ಕಾಸರಗೋಡು ಜಿಲ್ಲೆಯಲ್ಲಿ ಕನ್ನಡಿಗರು ನಿತ್ಯವೂ ಮಾನಸಿಕ – ದೈಹಿಕ ಚಿತ್ರಹಿಂಸೆಗೆ ಒಳಗಾಗಿದ್ದಾರೆ. ಕೇರಳ ಸರ್ಕಾರ ಕನ್ನಡಿಗರ ಸಹನೆಯನ್ನೇ ದೌರ್ಬಲ್ಯ ಎಂದು ಭಾವಿಸಿರುವುದು ಸ್ಪಷ್ಟವಾಗಿದೆ. ಕಳೆದ 25 ವರ್ಷಗಳಿಂದ ಇಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಾ ಬಂದಿದ್ದೇನೆ. ವರ್ಷದಿಂದ ವರ್ಷಕ್ಕೆ ತೊಂದರೆಗಳು ಹೆಚ್ಚುತ್ತಾ ಬಂದಿವೆ.
ಭಾಷಾವಾರು ಪ್ರಾಂತ್ಯದಲ್ಲಿ ಕಾಸರಗೋಡು ಕನ್ನಡಿಗರು ಈ ಪ್ರದೇಶ ಕರ್ನಾಟಕಕ್ಕೆ ಸೇರಬೇಕು ಎಂದು ತೀವ್ರವಾಗಿ ಒತ್ತಾಯಿಸಿದ್ದರು. ಹಕ್ಕೊತ್ತಾಯ ಮಂಡಿಸಿದ್ದರು. ಆದರೂ ಭಾಷಾವಾರು ರಾಜ್ಯ ಪುರ್ನವಿಂಗಡಣೆ ಸಮಿತಿಯಲ್ಲಿದ್ದ ಕೇರಳದ ಕೆ.ಎಂ. ಫಣಿಕರ್ ರಾಜಕಾರಣದಿಂದಾಗಿ ಈ ಅನನ್ಯ ಕನ್ನಡ ಪ್ರದೇಶ ಕೇರಳ ರಾಜ್ಯ ಸೇರಿತು.
ಇದನ್ನೂ ಓದಿ : ಕಾಸರಗೋಡು ಬಲಿದಾನ ವ್ಯರ್ಥವಾಗಬೇಕೆ …?
ಕನ್ನಡದ ಕಲಿಕೆ
ಕನ್ನಡ, ತುಳು, ಬ್ಯಾರಿ, ಕೊಂಕಣಿ, ಮಲೆಯಾಳಮ್, ಮರಾಠಿ ಇತ್ಯಾದಿ ಭಾಷೆಗಳು ಮನೆಮಾತಾಗಿರುವವರು ಸ್ವಾತಂತ್ರ್ಯ ಪೂರ್ವದಿಂದಲೂ ಶಾಲಾ-ಕಾಲೇಜುಗಳಲ್ಲಿ ಕನ್ನಡವನ್ನೇ ಕಲಿಯುತ್ತಾ ಬಂದಿದ್ದಾರೆ. ಪ್ರೌಢಶಾಲೆ ಪೂರ್ಣಗೊಳ್ಳುವ ತನಕವೂ ಕನ್ನಡವೇ ಕಲಿಕೆ ಭಾಷೆಯಾಗಿರುತ್ತದೆ. ಕೇರಳ ಸರ್ಕಾರ ಇದಕ್ಕೂ ಕುತ್ತು ತರುತ್ತಿದೆ. ಕನ್ನಡದ ಶಾಲೆಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡದ ಗಂಧಗಾಳಿಯೇ ಗೊತ್ತಿರದ ಕಾಸರಗೋಡು ಜಿಲ್ಲೆಯ ಹೊರಗಿನ ಮಲೆಯಾಳ ಭಾಷಿಕ ಶಿಕ್ಷಕರನ್ನು ನೇಮಿಸಿದೆ, ಇಂಥ ಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಸ್ಥಿತಿ ಶೋಚನೀಯವಾಗಿದೆ. ನೇಮಿಸುತ್ತಿದೆ. ಇದರ ವಿರುದ್ಧ ಸ್ಥಳೀಯರು ಪ್ರತಿಭಟನೆ, ಹೋರಾಟ ಮಾಡಿದರು ಅದಕ್ಕೆ ಕಿಮ್ಮತ್ತು ನೀಡಿಲ್ಲ. ಇದರಿಂದ ಕನ್ನಡಿಗರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಇದನ್ನೂ ಓದಿ : ಮನೆಗೆ ಬಿದ್ದ ಬೆಂಕಿ ಇನ್ನೂ ಆರಿಲ್ಲ
ಆಸ್ಪತ್ರೆ ಇದ್ದೂ ಪ್ರಯೋಜನವಿಲ್ಲ
ಕಾಸರಗೋಡು ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಿವೆ. ಇವುಗಳಿದ್ದೂ ಕನ್ನಡಿಗರಿಗೆ ಪ್ರಯೋಜನವಿಲ್ಲ. ಏಕೆಂದರೆ ಇಲ್ಲೆಲ್ಲ ಇರುವುದು ಮಲೆಯಾಳ ಭಾಷಿಕ ವೈದ್ಯರು ಮತ್ತು ಸಿಬ್ಬಂದಿ. ಇವರಿಗೆ ಇಂಗ್ಲಿಷ್, ಮಲೆಯಾಳ ಹೊರತುಪಡಿಸಿ ಬೇರೆ ಭಾಷೆ ಗೊತ್ತಿಲ್ಲ. ಇಂಥವರ ಬಳಿ ಕನ್ನಡದಲ್ಲಿ ತಮ್ಮ ಅನಾರೋಗ್ಯದ ಸಮಸ್ಯೆ ಹೇಳಿಕೊಂಡರೆ ಅವರು ಗ್ರಹಿಸುವುದಾದರೂ ಹೇಗೆ ? ಚಿಕಿತ್ಸೆಯೇ ತಪ್ಪಾಗಬಹುದು ಎಂದು ಹೆದರಿ ಅಲ್ಲಿಗೆ ಹೋಗುವುದಿಲ್ಲ ಎಂದು ಸಾಕಷ್ಟು ಕೃಷಿಕರು ಹೇಳುತ್ತಾರೆ.
ಇದನ್ನೂ ಓದಿ : ಕಾಣದಂತೆ ಮಾಯವಾಗುತ್ತಿರುವ ಕನ್ನಡ !
ಗ್ರಾಮ ಮಟ್ಟದ ಕಚೇರಿಗಳು
ಗ್ರಾಮೀಣರು ತಮ್ಮ ವ್ಯವಹಾರಗಳಿಗಾಗಿ ಗ್ರಾಮ ಮಟ್ಟದ ಕಚೇರಿಗೆ ಹೋಗಲೇಬೇಕು. ಇಲ್ಲಿಯೂ ಕನ್ನಡ ಗೊತ್ತಿಲ್ಲದ ಮಲೆಯಾಳ ಭಾಷಿಕ ಗ್ರಾಮ ಲೆಕ್ಕಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಹೀಗಿರುವಾಗ ಗ್ರಾಮೀಣರು ಕನ್ನಡದಲ್ಲಿ, ತುಳುವಿನಲ್ಲಿ ತಮ್ಮ ಅನಾನುಕೂಲ ಹೇಳಿಕೊಂಡರೂ ಪ್ರಯೋಜನವಿಲ್ಲ. ಇಲ್ಲಿಗೆ ಬರುವ ಅಧಿಕಾರಿಗಳು ಕನ್ನಡ ಕಲಿಯುವ ಪ್ರಯತ್ನವನ್ನು ಮಾಡುವುದಿಲ್ಲ.
ಇದನ್ನೂ ಓದಿ :
ಕನ್ನಡಿಗರ ದಸರಾ ಆಚರಣೆಗೂ ಕೇರಳಿಗರ ಅಡ್ಡಗಾಲು !?
ಮಲೆಯಾಳ ಭಾಷೆಯ ಕಾಗದ ಪತ್ರಗಳು
ಕನ್ನಡ ಪ್ರದೇಶದಲ್ಲಿ ನಡೆಯುವ ಸರ್ಕಾರಿ ವ್ಯವಹಾರಗಳು ಕನ್ನಡದಲ್ಲಿಯೇ ಇರಬೇಕು, ಕಾಗದ ಪತ್ರಗಳು, ನಮೂನೆಗಳು ಸಹ ಕನ್ನಡದಲ್ಲಿಯೇ ಇರಬೇಕು. ಕನ್ನಡ ಬಲ್ಲ ಅಧಿಕಾರಿಗಳನ್ನೇ ನೇಮಿಸಬೇಕು ಎಂಬ ನಿಯಮವಿದೆ. ಇದೆಲ್ಲವನ್ನೂ ಗಾಳಿಗೆ ತೂರಿರುವ ಕೇರಳ ಸರ್ಕಾರ ಎಲ್ಲವನ್ನೂ ಮಲೆಯಾಳೀಕರಣ ಮಾಡಿದೆ. ಇಂಥ ಉಸಿರುಗಟ್ಟುವ ಸ್ಥಿತಿಯಲ್ಲಿ ಕನ್ನಡಿಗರು ನರಳುತ್ತಿದ್ದಾರೆ.
ಎಲ್ಲ ಕಚೇರಿಗಳು ಮಲೆಯಾಳಂ ಮಯ
ಮೊದಲೇ ಹೇಳಿದಂತೆ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಜೊತೆಗೆ ಗ್ರಾಮ ಪಂಚಾಯತ್ ಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾ ಕಚೇರಿಗಳಲ್ಲಿಯೂ ಮಲೆಯಾಳ ಭಾಷಿಕ ಅಧಿಕಾರಿಗಳನ್ನೇ ತುಂಬಿದ್ದಾರೆ. ಹೀಗಿರುವಾಗ ಕನ್ನಡಿಗರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆಗದೇ ಪರದಾಡುತ್ತಿದ್ದಾರೆ.
ಕಾಸರಗೋಡಿನ ರಾಜ್ಯ, ರಾಷ್ಟ್ರೀಯ ಹೆದ್ದಾರಿ ನಾಮಫಲಕಗಳು, ಮಾರ್ಗಸೂಚಿಗಳು ಮಲೆಯಾಳಂ ಮಯವಾಗಿವೆ. ಹೀಗಿರುವಾಗ ಇಲ್ಲಿನ ಕನ್ನಡಿಗರು ಮಾರ್ಗಸೂಚಿ ಫಲಕಗಳ ಅನುಕೂಲ ಪಡೆಯುವುದು ಹೇಗೆ ? ಸರ್ಕಾರಿ, ಖಾಸಗಿ ಕಚೇರಿಗಳ ನಾಮಫಲಗಳು ಸಹ ಮಲೆಯಾಳ ಭಾಷೆಯಲ್ಲಿಯಷ್ಟೇ ಇವೆ.
ಇದನ್ನೂ ಓದಿ :
ಸ್ಥಳನಾಮ ಬದಲಾವಣೆ ; ಸುಳ್ಳು ಹೇಳುತ್ತಿರುವ ಕೇರಳ ಸರಕಾರ !
ಉದ್ದೇಶಪೂರ್ವಕ ವರ್ಗಾವಣೆ, ನೇಮಕಾತಿ
ಮೂಗು ಹಿಡಿದರೆ ಬಾಯಿ ತೆರೆಯುತ್ತದೆ ಎಂಬುದನ್ನು ಕೇರಳ ಸರ್ಕಾರ ಅಕ್ಷರಶಃ ಪಾಲಿಸುತ್ತಿದೆ. ಕಾಸರಗೋಡಿನಲ್ಲಿ ಎಲ್ಲವನ್ನು ಮಲೆಯಾಳಂಮಯ ಮಾಡಿದರೆ ಕನ್ನಡಿಗರು ಅನಿವಾರ್ಯವಾಗಿ ಮಲೆಯಾಳಮ್ ಕಲಿಯುತ್ತಾರೆ, ಕಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದೆ. ಇದರಿಂದ ಕನ್ನಡಿಗರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಭಾಷಾ ವಿಚಾರದಲ್ಲಿ ಇಲ್ಲಿ ಉಸಿರುಗಟ್ಟಿದ ಪರಿಸ್ಥಿತಿ ಇದೆ.
ವಿದ್ಯಾರ್ಥಿಗಳ ಭಾಷಾವೇಶ ಹಿರಿಯರಿಗೂ ಇದ್ದಿದ್ದರೆ ?
ಕೇರಳ ಸರ್ಕಾರ ಭಿಕ್ಷೆ ನೀಡಬೇಕಾಗಿಲ್ಲ
ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸುವುದು, ಕಾಸರಗೋಡಿನಲ್ಲಿ ಸರ್ಕಾರಿ ವ್ಯವಹಾರಗಳೆಲ್ಲವೂ ಕನ್ನಡದಲ್ಲಿ ಇರಬೇಕು ಎಂಬುದು ನಿಯಮವಿದೆ. ಸಾಂವಿಧಾನಿಕವಾಗಿ ಕಾಸರಗೋಡಿಗೆ ಭಾಷಾ ಅಲ್ಪ ಸಂಖ್ಯಾತ ಜಿಲ್ಲೆ ಎಂಬ ಹಕ್ಕು ಇದೆ. ಇದರಡಿ ಕೊಡಬೇಕಾದ ಎಲ್ಲ ಸೌಲಭ್ಯಗಳು ಕನ್ನಡಿಗರಿಗೆ ದೊರೆಯಬೇಕು. ಆದರೆ ಈ ಹಕ್ಕುಗಳನ್ನು ಕೇರಳ ಸರ್ಕಾರ ನೀಡದೆ ವಂಚಿಸುತ್ತಿದೆ.
ಇದನ್ನೂ ಓದಿ :
ಅನನ್ಯ ಸಂಸ್ಕೃತಿಯ ಕತ್ತು ಹಿಚುಕುವ ಕಾರ್ಯ
ಕಾಸರಗೋಡಿನ ಊರುಗಳನ್ನು ಮಲೆಯಾಳೀಕರಣ ಮಾಡುವ ಕೆಲಸವೂ ಭರದಿಂದ ಸಾಗಿದೆ. ಇಲ್ಲಿ ಕೇರಳ ಸರ್ಕಾರ ಮಾಡುತ್ತಿರುವ ಕೆಲಸಗಳು ಅನನ್ಯ ಸಂಸ್ಕೃತಿಯ ಕತ್ತು ಹಿಚುಕುವ ಕಾರ್ಯವಾಗಿದೆ. ಇಲ್ಲಿನ ಕನ್ನಡಿಗರು ಇನ್ನೆಷ್ಟು ದಿನ ಸಹಿಸಲು ಸಾಧ್ಯ. ಈಗಲಾದರೂ ಕರ್ನಾಟಕ ಸರ್ಕಾರ ಇತ್ತ ಪೂರ್ಣ ಪ್ರಮಾಣದಲ್ಲಿ ಕಣ್ದೆರೆದು ನೋಡಿ ಕಾಸರಗೋಡಿನ ಕನ್ನಡಿಗರ ನೆರವಿಗೆ ಧಾವಿಸಬೇಕಾಗಿದೆ.
ಇದನ್ನೂ ಓದಿ :