಲ್ಲಿ ನಡೆಯುತ್ತಿರುವ ಮಲೆಯಾಳಂ ಉಪನ್ಯಾಸಕರ ಹಾಗೂ ಶಿಕ್ಷಕರ ಅನಧಿಕೃತ ನೇಮಕಾತಿಗಳು, …
ಭಾಷೆ
ಬಣ್ಣಗಳು ತಟಸ್ಥವಾಗಿರುತ್ತವೆ; ಆದರೆ ಭಾವನೆಗಳಿಗೆ ಬಣ್ಣಗಳಿರುತ್ತವೆ. ಆದ್ದರಿಂದಲೇ ಸುಮ್ಮನಿರುವ ಬಣ್ಣಗಳಿಗೂ ಭಾವಗಳ ರಂಗು ಬಳಿಯುತ್ತೇವೆ. ಸಂದರ್ಭನುಸಾರ ಇದು ನಡೆಯುತ್ತದೆ. ಖುಷಿ, ದುಃಖ, ಸಂಕಟ, ಅಪಾಯ, ಅಭಯ ಹೀಗೆ ಬೇರೆಬೇರೆ ಸನ್ನಿವೇಶಗಳ ಸಂದರ್ಭದಲ್ಲಿ ನೀಡುವ ಬಣ್ಣಗಳೇ ಬೇರೆ ! ಬೇರೆಬೇರೆ ಪ್ರದೇಶಗಳು, ಆಡಳಿತಗಳಲ್ಲಿ …
ಭಾಷೆಗೆ ಅಲ್ಪಸಂಖ್ಯಾತ, ಬಹುಸಂಖ್ಯಾತ ಎನ್ನುವ ದೃಷ್ಟಿಕೋನ ಇರುವುದಿಲ್ಲ. ಧಾರ್ಮಿಕತೆಯೂ ಇರುವುದಿಲ್ಲ. ಮೂಲತಃ ಸಂವಹನಕ್ಕಾಗಿಯೇ ಬೆಳವಣಿಗೆಯಾದ ಅದರಲ್ಲಿ ಪೂರ್ವಾಗ್ರಹಗಳೂ ಇರುವುದಿಲ್ಲ. ಪರಿಶ್ರಮಪಟ್ಟಷ್ಟೂ ಒಲಿಯುತ್ತದೆ; ಸಮರ್ಥವಾಗಿ ಅಭಿವ್ಯಕ್ತಿ ಮಾಡುತ್ತದೆ. ಇದರಲ್ಲಿ ಧರ್ಮದ ಬೇಧಭಾವಗಳನ್ನು ಕಾಣಲು ಸಾಧ್ಯವೂ ಇಲ್ಲ. ಇದಕ್ಕೆ ಶಿಶುನಾಳ ಶರೀಫರು, ಕರೀಂಖಾನ್, ನಿಸಾರ್ …
ದಕ್ಷಿಣ ಭಾರತದಲ್ಲಿ ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳು ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿವೆ. ಶಾಲಾಮಕ್ಕಳು ತಮ್ಮ ಮಾತೃಭಾಷೆ ಜೊತೆ ಅನಿವಾರ್ಯವಾಗಿ ಇನ್ನೆರಡು ಭಾಷೆ ಕಲಿಯಬೇಕು. ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಬೇಕು. “ಹಿಂದಿಯನ್ನು ನಾವು ಕಲಿಯುವುದಿಲ್ಲ. ನಮಗೆ ದ್ವಿಭಾಷಾ ಸೂತ್ರವೇ ಸಾಕು. ಇದರಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷನ್ನು …
ಮಾತೃಭಾಷೆಯನ್ನು ಎಂದು ಹಗುರುವಾಗಿ, ಕೇವಲವಾಗಿ ನೋಡಬಾರದು. ಅದು ಪರಂಪರೆಯಿಂದ ಪರಂಪರೆಗೆ ಇರುವ ಜ್ಞಾನವಾಹಕ ಕೊಂಡಿಗಳು. ಇದನ್ನು ಬೇರೊಂದು ಭಾಷೆಯಲ್ಲಿ ಅರ್ಥೈಸಿಕೊಳ್ಳುವುದು, ದಾಟಿಸುವುದು ಸುಲಭವಲ್ಲ. ಆದ್ದರಿಂದಲೇ ಮಾತೃಭಾಷೆ ಜ್ಞಾನ ವರ್ಗಾವಣೆ ಮತ್ತು ಸಂಸ್ಕೃತಿ ಸಂರಕ್ಷಿಸುವ ವಾಹಕ. ಆದ್ದರಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಬಹುಮುಖ್ಯ. …
ಬಂಧುಮಿತ್ರರ, ಕುಟುಂಬಗಳ ಮದುವೆ ಆಮಂತ್ರಣ ಪತ್ರಿಕೆಗಳು ಇಂಗ್ಲಿಷ್, ಕನ್ನಡ ಎರಡರಲ್ಲೂ ಮುದ್ರಿತವಾಗಿರುತ್ತವೆ. ಇತ್ತೀಚೆಗಂತೂ ಅವುಗಳಲ್ಲಿ ಕನ್ನಡ ಮಾಯವಾಗಿ ಇಂಗ್ಲಿಷ್ ಮಾತ್ರ ಇರುತ್ತದೆ. ನೋಡಿದಾಗ ಇರಿಸುಮುರಿಸಾಗುತ್ತದೆ. ನನಗಂತೂ ಮೋಡಿಮೋಡಿಯಾಗಿರೋ ಇಂಗ್ಲಿಷ್ ಫಾಂಟ್ ನಲ್ಲಿ ಇರುವ ಆಹ್ವಾನ ಪತ್ರಿಕೆ ಓದುವುದು ತುಸುಕಷ್ಟ. ಏಕೆಂದರೆ ಕನ್ನಡ …
ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಉತ್ತರ ಭಾರತೀಯ ವಲಸೆ ಹೆಚ್ಚಾಗುತ್ತಿದೆ. ಎಲ್ಲಿ ಉದ್ಯೋಗ ದೊರೆಯುತ್ತದೆಯೋ ಅಲ್ಲಿಗೆ ವಲಸೆ ಸಹಜ. ನೀವು ಇಲ್ಲಿ ಬರಬೇಡಿ ಅಥವಾ ಇಂಥಲ್ಲಿ ಹೋಗಬೇಡಿ ಎಂದು ಹೇಳಲಾಗುವುದಿಲ್ಲ. ಸಮಸ್ಯೆ ಇರುವುದೆದಂದರೆ ಮನೆಯಿಂದ ಹೊರಗೆ …
ಕಾಸರಗೋಡು ಜಿಲ್ಲೆಯ ಪೇರ್ಲ ಗ್ರಾಮದಲ್ಲಿರುವ ಪ್ರಗತಿಪರ ಕೃಷಿಕರ ಸಂದರ್ಶನಕ್ಕೆ ಹೋಗಿದ್ದೆ. ಅವರು ” ಕೃಷಿಭವನದವರು ಚೆಂಡು ಹೂ ಬೆಳೆಯುವ ಬಗ್ಗೆ ಸಭೆ ಆಯೋಜಿಸಿದ್ದಾರೆ. ಹೋಗಿ ಬರೋಣ” ಎಂದರು. ಪೆರ್ಲ ಗ್ರಾಮದಲ್ಲಿರುವ ಎಣ್ಮಕಜೆ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿಯೇ ಕೃಷಿ ಕಚೇರಿಯೂ ಇದೆ. …
ಕನ್ನಡ ಭಾಷೆ ಒಂದೆ, ಶೈಲಿಗಳು ಹಲವು. ಓದಿಗಾಗಿ, ಕೆಲಸಕ್ಕಾಗಿ ಯಾವುದೇ ಊರಿಗೆ ಹೋದರೂ ನಮ್ಮನಮ್ಮ ಊರ ಕನ್ನಡ ಮಾತನಾಡಲು, ಸಂಕೋಚ, ಹಿಂಜರಿತ ಬೇಡ. ಪಟ್ಟಣ – ನಗರ – ಮಹಾನಗರಗಳಲ್ಲಿರುವ ಸಂಕುಚಿತ ಭಾವಗಳವರು ” ಅ ಹ, ಒ ಶ ಷ …
“ಅಮಿತ್ ಶಾ ಅವರು ಭಾಷಾತಜ್ಞರಾಗಿದ್ದು ಯಾವಾಗ “ಎಂಬ ಪ್ರಶ್ನೆ ಓದಿ, ಏಕೀಗೆ ಕೇಳ್ತಿದ್ದಾರೆ ಎಂದು ನಿಮಗೆ ಖಂಡಿತ ಅನಿಸುತ್ತದೆ. ಆದ್ದರಿಂದ ಅವರು ಸೆಪ್ಟೆಂಬರ್ 14, 2023 ಹಿಂದಿ ದಿವಸ್ ಆಚರಣೆಯಂದು ಆಡಿರುವ ಮಾತುಗಳ ಪೂರ್ಣ ಪಠ್ಯ ಮುಂದಿದೆ. ಅದನ್ನೊಮ್ಮೆ ಪೂರ್ಣ ಓದಿ …
ಪ್ರತಿವರ್ಷ ಸೆಪ್ಟೆಂಬರ್ ೧೪ ರಂದು ರಾಷ್ಟ್ರಮಟ್ಟದಲ್ಲಿ ಹಿಂದಿ ದಿವಸ್ ಆಚರಿಸಲಾಗುತ್ತದೆ. ಇದು ಕೇಂದ್ರ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ. ಈ ಸಂದರ್ಭದಲ್ಲಿ ನಮಗೆ ಏಕೆ ರಾಷ್ಟ್ರಮಟ್ಟದಲ್ಲಿ ದಕ್ಷಿಣ ಭಾರತೀಯ ಭಾಷೆಗಳನ್ನು ಕನ್ನಡ ದಿವಸ, ತಮಿಳು ದಿವಸ, ತೆಲುಗು ದಿವಸ, ಮಲೆಯಾಳಂ ದಿವಸ ಎಂದು …
ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರು ನಿತ್ಯವೂ ಮಾನಸಿಕ – ದೈಹಿಕ ಚಿತ್ರಹಿಂಸೆಗೆ ಒಳಗಾಗಿದ್ದಾರೆ. ಕೇರಳ ಸರ್ಕಾರ ಕನ್ನಡಿಗರ ಸಹನೆಯನ್ನೇ ದೌರ್ಬಲ್ಯ ಎಂದು ಭಾವಿಸಿರುವುದು ಸ್ಪಷ್ಟವಾಗಿದೆ. ಕಳೆದ 25 ವರ್ಷಗಳಿಂದ ಇಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಾ ಬಂದಿದ್ದೇನೆ. ವರ್ಷದಿಂದ ವರ್ಷಕ್ಕೆ ತೊಂದರೆಗಳು ಹೆಚ್ಚುತ್ತಾ ಬಂದಿವೆ. ಭಾಷಾವಾರು …
ಅಣ್ಣ (ತಂದೆ) ಬಿ.ಎಸ್ಸಿ ಪದವೀಧರ. ಹಿರಿಯ ಅಧಿಕಾರಿ. ಆಗೆಲ್ಲ ಎಲ್.ಕೆ.ಜಿ., ಯು.ಕೆ.ಜಿ.ಇರಲಿಲ್ಲ. ನರ್ಸರಿ. ಈ ಹಂತದ ನಂತರ ಸೀದಾ ಕರೆ ತಂದಿದ್ದು ಕನ್ನಡ ಮಾಧ್ಯಮದ ಕಿರಿಯ ಪ್ರಾಥಮಿಕ ಶಾಲೆಗೆ. ಒಂದನೇ ತರಗತಿಗೆ ದಾಖಲಾದ ದಿನ ಚೆನ್ನಾಗಿ ನೆನಪಿದೆ. ನರ್ಸರಿಯಲ್ಲಿ ನನ್ನ ಜೊತೆಯಲ್ಲಿದ್ದ …
