ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯಗಳನ್ನು ನಿಖರ ಮತ್ತು ವೇಗವಾಗಿ ಕಲಿಯುವುದು, ಮನನ ಮಾಡಿಕೊಳ್ಳುವುದು, ಮನನ ಮಾಡಿಕೊಂಡಿರುವುದನ್ನು ಪರೀಕ್ಷಾ ಸಂದರ್ಭಗಳಲ್ಲಿ ನೆನಪಿಟ್ಟುಕೊಂಡು ಉತ್ತರಿಸುವುದು ಅತ್ಯಗತ್ಯ. ಅದರಲ್ಲೂ ಹಲವಾರು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯೆನ್ನಿಸಿರುವ ವಿಷಯಗಳಾದ ಗಣಿತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಸರಳವಾಗಿ ಕಲಿಸುವುದು ಸೂಕ್ತ. ಇದರಿಂದ ಕ್ಲಿಷ್ಟ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು, ನೆನಪಿಟ್ಟುಕೊಳ್ಳುವುದು, ಸೂಕ್ತರೀತಿಯಲ್ಲಿ ಉತ್ತರಿಸುವುದು ಸಾಧ್ಯ.

ಈ ದಿಶೆಯಲ್ಲಿ ಕಲಿಕೆ ವಿಚಾರದಲ್ಲಿ ಪ್ರಾಚೀನ ಬೋಧನಾ ತಜ್ಞರು ಹೇಳಿರುವ ಕಿವಿಮಾತನ್ನು ಅನುಸರಿಸುವುದು ಅಗತ್ಯ. ಅದೇನೆಂದರೆ  “ನಾನು ಕೇಳಿದೆ, ಆದರೆ ಮರೆತೆ, ನಾನು ನೋಡಿದೆ, ಅರ್ಥಮಾಡಿಕೊಂಡೆ: ಈ ನಾಣ್ಣುಡಿ ಬಹು ಅರ್ಥಪೂರ್ಣವಾಗಿದೆ. ಅಂತರಾಷ್ಟ್ರೀಯ ಗುಣಮಟ್ಟದ ಶೈಕ್ಷಣಿಕ ಕಲಿಕಾ ವ್ಯವಸ್ಥೆಯೂ ಸಹ ಇದೇ ನಾಣ್ಣುಡಿ ಆಧಾರಿತವಾಗಿದೆ ಎಂಬುದು ಗಮನಾರ್ಹ.  ಇದರ ಆಧಾರದ ಮೇಲೆ ಕ್ಲಿಷ್ಟ ವಿಷಯಗಳನ್ನು ಸಹ ಸರಳವಾಗಿ ಕಲಿಸಲು ಸಾಧ್ಯವಿದೆ. ಇದು “ನಲಿ –ಕಲಿ” ಆಧಾರಿತ.

ಇಂಥ ಶೈಕ್ಷಣಿಕ ತತ್ವಗಳ ಆಧಾರದ ಮೇಲೆ ನಿಶ್ಚಲ್ ಸಂಸ್ಥೆ ನೂತನ ಪೋರ್ಟಬಲ್ ಮೈಕ್ರೋ ಸ್ಕೈಲ್ ಲ್ಯಾಬ್ಸ್ ಮತ್ತು ಬೋಧನಾ ಕಲಿಕೆ ಸಾಮಗ್ರಿಗಳನ್ನು (ಟಿ.ಎಲ್.ಎಂ) ಅಭಿವೃದ್ಧಿಪಡಿಸಿದೆ. ಇದು ಆಧುನಿಕ ಕಲಿಕೆಗೆ ಅನುಗುಣವಾಗಿ ಪರಿಷ್ಕತವಾಗಿರುವ ಶಾಲಾಪಠ್ಯಗಳನ್ನು ವೇಗವಾಗಿ ಮನನ ಮಾಡಿಕೊಳ್ಳುವುದಕ್ಕೂ ಸಹಾಯಕವಾಗಿವೆ. ಪ್ರಸ್ತುತದ ದಿನಗಳಲ್ಲಿ ಮಾಹಿತಿಯ ಮಹಾಪೂರವೇ ಹರಿಯುತ್ತಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಿಕಾ ವಿಷಯದತ್ತ ಗಮನ ನೀಡಿ, ಸಮರ್ಥವಾಗಿ ಕಲಿಯುವಂತೆ ಮಾಡಬೇಕಾದ ಸವಾಲನ್ನು ಬೋಧಕರು ಎದುರಿಸುತ್ತಿದ್ದಾರೆ.

ನಿಶ್ಚಲ್ಸ್ ಶೈಕ್ಷಣಿಕಾ ಕಲಿಕಾ ಲ್ಯಾಬೋರೆಟರಿಗಳು ಸಾಂಪ್ರದಾಯಿಕ ಶಿಕ್ಷಣದ ಮಾದರಿಗಳಿಗಿಂತ ಭಿನ್ನವಾಗಿರುವುದು ಗಮನಾರ್ಹ. ಜೊತೆಗೆ ಇವುಗಳು ವಿಷಯದ ಸ್ಪಷ್ಟತೆಯನ್ನೂ ಹೊಂದಿವೆ. ಇದು ಮಕ್ಕಳ ಕೇಂದ್ರಿತ ಪರಿಕಲ್ಪನೆ ಹೊಂದಿದ್ದು ಸಮೂಹ ಕಲಿಕಾ ಗುರಿಯನ್ನೂ ಹೊಂದಲಾಗಿದೆ. “ಚಟುವಟಿಕೆ ಆಧಾರಿತ ಪ್ರಯೋಗಾತ್ಮಕ ಕಲಿಕಾ ವಿಧಾನವನ್ನು ತರಗತಿಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಶೈಕ್ಷಣಿಕ ಕಲಿಕಾ ಸಾಮಗ್ರಿಗಳೊಂದಿಗೆ ಸರಳವಾಗಿ ಬಳಸಬಹುದಾಗಿದೆ. (ಇದು ಆಯಾ ವಿಷಯಾಧಾರಿತ ಮತ್ತು ತರಗತಿಯಾಧಾರಿತ ಲ್ಯಾಬ್ ನಿಯಮಾವಳಿಗಳನ್ನು ಹೊಂದಿದೆ) ಈ ನಿಟ್ಟಿನಲ್ಲಿ ಡಿವಿಡಿಗಳು, ಚಾರ್ಟ್ ಗಳು  ಅತೀ ಸರಳ ಮಾದರಿ ಆಧಾರಿತವಾಗಿವೆ.

ಇವೆಲ್ಲವೂ ವಿದ್ಯಾರ್ಥಿಗಳು ಶಾಲೆಯ ಕಲಿಕಾ ಲ್ಯಾಬ್ ನತ್ತ ಆಕರ್ಷಣೆ ಹೊಂದುವಂತೆ ಮಾಡುವ, ನಿತ್ಯವೂ ತಪ್ಪಿಸದಂತೆ ಶಾಲೆಯತ್ತ ಸೆಳೆಯುವ ಮಾದರಿಗಳಾಗಿವೆ.ಈ ನಿಟ್ಟಿನಲ್ಲಿ ಎರಡೂವರೆ ಸಾವಿರಕ್ಕೂ ಕಲಿಕಾ ಮಾದರಿ ವಿಧಾನಗಳನ್ನು ನಿಶ್ಚಲ್ಸ್ ಲ್ಯಾಬ್ ನಲ್ಲಿ ಬಳಸಬಹುದಾಗಿದೆ.

ಸಾಕಷ್ಟು ವಿದ್ಯಾರ್ಥಿಗಳ ಕಲಿಕೆಗೆ ಕಠಿಣ ಎನ್ನಿಸುವಂಥ ವಿಷಯಗಳನ್ನು ಅತ್ಯಂತ ಸರಳವಾಗಿ ಕಲಿಸುವುದರಲ್ಲಿ ನಿಶ್ಚಲ್ಸ್  3ಡಿ ಅ್ಯನಿಮೇಟೆಡ್ ವಿಡಿಯೋಗಳು ಸಹಕಾರಿ. ಇದರಿಂದ ವಿದ್ಯಾರ್ಥಿಗಳು ಬಹು ಸುಲಭವಾಗಿ ವಿಷಯಗಳನ್ನು ಅರ್ಥಮಾಡಿಕೊಂಡು, ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಮುಖ್ಯವಾಗಿ ಇದು ಸಂವಹನ ಕಲಿಕಾ ಮಾದರಿ ಉದ್ದೇಶವನ್ನು ಹೊಂದಿದೆ “ಪ್ರಯೋಗಾತ್ಮಕ ಕಲಿಕೆ” ಪರಿಕಲ್ಪನೆಯೊಂದಿಗೆ ಈ ಅತ್ಯಾಧುನಿಕ ಲ್ಯಾಬ್ ಗಳನ್ನು ಅನ್ನು ರೂಪಿಸಲಾಗಿದೆ.ಇದು ನಮ್ಮ ರಾಜ್ಯದ ಶಾಲಾ ಪಠ್ಯಕ್ರಮದೊಂದಿಗೆ ಪರಿಪಕ್ವವಾಗಿ ಹೊಂದಾಣಿಕೆಯಾಗುತ್ತದೆ. ಪ್ರತಿಯೊಂದು ಲ್ಯಾಬ್ ಸಹ ಕಲಿಕಾ ಸಾಮಗ್ರಿಗಳು, ತರಗತಿ ನಿಯಮಾವಳಿಗಳು, ವಿಡಿಯೋ ಮಾರ್ಗದರ್ಶಕಗಳನ್ನು ವಿಶ್ವದ ಅತ್ಯಾಧುನಿಕ 3ಡಿ ಡಿಜಿಟಲ್ ಸಂವಹನ ವಿಷಯಗಳೊಂದಿಗೆ ಹೊಂದಿವೆ.

ಸಾಂಪ್ರದಾಯಿಕ ರೀತಿಯ ಬೋಧನಾ ವಿಧಾನದಲ್ಲಿ ಶೈಕ್ಷಣಿಕ ವರ್ಷದ ಪಠ್ಯಕ್ರಮಗಳು ಪೂರ್ಣವಾಗಲು 220 ಕೆಲಸದ ದಿನಗಳು ಬೇಕು. ಆದರೆ ನಿಶ್ಚಲ್ಸ್ ಬೋಧನಾ ಸಾಮಗ್ರಿ ಬಳಸಿ ಮುಖಾಂತರ ಕೇವಲ 75 ರಿಂದ 100 ದಿನಗಳಲ್ಲಿ ಪೂರ್ಣಗೊಳಿಸಬಹುದು. ಇದರಿಂದ 1/3ರಷ್ಟು ಸಮಯ ಉಳಿತಾಯವಾಗುತ್ತಿದೆ. ಉಳಿದ ಸಮಯವನ್ನು ಶಿಕ್ಷಕರು ಪಠ್ಯವಿಷಯಗಳನ್ನು ಮತ್ತೆ ಮರುಮಾಪನಕ್ಕೆ ವಿನಿಯೋಗಿಸಬಹುದು.  ಕಲಿಕೆಗೆ ಇಷ್ಟೆಲ್ಲ  ಉಪಯುಕ್ತವಾಗಿರುವ ಬೋಧನೆ / ಕಲಿಕೆ ಲ್ಯಾಬ್ ಗಳನ್ನು ರಾಜ್ಯದಲ್ಲಿ ವಿತರಿಸುವ ಮಹತ್ವದ ಹೊಣೆಗಾರಿಕೆಯನ್ನು ಬೆಂಗಳೂರಿನ  “ರತ್ನಗಿರಿ ಇಂಪೆಕ್ಸ್ ಪ್ರೈ ಲಿಮಿಟೆಡ್” ವಹಿಸಿಕೊಂಡಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು.

ದೂರವಾಣಿ: 98867 02866 / 90354 55867

Similar Posts

Leave a Reply

Your email address will not be published. Required fields are marked *