Site icon ಕುಮಾರರೈತ

ಹಿಂಬಾಕಿ ಇದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದೇ ?

ಇಂಥದ್ದೊಂದು ಪ್ರಶ್ನೆಯನ್ನು ಸಾಕಷ್ಟು ಜನ ಕೇಳುತ್ತಿದ್ದಾರೆ. ಇಂದಿಗೂ ಹಲವರಲ್ಲಿ “ಗೃಹಜ್ಯೋತಿ” ಯೋಜನೆ ಕುರಿತು ಗೊಂದಲಗಳಿವೆ. ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಈ ಗೊಂದಲಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡುತ್ತಿದೆ.

ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ;  “ ಉಚಿತ ಬೆಳಕು, ಸುಸ್ಥಿರ ಬದುಕು” ಘೋಷಣೆಯಡಿ ಇಂಧನ ಇಲಾಖೆ ಮೂಲಕ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಇದರ ಮೂಲಕ 200 ಯೂನಿಟ್ ತನಕ ವಿದ್ಯುತ್ ಅನ್ನು ಉಚಿತವಾಗಿ ಬಳಸುವ ಸದವಾಕಾಶ ನೀಡಿದೆ.  ಜೂನ್ 18, 2023 ರಿಂದ ನೋಂದಣಿ ಆರಂಭವಾಗಿದೆ.

ಗಮನಿಸಬೇಕಾದ ಅಂಶವೇನೆಂದರೆ ಇಂಧನ ಇಲಾಖೆ “ಗೃಹಜ್ಯೋತಿ” ಯೋಜನೆಗೆ ನೋಂದಣಿ ಮಾಡಲು ಕಾಲಮಿತಿ ನಿಗದಿ ಮಾಡಿಲ್ಲ. ಆದರೆ ನೋಂದಣಿ ಮಾಡಿದ ನಂತರವೇ ಈ ಪ್ರಮುಖ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ.

ಈ ಯೋಜನೆಯ ಫಲಾನುಭವಿಗಳಾಗಲು  ರಾಜ್ಯ ಸರ್ಕಾರದ್ದೇ ಆದ ಸೇವಾಸಿಂಧು ಪೋರ್ಟಲ್ ಮುಖಾಂತರ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯನ್ನು ಸರಳವಾಗಿ ಮಾಡುವಂತೆ ಅವಕಾಶ ನೀಡಿದ್ದಾರೆ.   ವಿದ್ಯುತ್ ಬಳಕೆದಾರರು  ಮೊಬೈಲ್ (ಸ್ಮಾರ್ಟ್ ಪೋನ್) ಬಳಸಿಯೂ ನೋಂದಣಿ ಮಾಡಬಹುದು.

ಗೃಹಜ್ಯೋತಿ  ; ಹಿಂಬಾಕಿ ಇದ್ದರೂ ದೊರಕಲಿದೆ ಪ್ರಯೋಜನ

  1. ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆಪ್ಟೆಂಬರ್ .30 ರೊಳಗೆ ಪಾವತಿಸಬೇಕು (ಮೂರು ತಿಂಗಳು ಕಾಲಾವಕಾಶ ಇದೆ).
  2. ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ, ಆಗಸ್ಟ್ ತಿಂಗಳ ಬಿಲ್’ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್’ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ (ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25 ನೇ ತಾರೀಖಿನಿಂದ ಮುಂದಿನ ತಿಂಗಳ 25 ತಾರೀಖಿನವರೆಗೆ).
  3. ಈ ಪ್ರಯೋಜನ ಪಡೆಯಲು ನಿಮ್ಮ ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು.
  4. ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್’ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ.

ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ. ಈ ಕೆಳಗಿನ ಕೊಂಡಿ ಬಳಸಿ “ಗೃಹಜ್ಯೋತಿ” ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್,  ಗ್ರಾಮ ಪಂಚಾಯತಿ, ನಾಡಕಚೇರಿ, ಇಂಧನ ಇಲಾಖೆ ಕಚೇರಿಗಳಲ್ಲಿಯೂ ನೋಂದಣಿ ಮಾಡಬಹುದು.

https://sevasindhugs.karnataka.gov.in/

ಹೆಚ್ಚಿನ ಮಾಹಿತಿಗೆ ಈ ಮುಂದಿನ ಲೇಖನ  ಓದಬಹುದು

http://ಗೃಹಜ್ಯೋತಿ ನೋಂದಣಿ ಸರಳ ಸುಲಭ

https://kumararaitha.com/grihajyoti-registration-is-simple-and-easy/

Exit mobile version