ಬಹುತೇಕ ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ. ಆದ್ದರಿಂದ ಗಣಿತವೇ ಆಧಾರವಾಗಿರುವ ವಿಷಯಗಳನ್ನು ಅಧ್ಯಯನ ಮಾಡಿದರೆ ಉಜ್ವಲ ಭವಿಷ್ಯದ ಭರವಸೆ ಇದ್ದರೂ ಅವರು ಅದರಿಂದ ದೂರವಿರುತ್ತಾರೆ. ಇದಕ್ಕೆ ನಮ್ಮ ಮಕ್ಕಳನ್ನು/ ವಿದ್ಯಾರ್ಥಿಗಳನ್ನು ದೂರಿ ಪ್ರಯೋಜನವಿಲ್ಲ. ಏಕೆಂದರೆ ದೋಷವಿರುವುದು ಕಲಿಸುವ ವ್ಯವಸ್ಥೆಯಲ್ಲಿ. ಮೊಗಲರು ಬಹುಮುಖ್ಯವಾಗಿ ತದನಂತರ ಬ್ರಿಟಿಷರು ಬಂದನಂತರ ಶಿಕ್ಷಣದ ಪದ್ಧತಿಯಲ್ಲಿ ಅಗಾಧ ಬದಲಾವಣೆ ಆಗಿದೆ. ಇದು ಏಕಮುಖಿ ವ್ಯವಸ್ಥೆ ಆಗಿದೆ. ಇದರಿಂದಲೇ ವಿದ್ಯಾರ್ಥಿಗಳು ಕ್ಲಿಷ್ಟ ಎನಿಸುವ ಸಮಸ್ಯೆಗಳನ್ನು ಸರಳವಾಗಿ ಕಲಿಯುವುದಕ್ಕೆ ತೊಡಕಾಗಿದೆ.


ಗಣಿತ, ಬಹುವಿಸ್ತಾರವಾದದಂಥ ವಿಷಯ. ಇದು ಒಳಗೊಳ್ಳದ ವಿಷಯಗಳೇ ಇಲ್ಲ. ನಮ್ಮ ದೈನಂದಿನ ವ್ಯವಹಾರದಿಂದ ಆರಂಭಿಸಿ ಆಕಾಶಶಾಸ್ತ್ರದವರೆಗೂ ಹಬ್ಬಿದೆ. ಅಂದರೆ ಖಗೋಳಶಾಸ್ತ್ರ, ಜ್ಯೋತಿಷಶಾಸ್ತ್ರ ( ಇಲ್ಲಿ ಜ್ಯೋತಿಷ ಎಂದರೆ ಭವಿಷ್ಯ ಹೇಳುವುದಲ್ಲ) ಗುಪ್ತಲಿಪಿಶಾಸ್ತ್ರ. ಸಂಗೀತಶಾಸ್ತ್ರ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳಿಗೂ ಹಬ್ಬಿದೆ ಮತ್ತು ಅವಶ್ಯಕತೆಯೂ ಇದೆ. ಇಷ್ಟು ಮಹತ್ವದ ಗಣಿತಶಾಸ್ತ್ರವನ್ನು ಶಾಸ್ತ್ರ (ನಿಯಮ) ಬದ್ಧವಾಗಿ ಕಲಿಸಲು ಆಗಿರುವ ಅಡ್ಡಿಯಾದರೂ ಏನು.
ವೇದಕಾಲದಲ್ಲಿ ಭಾರತ ಜಗತ್ತಿಗೆ 0 ಯನ್ನು ನೀಡಿದೆ. ಇದು ಬರುವ ಮೊದಲು ಅಪರಿಮಿತ ಸಂಖ್ಯೆಗಳನ್ನು ಲೆಕ್ಕ ಹಾಕುವುದಕ್ಕೆ ಸಮಸ್ಯೆಗಳಿದ್ದವು. ಅವೆಲ್ಲವೂ ತೊಡಕಿನ ಸಂಗತಿಯಾಗಿತ್ತು. ಒಂದು 0 ಅವೆಲ್ಲವನ್ನು ಬಗೆಹರಿಸಿತು. ಇಂಥ ವೇದಗಣಿತವನ್ನು ಸರಳವಾಗಿ ಮತ್ತು ಮನಮುಟ್ಟುವಂತೆ ಕಲಿಸುವುದಕ್ಕೆ ವಿಧಾನಗಳಿವೆ. ಆದರೆ ಅವುಗಳನ್ನು ಮರೆತಿರುವುದೇ ಸಮಸ್ಯೆಗೆ ಕಾರಣ.
“ಯಾವುದೇ ಒಂದು ತರಗತಿಯಲ್ಲಿ ಐದುಬಗೆಯ ವಿದ್ಯಾರ್ಥಿಗಳಿರುತ್ತಾರೆ. 1. ಕಿವಿಯಲ್ಲಿ ಕೇಳಿ ಕಲಿತುಕೊಳ್ಳುವವರು 2. ಕಿವಿಯಲ್ಲಿ ಕೇಳಿ, ಕಣ್ಣಿಂದ ನೋಡಿ ಕಲಿತುಕೊಳ್ಳುವವರು. 3. ಪ್ರಾತ್ಯಕ್ಷಿಕೆ ನೋಡಿ ಕಲಿತುಕೊಳ್ಳುವವರು 4. ಗುಂಪು ಕಲಿಕೆ ವಿಧಾನದ ಮೂಲಕ ಕಲಿತುಕೊಳ್ಳುವವರು. 5. ವೈಯಕ್ತಿಕ ಗಮನದಿಂದಷ್ಟೆ ಕಲಿತುಕೊಳ್ಳುವವರು. ತರಗತಿಗಳಲ್ಲಿ ಇಷ್ಟೆಲ್ಲ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಲಿಸುವುದಿಲ್ಲ. ಅಲ್ಲಿ ಪಾಠ-ಪ್ರವಚನ ಏಕಮುಖವಾಗಿರುತ್ತದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳುತ್ತಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ತಜ್ಞೆ ವಿದ್ಯಾ ಹೇಳುತ್ತಾರೆ.
ಸಿಂಗಾಪೂರ್ ನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಗಣಿತ ಕಲಿಕೆಯಲ್ಲಿ ಜಗತ್ತಿನ ಇತರದೇಶಗಳ ತಮ್ಮದೇ ವಯೋಮಾನದ ವಿದ್ಯಾರ್ಥಿಗಳಿಗಿಂತ ಮುಂದಿದ್ದಾರೆ. ಇದಕ್ಕೆ ಕಾರಣ ಅಲ್ಲಿ ವೇದಗಣಿತ ಮತ್ತು ಚೈನೀಸ್ ಗಣಿತಸೂತ್ರಗಳನ್ನು ಸಂಯೋಜನೆ ಮಾಡಿದ ಪಠ್ಯಕ್ರಮ. ಇಲ್ಲಿ ಕಲಿಕೆ ಶುಷ್ಕ ಅಂದರೆ ಡ್ರೈ ಆಗಿರುವುದಿಲ್ಲ. ಕಲಿಸುವ ವಿಷಯ ನೀರಸವಾಗಿದ್ದರೆ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ.
“ಇಂಥ ವಿಷಯಗಳನ್ನೆಲ್ಲ ಅಧ್ಯಯನ ಮಾಡಿ ವೇದಗಣಿತ-ಚೈನೀಸ್ ಗಣಿತಸೂತ್ರಗಳನ್ನು ಸಂಯೋಜಿಸಿ “ನಿಶ್ಚಲ್ಸ್” ಕಲಿಕೆ ಲ್ಯಾಬ್ಸ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ “ನೋಡಿ ಕಲಿ-ಮಾಡಿ ಕಲಿ” ವಿಧಾನಕ್ಕೆ ಒತ್ತು ನೀಡಲಾಗಿದೆ. ಇದರಿಂದ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಎಂಥಾ ಕ್ಲಿಷ್ಟ ಗಣಿತಸೂತ್ರಗಳನ್ನು ಸರಳವಾಗಿ ಕಲಿಯಲು ಸಾಧ್ಯವಿದೆ” ಎಂದು ವಿದ್ಯಾ ಪ್ರತಿಪಾದಿಸುತ್ತಾರೆ.
“ಗಣಿತಸೂತ್ರಗಳನ್ನು ಬೋರ್ಡಿನ ಮೇಲೆ ಬರೆದು ಪಾಠ ಮಾಡಿದರೆ ಕೆಲವೇ ವಿದ್ಯಾರ್ಥಿಗಳು ಕಲಿತುಕೊಳ್ಳುತ್ತಾರೆ. ಹಲವು ವಿದ್ಯಾರ್ಥಿಗಳಿಗೆ ಅರ್ಥವೇ ಆಗುವುದಿಲ್ಲ. “ನಿಶ್ಚಲ್ಸ್” ವಿಧಾನದಲ್ಲಿ ಸರಳ ಸಾಧನಗಳನ್ನು ಬಳಸಿ ಹೇಳಿಕೊಟ್ಟಾಗ ಎಲ್ಲ ವಿದ್ಯಾರ್ಥಿಗಳು ಖಂಡಿತವಾಗಿ ಕಲಿಯುತ್ತಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಐದಾರು ತರಗತಿಗಳಲ್ಲಿ ಹೇಳಿಕೊಟ್ಟಾಗ ಕಲಿಯುವ ವಿಷಯವನ್ನು ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕಲಿಯಬಹುದು ಎಂದರೆ ಈ ಪದ್ಧತಿಯಲ್ಲಿ ಅಭಿವೃದ್ಧಿಪಡಿಸಿದ ಲ್ಯಾಬ್ ಗಳ ಮಹತ್ವ ಅರಿಯಬಹುದು” ಎಂದು ವಿದ್ಯಾ ಪ್ರತಿಪಾದಿಸುತ್ತಾರೆ.


ಈ ಮುಂದಿನ ವಿಡಿಯೋದಲ್ಲಿ “ನಿಶ್ಚಲ್ಸ್” ವಿಧಾನದಲ್ಲಿ ಗಣಿತವನ್ನು ಸರಳವಾಗಿ ಕಲಿಸುವ ವಿಧಾನಗಳನ್ನು ಪರಿಚಯಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗೆ ಶಿಕ್ಷಣತಜ್ಞೆ ವಿದ್ಯಾ ಅವರನ್ನು ಸಂಪರ್ಕಿಸಬಹುದು: 080- 2698 5114 ಮೊಬೈಲ್ : 89714 66607

Similar Posts

Leave a Reply

Your email address will not be published. Required fields are marked *