ಅರೇ ಏನಿದು ಮೈಸೂರು ಪಾಕು ಪ್ರಸಾದ ! ಅಂತ ಆಶ್ಚರ್ಯವಾಯಿತೇ. ಇದು ಗೆಳೆಯ ಪ್ರಸಾದ್ ಅವರು ಸ್ವತಃ ತಯಾರಿಸಿದ ಹೋಮ್ ಮೇಡ್ ಮೈಸೂರು ಪಾಕ್. ಇದುವರೆಗೂ ಅವರನ್ನು ಎಂ.ಎಸ್. ಪ್ರಸಾದ್ ಅಂತ ಕರೆಯುತ್ತಿದ್ದೆವು. ಈಗ ಮೈಸೂರು ಪಾಕು ಪ್ರಸಾದ ! ಅಂತ ಕರೆಯಬಹುದು. ಕಾಕತಾಳಿಯವೆಂದರೆ ಅವರ ಇನ್ಸಿಯಲ್ ಎಂ.ಎಸ್. ಅವರು ಮೊಟ್ಟಮೊದಲಿಗೆ ತಯಾರಿಸಿದ ಸಿಹಿ ಮೈಸೂರು ಪಾಕ್, ಇದಕ್ಕೆ ಇಟ್ಟ ಬ್ರಾಂಡ್ ನೇಮ್ ಸಿಹಿಮನೆ. ಅಲ್ಲಿಗೆ ಎಂ.ಎಸ್. ಸರಿ ಹೋಯ್ತಲ್ಲ !
ಫೇಸ್ಬುಕ್ ಬೆಸೆದ ಗೆಳತನ
ಅದಿರಲಿ ನೀವಿಬ್ಬರೂ ಹೇಗೆ ಪರಿಚಯ ಎಂಬ ಪ್ರಶ್ನೆ ಮೂಡಬಹುದು. ಭಾರತಕ್ಕೆ ಫೇಸ್ಬುಕ್ ಬಂದ ಹೊಸತರಲ್ಲಿಯೇ ನಮ್ಮ ಸ್ನೇಹ ಮೂಡಿತು. ಸಾಕಷ್ಟು ಬಾರಿ ಭೇಟಿಯೂ ಆಗಿದ್ದೇವೆ. ಚಾಟ್ ನಡೆಯುತ್ತಿರುತ್ತದೆ. ಹಾಸ್ಯಮಯ ಶೈಲಿಯ, ಓದಿದೊಡನೆ ಮೊಗದಲ್ಲಿ ಮುಗುಳ್ನಗೆ ಮೂಡಿಸುವ ಪ್ರಸಾದರ ಪೋಸ್ಟುಗಳೆಂದರೆ ನನಗೆ, ಅವರ ಅಪಾರ ಗೆಳೆಯರ ಬಳಗಕ್ಕೆ ಅಚ್ಚುಮೆಚ್ಚು.
ಇತ್ತೀಚಗೆ ಪ್ರಸಾದ್ ಮೈಸೂರು ಪಾಕ್ ಅನ್ನು ಮನೆಯಲ್ಲಿಯೇ ಆರ್ಡರ ಬಂದ ನಂತರ ಫ್ರಶ್ ಆಗಿ ತಯಾರಿಸಿ ತಲುಪಿಸುವ ಯೋಜನೆ ಪೋಸ್ಟ್ ಮಾಡಿದ್ದರು. ಶುಭಾಶಯಗಳ ಸುರಿಮಳೆಯೇ ಆಗಿತ್ತು. ನಾನು ಕೂಡ ಆಗಸ್ಟ್ ೧೨ರ ರಾತ್ರಿ ಮೆಸೇಜ್ ಮಾಡಿ ಅರ್ಧ ಕೆಜಿಗೆ ಆರ್ಡರ್ ಮಾಡಿದ್ದೆ. ಗೂಗಲ್ ಪೇ ಕೂಡ ಮಾಡಿದೆ. ನಾಳೆಯೇ ತಂದುಕೊಡುವುದಾಗಿ ಹೇಳಿದರು.
ಸಮಯ ಪಾಲನೆ
ಹೇಳಿದ ಸಮಯಕ್ಕೆ ಸರಿಯಾಗಿ ಇಂದು (ಆಗಸ್ಟ್ ೧೩) ಬನಶಂಕರಿ ರಿಂಗ್ ರೋಡ್ ಜನತಾ ಬಜಾರ್ ನಲ್ಲಿ ಭೇಟಿಯಾದೆವು. ಸುವಾಸಿತ ಪರಿಮಳ ಬೀರುತ್ತಾ ತನ್ನ ಇರುವಿಕೆ ಸಾರುತ್ತಿದ್ದ ಮೈಸೂರು ಪಾಕ್ ಬಾಕ್ಸ್ ಅನ್ನು ಕೈಗಿತ್ತರು. ಇಬ್ಬರಿಗೂ ಪ್ರಿಯವಾದ ಕಾಫಿ ಸಮಾರಾಧನೆಯೂ ಆಯಿತು. ಪಾಕಿನ ಸುತ್ತ ಮಾತುಕತೆಯೂ ನಡೆಯಿತು.
ಮೈಸೂರು ಪಾಕೇ ಏಕೆ ?
ಮೈಸೂರು ಸೀಮೆಯವರಿಗೆ ಅಂದರೆ ಮೈಸೂರು, ಮಂಡ್ಯ, ಬೆಂಗಳುರು, ಹಾಸನ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು ಭಾಗಗಳವರಿಗೆ ಮೈಸೂರು ಪಾಕ್ ಎಂದರೆ ಅಚ್ಚುಮೆಚ್ಚು. ಆದರೆ ಇದನ್ನು ಮನೆಮಟ್ಟದಲ್ಲಿಯೇ ತಯಾರಿಸಿ ಮಾರಾಟ ಮಾಡುವವರ ಸಂಖ್ಯೆ ಅತೀ ವಿರಳ. ಇದಕ್ಕೆ ಎಂದೋ ಕಮರ್ಶಿಯಲ್ ಟಚ್ ಬಂದಾಗಿದೆ. ಸಾಮಾನ್ಯವಾಗಿ ಸಿಹಿ ತಿನಿಸುಗಳ ಅಂಗಡಿಗಳಲ್ಲಿ ಮಾರಾಟ ಮಾಡುವ ಮೈಸೂರು ಪಾಕ್ ಎಂದರೆ ಸಿಹಿ ಜಾಸ್ತಿ. ಈ ಎಲ್ಲ ಹಿನ್ನೆಲೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ಎನಿಸುವ ರೀತಿಯಲ್ಲಿ ಮೈಸೂರು ಪಾಕ್ ಅನ್ನು ಮಾಡಿದರೆ ಹೇಗೆ ಎಂಬ ಐಡಿಯಾ ಹೊಳೆದಿದೆ. ಅದಕ್ಕೆ ಪ್ರಸಾದ್ ಅವರ ಪತ್ನಿಯ ಒತ್ತಾಸೆಯೂ ದೊರೆತಿದೆ.
ಮುಖ್ಚಿಟ್ಟು ಹೊಡೆಯುವುದಿಲ್ಲ:
ಮೈಸೂರು ಸೀಮೆಯಲ್ಲಿ ಹಿತಮಿತಕ್ಕಿಂತ ಸಿಹಿ ಹೆಚ್ಚಾಗಿದ್ದರೆ ತಿಂದ ಬಳಿಕ ಮುಖ್ಚಿಟ್ಟು ಹೊಡೆಯುತ್ತದೆ ಅಂತೀವಿ. ಒಂದು ತುಂಡಿಗಿಂತ ಹೆಚ್ಚು ತಿನ್ನಲು ಆಗುವುದಿಲ್ಲ. ಪ್ರಸಾದ್ ಅವರ ಸಿಹಿಮನೆ ತಯಾರಿಕೆಯ ಮೈಸೂರು ಪಾಕ್ ಇದಕ್ಕೆ ಅಪವಾದ. ಅವರವರ ಶಕ್ತಿಯನುಸಾರ ಎಷ್ಟು ಬೇಕಾದರೂ ತಿನ್ನಬಹುದು. ಮನೆಗೆ ಬಂದು ಸ್ಯಾಂಪಲ್ ನೋಡಲು ಒಂದು ಚೂರೇ ಬಾಯಿಗಿಟ್ಟ ನಾನು ಒಮ್ಮೆಲೆ ಎರಡು ಪೀಸ್ ತಿಂದೆ. ಹಿತಮಿತವಾದ ಸಿಹಿ, ಬಾಯಿಗಿಟ್ಟ ಕೂಡಲೇ ಕರಗುವ ಗುಣ ಇದೆ. ಶುದ್ದತುಪ್ಪ ಬಳಸಿಯೇ ತಯಾರಿಸಿದ್ದು ಎನ್ನುವುದೂ ತಿಳಿಯುತ್ತದೆ.
ಉತ್ತಮ ಪ್ಯಾಕಿಂಗ್:
ಶುದ್ದತುಪ್ಪದಿಂದಲೇ ತಯಾರಿಸಿದಾಗ ವಾತಾವರಣದ ಬಿಸಿಗೆ ಅದು ಕರಗಿ ಪ್ಯಾಕಿಂಗ್ ಹೊರಗೂ ಪಸರಿಸುತ್ತದೆ. ಹೀಗಾಗದಂತೆ ಪುಡ್ ಕ್ವಾಲಿಟಿ ಬಾಕ್ಸಿನಲ್ಲಿ ಅದನ್ನು ಪ್ಯಾಕ್ ಮಾಡಿ ಮತ್ತೆ ಅದರ ಮೇಲೆ ಪಾರದರ್ಶಕ ಟೇಪ್ ಅಂಟಿಸಿದ್ದರು. ಹೀಗಿರುವಾಗ ಎಷ್ಟು ದೂರ ಬೇಕಾದರೂ ಈ ಮೈಸೂರು ಪಾಕ್ ಅನ್ನು ತೆಗೆದುಕೊಂಡು ಹೋಗಬಹುದು. ಅದರ ಗುಣಮಟ್ಟ ಗಮನಿಸಿದರೆ ಸಾಕಷ್ಟು ಸಮಯ ಇಟ್ಟುಕೊಂಡು ತಿನ್ನಬಹುದು. ಇಷ್ಟೆಲ್ಲ ಹೇಳಿದ ಮೇಲೆ ಬೆಲೆ ದುಬಾರಿಯಿರಬಹುದು ಎನಿಸಿತಲ್ಲವೇ ? ಖಂಡಿತ ಇಲ್ಲ. ಒಂದು ಕೆಜಿಗೆ ರೂ. ಏಳುನೂರು. ಬೆಂಗಳೂರಿನಲ್ಲಾದರೆ ಅವರೇ ತಲುಪಿಸುತ್ತಾರೆ. ಅರ್ಧಕೆಜಿಯನ್ನೂ ಕೊಡುತ್ತಾರೆ (ಕಾಲು ಕೆಜಿ ಕೊಡುತ್ತಾರಾ ಇಲ್ಲವೋ ಪೋನ್ ಮಾಡಿ ಕೇಳಬಹುದು) ನಿಮಗೂ ಆರ್ಡರ್ ಮಾಡಬೇಕೆನ್ನಿಸಿತೇ. ಹಾಗಿದ್ದರೆ ಮೊಬೈಲ್ ನಂಬರ್ ೯೮೮೬೬ ೦೪೪೬೭ ಗೆ ಕರೆಮಅಡಿ ಅಥವಾ ವಾಟ್ಸಪ್ ಮಾಡಿ.
ಗುಣಮಟ್ಟದ ಮೈಸೂರು ಪಾಕ್ ತಲುಪಿಸಿದ್ದಕ್ಕಾಗಿ ಧನ್ಯವಾದ ಪ್ರಸಾದ್, ನಿಮ್ಮ ಈ ಕಾರ್ಯ ಯಶ ಸಾಧಿಸಲಿ ಎಂಬ ಹಾರೈಕೆಗಳು !!