ನಮಸ್ಕಾರ. ನನ್ನ ಹೆಸರು ಕುಮಾರ ರೈತ. ಸಮಾಜಶಾಸ್ತ್ರ, ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರ. ವೃತ್ತಿ ಪತ್ರಕರ್ತ. ಪತ್ರಿಕೆ/ ಟೆಲಿವಿಷನ್ ಮಾಧ್ಯಮದಲ್ಲಿ ಕಾರ್ಯನಿರ್ವಹಣೆ. ಕೃಷಿ-ಪರಿಸರ-ರಾಜಕೀಯ ಪತ್ರಿಕೋದ್ಯಮದಲ್ಲಿ ವಿಶೇಷ  ಆಸಕ್ತಿ. ಛಾಯಾಗ್ರಾಹಣ, ಚಾರಣ, ಸಿನೆಮಾ, ಸಾಹಿತ್ಯ, ಜಾನಪದ ನೃತ್ಯ, ರಂಗಭೂಮಿ ನನ್ನ ಹವ್ಯಾಸಗಳು. ಬಿಡುವು ಮಾಡಿಕೊಂಡು ಕ್ಯಾಮೆರಾ ಹಿಡಿದು ವನ್ಯಜೀವಿಗಳ ಚಿತ್ರಬೇಟೆ ಆಡುವುದು ನನ್ನ ನೆಚ್ಚಿನ ಕೆಲಸ.

ಈ ಹಿಂದೆ ವರದಿಗಾರ.ಡಾಟ್ ಕಾಮ್ ಹೆಸರಿನ ವೆಬ್ ಸೈಟಿನಲ್ಲಿ ಬರೆಯುತ್ತಿದ್ದೆ. ಅದರಲ್ಲಿ ಆಗಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿದ್ದವು. ಈಗ ನಿಮ್ಮೆದುರಿಗಿರುವುದು ಹೊಸ ವೆಬ್ ಸೈಟ್, ಕುಮಾರ ರೈತ ಡಾಟ್ ಕಾಮ್. ಇದರಲ್ಲಿ ನನ್ನ ಹವ್ಯಾಸಗಳಿಗೆ ಸಂಬಂಧಿಸಿದ ಬರಹಗಳಿರುತ್ತವೆ.

ಬರೆದ ಲೇಖನ, ಕ್ಲಿಕ್ಕಿಸಿದ ಛಾಯಾಚಿತ್ರಗಳಿಗೆ ಸಹೃದಯರ ಅಭಿಪ್ರಾಯ, ವಿಮರ್ಶೆ ಅತ್ಯಗತ್ಯ. ನಿರಂತರ ಸಂವಾದದಲ್ಲಿರೋಣ. ಅದು ಬೆಳಕಿನ ದಾರಿಯಲ್ಲಿಯೇ ಕರೆದುಕೊಂಡು ಹೋಗುತ್ತದೆ. ವಿಶ್ವಾಸವಿರಲಿ….

ವಂದನೆಗಳೊಂದಿಗೆ

ಕುಮಾರ ರೈತ

 

[ninja_form id=1]