ಕೃಷಿಪರಂಪರೆಯೊಂದಿಗೆ ಬೆಸೆದುಕೊಂಡ ಪಾರಂಪಾರಿಕ ಜಾತ್ರೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸ್ಥಳೀಯ ಆಡಳಿತ ಸೋಲುತ್ತಿದೆ. ವ್ಯವಸ್ಥಿತವಾಗಿ ಆಯೋಜಿಸಿದ್ದಲ್ಲಿ ಸ್ಥಳೀಯ ಟೂರಿಸಂ ಜೊತೆಗೆ ಕೃಷಿಕರು ಬೆಳೆದ ಕಡಲೇಕಾಯಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಾಧ್ಯವಿದೆ. ಬೆಂಗಳೂರಿಗರ ಪ್ರಕಾರ ವರ್ಷದಿಂದ ವರ್ಷಕ್ಕೆ ಕಡಲೇಕಾಯಿ ಪರಿಶೆ ಕಳೆಗುಂದುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಪಳೆಯುಳಿಕೆಯಾಗಿ ಮರೆಯಾಗಿ ಹೋಗುತ್ತದೆ.


ಹೀಗೆ ಆಗದಂತೆ ಏನು ಮಾಡಬಹುದು ? ಈ ಪ್ರಶ್ನೆಯನ್ನು ಮುಖ್ಯವಾಗಿ ಕೇಳಿಕೊಳ್ಳಬೇಕಿರುವುದು ಬೆಂಗಳೂರು ಮಹಾನಗರ ಪಾಲಿಕೆ. ಸ್ಥಳೀಯ ಟೂರಿಸಂ ಹೆಚ್ಚಿದರೆ ತನ್ನ ಬೊಕ್ಕಸವೂ ತುಂಬುತ್ತದೆ ಎಂಬುದನ್ನು ಅದು ಅರಿಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕೃಷಿ-ತೋಟಗಾರಿಕೆ-ಪ್ರವಾಸೋದ್ಯಮ ಮತ್ತು ಪೊಲೀಸ್ ವ್ಯವಸ್ಥೆಗಳನ್ನು ಯೋಜನಾಬದ್ಧವಾಗಿ ತೊಡಗಿಸಿಕೊಳ್ಳಬೇಕು.
1. ಬಹಳ ವರ್ಷಗಳಿಂದಲೂ ತಮಿಳುನಾಡಿನ (ಧರ್ಮಪುರಿ ಜಿಲ್ಲೆ) ವ್ಯಾಪಾರಿಗಳು ಅಲ್ಲಿನ ಕೃಷಿಕರಿಂದ ಶೇಂಗಾ ಖರೀದಿಸಿ ತಂದು ಇಲ್ಲಿ ಮಾರುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆಗಳಲ್ಲಿಯೂ ಕಡಲೇಕಾಯಿ ಬೆಳೆಯನ್ನು ಉತ್ತಮವಾಗಿ ಬೆಳೆಯುತ್ತಿರುವ ರೈತರಿದ್ದಾರೆ. ಅವರನ್ನು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಬೇಕು.
2, ಗುಣಮಟ್ಟದ, ವಿವಿಧ ತಳಿಗಳ ಕಡಲೇಕಾಯಿ ತರುವಂತೆ ಮಾಡಬೇಕು. ಪ್ರತಿ ರೈತ/ವ್ಯಾಪಾರಿ ಮುಂದೆ ಅವರ ಹೆಸರು-ಊರು-ಸಂಪರ್ಕಕ ಸಂಖ್ಯೆ- ತಂದಿರುವ ಕಡಲೇಕಾಯಿ ತಳಿ ವಿವರ ಇರುವ ಕಿರುಬೋರ್ಡ್ ಇಡಬೇಕು.
3.ಚಾಮರಾಜಪೇಟೆ 5ನೇ ಮೈನ್ ಪಕ್ಕದಿಂದ ಬಸವನಗುಡಿ ರಸ್ತೆ ಶುರುವಾಗುತ್ತದೆ. ಇಲ್ಲಿಂದಲೇ ರಸ್ತೆಯ ಎರಡು ಬದಿಯ ಪಾದಚಾರಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಮಾರಾಟಕ್ಕೆ ಅವಕಾಶಕೊಡಬೇಕು.
4. ಕಡಲೇಕಾಯಿ ಪರಿಶೆಯಲ್ಲಿ ಕಡಲೇಕಾಯಿ ಮಾರಾಟಕ್ಕೆ ಆದ್ಯತೆಯಿರಬೇಕು. ಬಂದ ನಾಗರಿಕರು, ಪ್ರವಾಸಿಗರು ವಿವಿಧ ತಳಿಯ ಹಸಿ/ಬೇಯಿಸಿದ/ಹುರಿದ/ ಬೇಯಿಸಿ ಹುರಿದ ಕಡಲೇಕಾಯಿ ಸವಿದು, ಖರೀದಿ ಮಾಡಿ ತೆಗದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು.
5. ಕಡಲೇಕಾಯಿ ಮತ್ತು ಬೆಲ್ಲ ಸವಿಜೋಡಿ. ಪರಿಶೆಯಲ್ಲಿ ಗುಣಮಟ್ಟದ ಬೆಲ್ಲ ದೊರೆಯುವ ವ್ಯವಸ್ಥೆ ಮಾಡಿದರೆ ಬಂದವರು ಖರೀದಿ ಮಾಡಲು ಅನುಕೂಲ. ಇದಕ್ಕಾಗಿ ಬೆಲ್ಲ ತಯಾರಿಸುವ ರೈತರನ್ನು ಆಹ್ವಾನಿಸಬಹುದು. ಸ್ಥಳದಲ್ಲಿಯೇ ಬೆಲ್ಲ/ಜೋನಿ ಬೆಲ್ಲ ತಯಾರಿಸುವ ಪ್ರಾತ್ಯಕ್ಷಿಕೆ ಮಾಡಬೇಕು. ಆಗ ಇವರಿಗೂ ದೊಡ್ಡ ಪ್ರಮಾಣದ ಮಾರುಕಟ್ಟೆ ಲಭ್ಯವಾಗುತ್ತದೆ.

6.ಕಡಲೇಕಾಯಿ ಮೌಲ್ಯವರ್ಧನೆ ಮಾಡಿದ ತಿನಿಸು/ಪದಾರ್ಥಗಳೆಲ್ಲವೂ ಲಭ್ಯವಾಗಬೇಕು
7. ಪರಿಶೆ ನಡೆಯುವ ಮೂರುದಿನ ಬುಲ್ ಟೆಂಪಲ್ ರಸ್ತೆ ಆರಂಭದಿಂದ ಬಿ.ಹೆಚ್.ಎಸ್.ಕಾಲೇಜಿನ ತನಕ ವಾಹನಗಳು ಸಂಚರಿಸದಂತೆ ನೋಡಿಕೊಳ್ಳಬೇಕು.
8. ಬೆಳಗ್ಗೆ 8 ರಿಂದ ರಾತ್ರಿ 10ರ ತನಕವೂ ಪರಿಶೆ ನಡೆಯಬೇಕು. ಆಗ ನಗರದ ಮೂಲೆಮೂಲೆಗಳಲ್ಲಿರುವ ಉದ್ಯೋಗಿಗಳಿಗೂ ಭಾಗವಹಿಸುವ ಅವಕಾಶ ದೊರೆಯುತ್ತದೆ.
9. ಪರಿಶೆ ಬಗ್ಗೆ ಪತ್ರಿಕೆಗಳ ಸ್ಥಳೀಯ ಎಡಿಶನ್ ಅಲ್ಲದೇ ರಾಜ್ಯಮಟ್ಟದ ಎಡಿಶನ್ಗಳಲ್ಲಿಯೂ ಸುದ್ದಿ ಪ್ರಕಟವಾಗಬೇಕು
ನಗರ ಆಡಳಿತ ಮನಸು ಮಾಡಿದರೆ ಮುಂದಿನ ಪರಿಶೆಗಾದರೂ ಈ ವ್ಯವಸ್ಥೆಗಳನ್ನು
ಮಾಡುವುದೇನೂ ಕಷ್ಟವಲ್ಲ.

Similar Posts

Leave a Reply

Your email address will not be published. Required fields are marked *