ನೀವು, ಈಸ್ಟ್ ಮನ್ ಕಲರ್ ಸಿನೆಮಾಗಳನ್ನು ನೋಡಿರಬಹುದು.ಪಾತ್ರಧಾರಿಗಳ ವೇಷ-ಭೂಷಣ,ಸೆಟ್ಟು ಎಲ್ಲವೂ ತುಂಬ ರಂಗು ರಂಗು.ಪಾತ್ರಧಾರಿಗಳ ಮೇಕಪ್ ಅಂತೂ,ಎಳೆಯ ಮಕ್ಕಳು ಮುಖ-ಮೈ-ಕೈಗೆಲ್ಲ ಬಣ್ಣ ಬಳಿದುಕೊಂಡಂತೆ.ಇದಕ್ಕೆ ಕಾರಣವೆನೆಂದರೆ ಬಹುತೇಕ ನಿರ್ದೇಶಕರು, ಕಲಾವಿದರು,ಮೇಕಪ್ ಮ್ಯಾನ್ಸ್,ಕಪ್ಪು-ಬಿಳುಪ್ಪು ಮತ್ತು ಈಸ್ಟ್ ಮನ್ ಕಲರ್ ನಡುವಿನ ಸೂಕ್ಷ್ಮತೆ ಅರಿಯದೇ ಹೋಗಿದ್ದು.ಕಪ್ಪು-ಬಿಳುಪ್ಪು ಕಾಲದ ಮೇಕಪ್ ರಂಗು,ಪ್ರೇಕ್ಷಕರಿಗೆ ರಾಚುತ್ತಿರಲಿಲ್ಲ.ಈ ಮೇಕಪ್ ಮತ್ತು ಆಗ ಬಳಸುತ್ತಿದ್ದ ಲೈಟ್ಸ್ ಗಳಿಗೂ ಮ್ಯಾಚ್ ಆಗಿ ಕಲಾವಿದರು ಸುಂದರವಾಗಿಯೇ ಕಾಣುತ್ತಿದ್ದರು.ಈ ಮ್ಯಾಚಿಂಗ್ ಅನ್ನೇ ಈಸ್ಟ್ ಮನ್ ಕಲರ್ ನಲ್ಲಿಯೂ ಬಯಸಿದ್ದರಿಂದ ರಂಗು ಅಗತ್ಯಕ್ಕಿಂತಲೂ ಹೆಚ್ಚಾಗಿತ್ತು.ಇದರಲ್ಲಿ ಕಲಾವಿದರ ಭಾವಾಭಿವ್ಯಕ್ತಿ, ಸೂಕ್ಷ್ಮತೆ ಮರೆಯಾಗಿತ್ತು.

ಈಸ್ಟ್ ಮನ್ ನಂತರ ಟೆಕ್ನಿ ಕಲರ್ ಸಿನೆಮಾ ಬಂತು.ಆಗಲೂ ಮೇಕಪ್ ತೀವ್ರತೆ ಕಡಿಮೆಯಾಗಲಿಲ್ಲ. ಕಪ್ಪು-ಬಿಳುಪು ಮತ್ತು ಈಸ್ಟ್ ಮನ್ ಹಂತಗಳಿಗಿಂತಲೂ ಸೂಕ್ಷ್ಮ ಕ್ಯಾಮರಾಗಳು ಬಂದರೂ ಇವುಗಳನ್ನು ನೆರಳು-ಬೆಳಕು ಸಂಯೋಜನೆಯಲ್ಲಿ ಸಮರ್ಥವಾಗಿ ಬಳಸಿಕೊಂಡವರು ಕೆಲವರು ಮಾತ್ರ. ಇಂಥವರ ಸಿನೆಮಾಗಳಲ್ಲಿ ಮಾತ್ರ ಮೇಕಪ್ ಸಮಂಜಸ ಎನ್ನುವ ರೀತಿಯಲ್ಲಿತ್ತು.ನಂತರ ಆರ್.ಬಿ. ತದನಂತರ ಆರ್.ಜಿ.ಬಿ.ಕಲರ್ ಮತ್ತು ಶಕ್ತಿಶಾಲಿ ಕ್ಯಾಮರಾ ಮತ್ತು ಲೆನ್ಸ್ ಗಳ ಹಂತದಲ್ಲಿ ಮೇಕಪ್ ಗೊಡವೆ ಬೇಡ ಎಂದು ನಿರ್ಧರಿಸಿದವರು ಬೆರಳೆಣಿಕೆಯಷ್ಟು ನಿರ್ದೇಶಕರು ಮಾತ್ರ. ಆದರೆ ಇಂಥವರ ಬಹುತೇಕ ಸಿನೆಮಾಗಳು ಕಲಾತ್ಮಕ ಎಂಬ ಹಣೆಪಟ್ಟಿಗೆ ಪಾತ್ರ. ಆದ್ದರಿಂದ ಈ ಸಿನೆಮಾಗಳು ಸಾಮಾನ್ಯ ಜನರ ನೋಡುವಿಕೆಯಿಂದ ದೂರ ಉಳಿದವು. ಎಂಬತ್ತರ ದಶಕದಿಂದಿಚೆಗೆ ಭಾರತದಲ್ಲಿ ಟೆಲಿವಿಷನ್ ವಿಸ್ತರಣೆ ಯುಗ ಆರಂಭ. ಟೆಲಿವಿಷನ್ ಒಳಾಂಗಣ ಚಿತ್ರೀಕರಣ ಸಂದರ್ಭಗಳಲ್ಲಿಯೂ ಮೇಕಪ್ ತೀವ್ರತೆ ಕಡಿಮೆಯಾಗಲಿಲ್ಲ.ಸುದ್ದಿವಾಚಕ ವಾಚಕಿಯರ ಮೇಕಪ್ ಮತ್ತಷ್ಟು ಹೆಚ್ಚು. ಎಂಬತ್ತರ ದಶಕದ ಕ್ಯಾಮರಾಗಳಿಗೂ,ಪ್ರಸ್ತುತದ ಕ್ಯಾಮರಾ ಮತ್ತು ಬಗೆಬಗೆಯ ಲೇನ್ಸ್ ಗಳ ಸಾಮರ್ಥ್ಯದಲ್ಲಿ ಭಾರಿ ವ್ಯತ್ಯಾಸ. ಇಂದು ಅತಿಶಕ್ತಿಶಾಲಿ ಕ್ಯಾಮರಾಗಳಿವೆ. ನ್ಯೂಸ್ ರೀಡಿಂಗ್ ಸ್ಟುಡಿಯೋಗಳಿಗಷ್ಟೇ ಅನ್ವಯಿಸಿ ನೋಡಿದರೂ ಈ ಕ್ಯಾಮರಾಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.ಏಕೆಂದರೆ ಬಹುತೇಕ ಟೆಲಿವಿಷನ್ ನ್ಯೂಸ್ ಸ್ಟುಡಿಯೋಗಳ ಬೆಳಕಿನ ಸಂಯೋಜನೆ ರೀತಿಯೇ ಅಸಮರ್ಪಕ. ಪ್ರಖರ ಲೈಟ್ಸ್ ಗಳನ್ನೇ ಬಳಸಲಾಗುತ್ತಿದೆ.

ಪ್ರಖರ ಲೈಟಿನಲ್ಲಿ ಚಾಲನೆಯಲ್ಲಿರುವ ಕ್ಯಾಮರಾ ಮುಂದಿರುವವರು ಡಲ್ ಆಗಿರುತ್ತಾರೆ.ಇಂಥ ಸಂದರ್ಭದಲ್ಲಿ ಸಮರ್ಥ ಮೇಕಪ್ ಈ ಡಲ್ ನೆಸ್  ಕಡಿಮೆಮಾಡಬಲ್ಲುದು. ಆದರೆ ಮೇಕಪ್ ಅವಶ್ಯಕತೆಗಿಂತಲೂ ಹೆಚ್ಚಾಗಿರುತ್ತದೆ. ಕ್ಯಾಮರಾ ಸಾಮರ್ಥ್ಯ, ಲೈಟಿಂಗ್ಸ್ ಮತ್ತು ಸುದ್ದಿವಾಚಕರ ಮೇಕಪ್ ಪರಸ್ಪರ ಸಂಯೋಜಿತವಾಗದೇ ಔಟ್ ಪುಟ್ ನಲ್ಲಿ ಸ್ಕಿನ್ ಟೋನ್ ಕಾಣೆಯಾಗಿರುತ್ತದೆ. ಈ ಚಿತ್ರ ನೋಡುವಿಕೆಗೆ ಹಿತವಾಗಿರುವುದಿಲ್ಲ. ಓವರ್ ಮೇಕಪ್ ಅನ್ನಿಸುತ್ತಿರುತ್ತದೆ.ವಾಚಕ-ವಾಚಕಿಯರ ಸೌಂದರ್ಯ ಕಾಣೆಯಾಗುತ್ತದೆ. ನಿರೂಪಕರ ಜೊತೆ ಒಬ್ಬರಿಗಿಂತ ಹೆಚ್ಚು ಅತಿಥಿಗಳು ಇದ್ದಾಗ ಒಟ್ಟಾರೆ ಚಿತ್ರ ಮತ್ತಷ್ಟು ಅಧ್ವಾನವಾಗಿರುತ್ತದೆ.ಇವರ ಚರ್ಮದ ಕಲರ್ ಬೇರೆ ಬೇರೆಯಾಗಿರುವುದರಿಂದ ಇವರೆಲ್ಲರಿಗೂ ಸೂಕ್ತವಾಗುವ ರೀತಿಯಲ್ಲಿ ಸ್ಟುಡಿಯೋ ಲೈಟಿಂಗ್ಸ್ ಹೊಂದಾಣಿಕೆ ಮಾಡುವುದು ಕಷ್ಟ.ಇಂಥ ಸಂದರ್ಭದಲ್ಲಿ ಕ್ಯಾಮರಾದ ಔಟ್ ಪುಟ್ ಚೆನ್ನ ಎನ್ನಿಸುವುದಿಲ್ಲ

Similar Posts

Leave a Reply

Your email address will not be published. Required fields are marked *