ಸ್ಮಾರ್ಟ್ ಪೋನ್ ಬಂದ ನಂತರವಂತೂ ಪ್ರತಿದಿನ ಸೌಲಭ್ಯಗಳು ಅಪ್ ಡೇಟ್ ಆಗುತ್ತಲೇ ಇರುತ್ತವೆ. ವಾಟ್ಸಪ್, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಯುಪಿಐ ಆಪ್ ಗಳು, ಖಾತೆಗಳ ಪಾಸ್ ವರ್ಡ್ ಸೇವ್ ಮಾಡಿರುವುದು, ಅಮೂಲ್ಯ ಪೋಟೋಗಳು ಹೀಗೆ ಎಲ್ಲವೂ ಅದರಲ್ಲಿ ಇರುತ್ತದೆ.
ಬೇಸಿಕ್ ಪೋನ್ ಆಗಿದ್ದಾಗ ಕಳೆದು ಹೋದರೆ ಅಥವಾ ಕಳ್ಳತನ ಆಗಿದ್ದರೆ ಹೆಚ್ಚಿನವರು ಚಿಂತೆ ಮಾಡುತ್ತಿರಲಿಲ್ಲ. ಸಿಮ್ ಬ್ಲಾಕ್ ಮಾಡಿಸಿ ಹೊಸ ಸಿಮ್ ಖರೀದಿ ಮಾಡುತ್ತಿದ್ದರು. ಆದರೆ ಈಗ ಹಾಗೆ ಮಾಡುವಂತೆಯೇ ಇಲ್ಲ. ಸರ್ವಸ್ವವೂ “ಜಂಗಮವಾಣಿ” ಅರ್ಥಾತ್ ಮೊಬೈಲ್ ಪೋನ್ ನಲ್ಲಿ ಇರುತ್ತದೆ.
ಒಂದು ವೇಳೆ ನಿಮ್ಮ ಪೋನ್ ಕಾರಣಾಂತರಗಳಿಂದ ಕಳೆದು ಹೋಗಿದ್ದರೆ ಅಥವಾ ಕಳ್ಳತನವಾಗಿದ್ದರೆ ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ. ಒಂದು ವೇಳೆ ಅಲ್ಲಿ ದೂರು ದಾಖಲಿಸಲು ನಿರಾಕರಿಸಿದರೆ ಸೋಶಿಯಲ್ ಮೀಡಿಯಾ ಮೂಲಕ ರಾಜ್ಯದ ಡಿಜಿಪಿ ಗಮನಕ್ಕೆ ತರಬಹುದು.
ದೂರು ದಾಖಲಿಸಿ ಎಫ್.ಐ.ಆರ್. ಪ್ರತಿ ಪಡೆದುಕೊಂಡ ನಂತರ ಮುಂದೇನು ಮಾಡಬೇಕು ಎಂಬುದನ್ನು ಡಿಜಿಪಿ (ಡೈರೆಕ್ಟರ್ ಜನರಲ್ ಆಫ್ ಪೊಲೀಸ್) ಅವರು ಮಾಡಿರುವ ಟ್ವೀಟ್ (ಈಗ ಎಕ್ಸ್ ) ತಿಳಿಸುತ್ತದೆ. ವಿವರಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ಅದರಲ್ಲಿ ಇರುವ ವಿಡಿಯೋ ಗಮನಿಸಿ. ಇಂಥ ಸಂದರ್ಭದಲ್ಲಿ ಮುಂದೇನು ಮಾಡಬೇಕೆಂದು ಹಂತಹಂತವಾಗಿ ವಿವರಿಸಿದ್ದಾರೆ.
ನಿಮ್ಮ ಮೊಬೈಲ್ ಕಳೆದು ಹೋಗಿದೆಯೇ..? ಕಳ್ಳತನವಾಗಿದೆಯೇ..? ಹಾಗಾದರೇ ಮುಂದೆ ಅನುಸರಿಸಬೇಕಾದ ಕ್ರಮಗಳನ್ನು ತಿಳಿಯಲು ಈ ವೀಡಿಯೋವನ್ನು ಗಮನಿಸಿ. #SafetyFirst pic.twitter.com/86twwycC05
— DGP KARNATAKA (@DgpKarnataka) August 27, 2023