ಕಡಕನಾಥ್ ಕಪ್ಪುಕೋಳಿಯ ಬಗ್ಗೆ ತಿಳಿದಿದ್ದಾಯ್ತು. ಈಗ ಅವುಗಳ ಸಾಕಣೆ ವಿವರ ಗಮನಿಸೋಣ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಡಿಮೆ ರಿಸ್ಕ್, ಲಾಭ ಅಧಿಕ ಎನ್ನಬಹುದು. ದೇಶದಾದ್ಯಂತ ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ ಮಧ್ಯಪ್ರದೇಶ ಸರ್ಕಾರ MPKadakNath ಹೆಸರಿನ ಆ್ಯಪ್ ಶುರು ಮಾಡಿದೆ.

ಈ ಕೋಳಿಯ ಅಧಿಕ ರುಚಿಯಷ್ಟೇ ಬೆಲೆಯೂ ಕೂಡ ಸದ್ಯಕ್ಕೆ ಅಧಿಕ. ಹ್ಯಾಚರಿಗಳಲ್ಲಿ ಕಪ್ಪುಕೋಳಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಕೋಳಿಮರಿಗಳನ್ನು 80 ರಿಂದ 90 ರೂ.ಗಳವರೆಗೂ ಮಾರಲಾಗುತ್ತಿದೆ. ನಕ್ಸಲ್ ಪೀಡಿತ ಪ್ರದೇಶ ಛತ್ತೀಸಗಡ್ ದಲ್ಲೂ ಇದು ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇಲ್ಲಿಯ ದಾಂತೇವಾಡದಲ್ಲಿ ‘ಕಾಲಿಮಾಸಿ’ನ ಎಂದು ಕರೆಯಲಾಗುವ ಇದನ್ನು ಅತ್ಯತ್ಕೃಷ್ಟ ತಳಿಯೆಂದೇ ಪರಿಗಣಿಸಲಾಗುತ್ತದೆ. ಸಾಮಾನ್ಯ ಬಾಯ್ಲರ್ ಕೋಳಿಯ ಒಂದು ಕೆ.ಜಿ. ಮಾಂಸಕ್ಕಿರುವಷ್ಟು ಬೆಲೆ ಇದ್ರ ಒಂದು ದಿನದ ಮರಿಗೆ ಇರೋದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅಂದ್ರೆ ಸಾಮಾನ್ಯ ಕೋಳಿಗಿಂತ ಇದು 4-5 ಪಟ್ಟು ದುಬಾರಿ. 3 ತಿಂಗಳಲ್ಲಿಯೇ ಇದ್ರಿಂದ ಲಾಭ ಪಡೆಯಬಹುದಾಗಿದೆ.

ಇದ್ರ ಫೌಲ್ಟ್ರಿ ಹೇಗೆ..?

ಸ್ವ-ಉದ್ಯೋಗದಾರರಿಗೆ,ಕಡಿಮೆ ಬಂಡವಾಳದ ಕೃಷಿಕರಿಗೆ ಇದು ಉತ್ತಮ.  ಮಹಿಳಾ ಕೃಷಿಕರಿಗ ಇದು ಅತ್ಯಂತ ಉಪಯುಕ್ತ. ಕೃಷಿತಜ್ಞರು ಇದನ್ನು ಆತ್ಮವಿಶ್ವಾಸದ ಉದ್ಯೋಗ ಎನ್ನುತ್ತಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ 1 ಕೆ.ಜಿ.ಗೆ 500 ರೂ. ಬೆಲೆಯಿರುತ್ತದೆ. ಮಹಾರಾಷ್ಟ್ರದಲ್ಲಿ ಕೆಲವೊಮ್ಮೆ 600 ರೂ.ತಲುಪಿದೆ ಎನ್ನಲಾಗುತ್ತದೆ. ಸಗಟು ಮಾರುಕಟ್ಟೆಗಳಲ್ಲಿ 500 ರೂ. ಇದೆ.

ಕುಕ್ಕುಟ ಪಾಲನೆಯಲ್ಲಿ ಕಪ್ಪುಕೋಳಿ ಸಾಕಾಣೆ ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಜಾನುವಾರು, ಕುಕ್ಕುಟ ಪ್ರದರ್ಶನ ಮಳಿಗೆಗಳು, ಕೃಷಿಮೇಳಗಳಲ್ಲೂ ಕೂಡ ಸಂಬಂಧಿತ ಇಲಾಖಾ ಅಧಿಕಾರಿಗಳಿಂದಲೂ ಇದರ ಬಗ್ಗೆ ಮಾಹಿತಿ ಪಡೆಯಬಹುದು. ಕೆಲ ಖಾಸಗಿ ಕಂಪೆನಿಗಳಿಂದ ಮರಿಗಳನ್ನು ಪಡೆದು ಸಾಕಬಹುದು. ಕಪ್ಪುಕೋಳಿಯ ಲಾಭವನ್ನರಿತೇ ಕೆಲ ಕಂಪೆನಿಗಳು ಒಪ್ಪಂದದ ಮೇರೆಗೆ ಸಾಕಣೆಗೆ ಅವಕಾಶ ಮಾಡಿಕೊಡುತ್ತವೆ. ಕಂಪನಿಗಳಿಂದ ಆರೋಗ್ಯವಂತ ಮರಿಗಳನ್ನು ಖರೀದಿಸಬಹುದು. ಇದಕ್ಕೆ 50 ರಿಂದ 75 ಸಾವಿರವರೆಗೆ ಬಂಡವಾಳ ತಗಲುತ್ತದೆ. ಪೂರ್ತಿಹಣದ ಬದಲಿಗೆ ಮುಂಗಡಹಣವನ್ನು ಹಂತಹಂತವಾಗಿ ಪಡೆಯುವ ಕಂಪೆನಿಗಳು ಇವೆ. ಆರಂಭದಲ್ಲಿ ಇದಕ್ಕೆ 20 ರಿಂದ 25 ಸಾವಿರ ಮಾತ್ರ ನೀಡಬೇಕಾಗುತ್ತದೆ.

ಸಮಯಕ್ಕೆ ಸರಿಯಾಗಿ ಆಹಾರ, ನೀರು ನೀಡಬೇಕು.. ಸಾಕಣೆ ವೇಳೆಯಲ್ಲಿ ಕೋಳಿಗಳಲ್ಲಿ ಏನಾದರೂ ಆರೋಗ್ಯದ ತೊಂದರೆ ಅಥವಾ ಬದಲಾವಣೆಗಳು ಕಂಡುಬಂದಲ್ಲಿ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಕಂಪೆನಿಗಳ ಪಶುವೈದ್ಯರು ಅಥವಾ ಪಶುವೈದ್ಯ ಇಲಾಖೆಯನ್ನು ಸಂಪರ್ಕಿಸಬಹುದು.  ಒಂದು ತಿಂಗಳ ವರೆಗೆ ಮುತುವರ್ಜಿಯಿಂದ ಪೋಷಿಸಬೇಕಾಗುತ್ತದೆ.

 ಇದ್ರ ಶೆಡ್ ನಿರ್ಮಾಣಕ್ಕೆ ಅಂದಾಜು 50 ಸಾವಿರವರೆಗೂ ತಗಲಬಹುದು. ಒಂದು ಕೋಳಿಗಳಿಂದ ತಿಂಗಳಿಗೆ 1,500 ರೂ. ಲಾಭ ಪಡೆಯಬಹುದು. ಕೆಲ ಕಂಪೆನಿಗಳು ಅಗ್ರಿಮೆಂಟ್ ಕೂಡ ಮಾಡಿಕೊಡುತ್ತವೆ. ಇಂಟರ್ನೆಟ್ಗಳಲ್ಲಿ ಕೆಲ ಕಂಪೆನಿಗಳ ಜಾಹೀರಾತುಗಳನ್ನು ಪಡೆಯಬಹುದು.

 

ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳ ಸರ್ಕಾರಗಳು ಇದ್ರ ಪಾಲನೆಗೆ ಸಹಕರಿಸುತ್ತಿವೆ. 100 ಮರಿಗಳ ಸಾಕಣೆಗೆ 150 ಸ್ಕ್ವೇರ್ ಫೀಟ್ ಜಾಗ ಬೇಕಾಗುತ್ತದೆ. ಸಾವಿರ ಕೋಳಿಗಳಿಗೆ 1500 ಸ್ಕ್ವೇರ್ ಫೀಟ್ ಜಾಗ ಅವಶ್ಯಕತೆ ಬೀಳುತ್ತದೆ. ಶೆಡ್ಗೆ ಪ್ರತಿ ದಿನ 3 ಗಂಟೆ ವಿದ್ಯುತ್ ಅವಶ್ಯಕತೆಯಿದೆ. ಒಂದ್ವೇಳೆ ಶೆಡ್ ಊರಿನಿಂದ ಹೊರಗೆ ಇದೆ ಅನ್ನೋದಾದ್ರೆ ಅಗತ್ಯ ನೀರು, ವಿದ್ಯುತ್ತಿನ ಸಮರ್ಪಕ ಪೂರೈಕೆಯತ್ತ ಗಮನಹರಿಸುವುದು ಅಗತ್ಯ.

ರಾತ್ರಿ ವೇಳೆ ಮರಿಗಳಿಗೆ ಕೋಳಿಗಳಿಗೆ ಅಷ್ಟೊಂದು ಆಹಾರ  ಅಗತ್ಯವಿಲ್ಲ ಎನ್ನಲಾಗುತ್ತದೆ. ಫಾರ್ಮನ್ನು ಆದಷ್ಟು ಎತ್ತರದ ಜಾಗದಲ್ಲಿ ನಿರ್ಮಿಸುವುದು ಉತ್ತಮ. ಯಾಕಂದರೆ ನೀರು ನಿಲ್ಲಬಾರದು. ಎರಡೂ ಫೌಲ್ಟ್ರಿಫಾರಂಗಳು ಹತ್ತಿರವಿರಬಾರದು ಎನ್ನುತ್ತಾರೆ ಮಾಹಿತಿದಾರರು. ಒಂದು ಶೆಡ್ಡಿನಲ್ಲಿ ಒಂದೇ ಬ್ರೀಡಿನ ಮರಿಗಳನ್ನು ಇಡಬೇಕು. ಶೆಡ್ಡಿನಲ್ಲಿ ಗಾಳಿ,ಬೆಳಕಿನ ವ್ಯವಸ್ಥೆ ಚೆನ್ನಾಗಿರಲಿ. ಅವುಗಳು ನೀರು ಕುಡಿವ ಪಾತ್ರೆಗಳನ್ನು 2-3 ದಿನಕ್ಕೊಮ್ಮೆ ಸ್ವಚ್ಛಗೊಳಿಸುತ್ತಿರಬೇಕು. ಇವೆಲ್ಲದರತ್ತ ಗಮನ ಹರಿಸಿದರೆ ಕೋಳಿಗಳನ್ನು ರೋಗರುಜಿನಗಳಿಂದ ದೂರವಿಡಬಹುದು.

ಮುಂದುವರಿಯುತ್ತದೆ …

Similar Posts

Leave a Reply

Your email address will not be published. Required fields are marked *