Home ಭಾಷೆಮನೆಯ ಹೊಸ್ತಿಲು ಈಚೆ – ಆಚೆಯ ಬಳಕೆಯ ಭಾಷೆಗಳು

ಮನೆಯ ಹೊಸ್ತಿಲು ಈಚೆ – ಆಚೆಯ ಬಳಕೆಯ ಭಾಷೆಗಳು

by Kumara Raitha
0 comments
ದಕ್ಷಿಣ ಭಾರತದಲ್ಲಿ ತಮಿಳುನಾಡು ಹೊರತುಪಡಿಸಿ ಉಳಿದ ರಾಜ್ಯಗಳು ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿವೆ. ಶಾಲಾಮಕ್ಕಳು ತಮ್ಮ ಮಾತೃಭಾಷೆ ಜೊತೆ ಅನಿವಾರ್ಯವಾಗಿ ಇನ್ನೆರಡು ಭಾಷೆ ಕಲಿಯಬೇಕು. ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗಬೇಕು. “ಹಿಂದಿಯನ್ನು ನಾವು ಕಲಿಯುವುದಿಲ್ಲ. ನಮಗೆ ದ್ವಿಭಾಷಾ ಸೂತ್ರವೇ ಸಾಕು. ಇದರಲ್ಲಿ ಮಾತೃಭಾಷೆ ಮತ್ತು ಇಂಗ್ಲಿಷನ್ನು ಕಲಿಸುತ್ತೇವೆ” ಎಂದು ಹೇಳುವ ಧೈರ್ಯವನ್ನು ತಮಿಳುನಾಡು ಹೊರತುಪಡಿಸಿ ದಕ್ಷಿಣದ ಉಳಿದ ರಾಜ್ಯಗಳು ತೋರಲಿಲ್ಲ. ಕೇಂದ್ರ ಸರ್ಕಾರ ತನ್ನ ಆಧೀನದ ಕಚೇರಿಗಳಲ್ಲಿ (ಬ್ಯಾಂಕೂ ಸೇರಿದಂತೆ) ಹಿಂದಿ ಭಾಷಿಕರನ್ನೇ ಹೆಚ್ಚಾಗಿ ತುಂಬುತ್ತಿರುವುದು ಇನ್ನೊಂದು ಸಮಸ್ಯೆ.
ಇವೆಲ್ಲದರ ನಡುವೆ ಜನರು ಮನೆಯ ಹೊಸ್ತಿಲು ಒಳಗಿನ ಮತ್ತು ಹೊರಗಿನ ಭಾಷೆ ಎಂದು ಮಾಡಿಕೊಂಡಿದ್ದಾರೆ. ಆಯಾ ರಾಜ್ಯಗಳ ಮೂಲ ನಿವಾಸಿಗಳಿಗೆ ಇವೆರಡೂ ಒಂದೇ ಆಗಿರಬೇಕಾದ್ದು ನ್ಯಾಯ. ಇದರಿಂದಾಗಿಯೇ ನಾಡಿನ ಅಸ್ಮಿತೆಯಾಗಿರುವ ಮೂಲನಿವಾಸಿಗಳ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ. ತಮ್ಮ ನಾಡಿನಲ್ಲಿ ತಮ್ಮ ಭಾಷೆಯಲ್ಲಿಯೇ ಮನೆಯ ಹೊರಗೂ ಅಂದರೆ ರಾಜ್ಯ, ಕೇಂದ್ರ, ಖಾಸಗಿ, ವಾಣಿಜ್ಯ ಕಚೇರಿ, ಸಂಸ್ಥೆಗಳಲ್ಲಿ ವ್ಯವಹರಿಸುವುದು ಸಾಧ್ಯವಾಗದಿದ್ದರೆ ಅದನ್ನು ಪ್ರತಿಭಟಿಸಲೇಬೇಕು. ಕನ್ನಡಿಗರು ನಮ್ಮ ಭಾಷಾ ಬಳಕೆ ಹಕ್ಕಿಗೆ ಚ್ಯುತಿ ಬಂದಾಗಲೆಲ್ಲ ಪ್ರತಿಭಟಿಸುತ್ತಿದ್ದೇವೆ. ಇದು ನಮ್ಮ ಭಾಷಾ ಅಸ್ಮಿತೆ ಉಳಿಸುವ ದೃಷ್ಟಿಯಿಂದ ಸೂಕ್ತ ಕೂಡ.
ಒಂದು ರಾಜ್ಯ ಎಂದರೆ ಸ್ಥಳೀಯರಲ್ಲದೇ ಬೇರೆಬೇರೆ ಭಾಷೆಗಳ ಸಮುದಾಯಗಳವರೂ ಇರುತ್ತಾರೆ. ಉದ್ಯೋಗ/ ವ್ಯಾಪಾರಕ್ಕೆ ಅವಕಾಶವಿದ್ದಲ್ಲಿ ವಲಸೆ ಹೋಗುವುದು ಕೂಡ ಮನುಷ್ಯನ ಗುಣ. ವ್ಯಕ್ತಿಗಳು ತಮ್ಮ ರಾಜ್ಯದಿಂದ ಹೊರಗೆ ಬಂದಾಗ ಜಾತಿ ಭಾವನೆಗಿಂತಲೂ ಭಾಷಾ ಭಾವನೆಯಿಂದಲೇ ಬೆರೆಯುತ್ತಾರೆ. ಗುಂಪಾಗಿ ಇರಲು ಬಯಸುತ್ತಾರೆ. ಈ ಪ್ರವೃತ್ತಿಯನ್ನು ಹೊರ ರಾಜ್ಯ/ದೇಶಗಳಲ್ಲಿರುವ ಕನ್ನಡಿಗರಲ್ಲಿಯೂ ನೋಡಬಹುದು. ನಮ್ಮ ರಾಜ್ಯದಲ್ಲಿ ಇರುವ ತಮಿಳು ಭಾಷಿಕರು, ಹಿಂದಿ ಭಾಷಿಕರು ಮತ್ತು ಇತರ ಭಾಷಾ ಸಮುದಾಯಗಳಲ್ಲಿ ನೋಡಬಹುದು.
ಸ್ಥಳೀಯರ ಜವಾಬ್ದಾರಿ:
ಇವರೆಲ್ಲ ತಮ್ಮ ಮನೆಯ ಹೊಸ್ತಿಲಿನಿಂದಾಚೆಯ ದೈನಂದಿನ ವ್ಯವಹಾರಕ್ಕಾಗಿ ಕನ್ನಡವನ್ನೇ ಬಳಸಬೇಕು. ಅಂಥ ಅನಿವಾರ್ಯತೆಯನ್ನು ಸ್ಥಳೀಯರೇ ಉಂಟು ಮಾಡಬೇಕು.ಇದು ನಮ್ಮ ಕರ್ತವ್ಯ. ನಾವು ಕನ್ನಡವನ್ನೇ ಮಾತನಾಡಿದರೆ ಹೊರಗಿನಿಂದ ಬಂದ ಪರಭಾಷಿಕರು ಕನ್ನಡ ಕಲಿಯಲು ಮುಂದಾಗುತ್ತಾರೆ. ಸಾಮಾನ್ಯವಾಗಿ ವ್ಯಾಪಾರಕ್ಕಾಗಿ ಬಂದವರೆಲ್ಲ ಸ್ಥಳೀಯ ಭಾಷೆ ಕಲಿಯುತ್ತಾರೆ. ವ್ಯವಹರಿಸುತ್ತಾರೆ. ಆದರೆ ಇವರಿಗೂ ಹೊಸ್ತಿಲು ಒಳಗಿನ ಭಾಷೆ ಎಂಬುದಿದೆ. ಅಲ್ಲಿಯೂ ನೀವು ಕನ್ನಡ ಮಾತನಾಡಿ ಎಂದು ಹೇಳಲು ಆಗುವುದಿಲ್ಲ.
ಸಮುದಾಯದ ಆಚರಣೆಗಳು:
ಬೇರೆಬೇರೆ ರಾಜ್ಯಗಳಿಂದ ಬಂದವರು ತಮ್ಮ ಮನೆ ಸಮಾರಂಭ, ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ತಮ್ಮ ಸಮುದಾಯದ ಭಾಷೆ ಬಳಸಿದರೆ, ಹೊರಗಿನಿಂದ ಬರುವ ತಮ್ಮ ಸಮುದಾಯದವರನ್ನು ಸ್ವಾಗತಿಸಲು ತಮ್ಮದೇ ಭಾಷೆಯ ಬ್ಯಾನರು (ಇವೆಲ್ಲ ತಾತ್ಕಾಲಿಕ)ಗಳನ್ನು ಹಾಕಿದರೆ ಅವೆಲ್ಲ ಹೊಸ್ತಿಲು ಒಳಗಿನ ಭಾಷಾ ಬಳಕೆ. ಇದನ್ನು ನಾವು ಅತಿಕ್ರಮಿಸಬಾರದು

You may also like

Leave a Comment

error: Content is protected !!