ಹಿರಿಯ ನಾಗರಿಕರಿ ( SENIOR CITIZENS ) ಗೆ ವಯೋ ಸಹಜ ದೈಹಿಕ, ಮಾನಸಿಕ ತೊಂದರೆ ( Age-related physical and mental problems) ಗಳು ಹಲವರನ್ನು ಕಾಡುತ್ತವೆ. ಆರಂಭದಲ್ಲಿಯೇ ಇವುಗಳಿಗೆ ಚಿಕಿತ್ಸೆ (Tratment) ತೆಗೆದುಕೊಳ್ಳುವುದು ಅಗತ್ಯ. ಇದರಿಂದ ಅವುಗಳು ಉಲ್ಬಣಿಸಿ ತೊಂದರೆ( Problem) ಯಾಗುವುದು ನಿವಾರಣೆಯಾಗುತ್ತದೆ.

ಚಿಕಿತ್ಸೆ (Tratment)

ಈಗಾಗಲೇ ಚಿಕಿತ್ಸೆ ಆರಂಭವಾಗಿರುತ್ತದೆ. ಈ ಹಂತದಲ್ಲಿ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ( Doctors) ರಜೆ ಮೇಲೆ ತೆರಳಿರಬಹುದು. ಕಾರಣಾಂತರಗಳಿಂದ ಅಲಭ್ಯವಾಗಿರಬಹುದು ಅಥವಾ ಇನ್ನೂ ಹೆಚ್ಚಿನ ಸಲಹೆ ಅಗತ್ಯವಾಗಿರಬಹುದು.
ಇಂಥ ಸಂದರ್ಭಗಳಲ್ಲಿ ಹೊರಗೆ ಹೋಗಿ ತಜ್ಞವೈದ್ಯರನ್ನು ( Specialists ) ಕಂಡು ಮನೆಗೆ ತಲುಪುವುದರೊಳಗೆ ಸಾಕಷ್ಟು ಹಣ ವೆಚ್ಚವಾಗಿರುತ್ತದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಆಯಾಸವಾಗಿರುತ್ತದೆ. ತುರ್ತು ಸಲಹೆ ( Emergency medical advice )ಅಗತ್ಯವಿದ್ದಾಗ ಹಿರಿಯ ವೈದ್ಯರ ಬಳಿ ಕರೆದುಕೊಂಡು ಹೋಗಲು ಮನೆಯಲ್ಲಿ ಕುಟುಂಬದ ಕಿರಿಯ ಸದಸ್ಯರು ಕಾರಣಾಂತರಗಳಿಂದ ಲಭ್ಯವಿಲ್ಲದೇ ಇರಬಹುದು.

ಕಾರಣ

ಈಗಾಗಲೇ ಚಿಕಿತ್ಸೆ ಆರಂಭಿಸಿರುವ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ (ಮಧುಮೇಹ ಇರುವವರು) ( High blood pressure, diabetes ) ಹೊರರೋಗಿಗಳ ಸೇವೆಗಾಗಿ ತಕ್ಷಣ ಆಸ್ಪತ್ರೆಗೆ ಧಾವಿಸುವುದಿಲ್ಲ. ತಲೆನೋವು, ದೈಹಿಕ ನೋವಿನಂತಹ ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಇಂಥವರಲ್ಲಿ ಅನೇಕರು ಆಸ್ಪತ್ರೆಗೆ ಹೋಗಲು ಸಿದ್ಧರಿರುವುದಿಲ್ಲ. ಇದಕ್ಕೂ ಮೇಲೆ ವಿವರಿಸಿದ ಕಾರಣಗಳಿರುತ್ತವೆ.

ಉಚಿತ ಸೇವೆ (Free medical service)
ಇಂಥ ಸಂದರ್ಭದಲ್ಲಿ ಉಂಟಾಗುವ ತೊಂದರೆಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಹಿರಿಯ ಭಾರತೀಯ ನಾಗರಿಕರಿಗೆ ವೈದ್ಯಕೀಯ ಉಚಿತ ಸಮಾಲೋಚನೆ ಸೇವೆ( Free medical consultation service for senior Indian citizens ) ಆರಂಭಿಸಿದೆ. ಇದು ಸಂಪೂರ್ಣವಾಗಿ ಉಚಿತ. ನೋಂದಣಿಗೂ ಸಹ ಹಣ ವೆಚ್ಚ ಮಾಡಬೇಕಾಗಿಲ್ಲ.

ಅತ್ಯುತ್ತಮ ಸಲಹಾ ಸೇವೆ ( Best consulting service )
ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಆರಂಭಿಸಿರುವ ಈ ವೈದ್ಯಕೀಯ ಉಚಿತ ಸಮಾಲೋಚನೆ ಸೇವೆ ಗುಣಮಟ್ಟ( Quality )ದಿಂದ ಕೂಡಿರುತ್ತದೆ. ಆಯಾ ವಿಭಾಗಗಳ ತಜ್ಞವೈದ್ಯರೇ ಸಲಹೆ ನೀಡುತ್ತಾರೆ. ಇವರ ಬಳಿ ರೋಗಿಗಳು ತಮ್ಮ ದೈಹಿಕ- ಮಾನಸಿಕ ತೊಂದರೆಗಳ ಬಗ್ಗೆ ವಿವರಿಸಬಹುದು. ತಾವು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಗಳ ಮಾಹಿತಿ ನೀಡಬಹುದು. ಆಗ ಹಿರಿಯ ವೈದ್ಯರು ಸಾವಧಾನದಿಂದ ಸವಿವರ ಮಾಹಿತಿ ಪಡೆದುಕೊಂಡು ಸೂಕ್ತ ಸಲಹೆ ನೀಡುತ್ತಾರೆ

ವೆಬ್ ಲಿಂಕ್ (web link)
ಉಚಿತ ವೈದ್ಯಕೀಯ ಸೇವೆ ಪಡೆಯಲು ಈ https://www.eSanjeevaniopd.in (ಇದು ಕೇಂದ್ರ ಸರ್ಕಾರದ ವೆಬ್ಸೈಟ್ ) ಲಿಂಕ್ ಅನ್ನು Google Chrome ನಲ್ಲಿ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ಈ ಮೊದಲೇ ಹೇಳಿದಂತೆ ಇದಕ್ಕೆ ಹಣ ನೀಡಬೇಕಾಗಿಲ್ಲ. ಲಿಂಕ್ ನಲ್ಲಿ ಕೇಳಿರುವ ಮಾಹಿತಿ ನೀಡಬೇಕು.

1. ರೋಗಿಯ ನೋಂದಣಿ ಆಯ್ಕೆಮಾಡಿ.

2. ನಿಮ್ಮ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ. ನೋಂದಣಿಗಾಗಿ ಮೊಬೈಲ್ನಲ್ಲಿ OTP ಎಂದು ಟೈಪ್ ಮಾಡಿ.

3. ರೋಗಿಯ ವಿವರಗಳು ಮತ್ತು ಜಿಲ್ಲೆಯನ್ನು ನಮೂದಿಸಿ. ಈಗ, ನೀವು ಆನ್ಲೈನ್ನಲ್ಲಿ ವೈದ್ಯರನ್ನು ಸಂಪರ್ಕಿಸುತ್ತೀರಿ. ಈ ನಂತರ, ವೀಡಿಯೋ ಕರೆ ಮೂಲಕ ನಿಮ್ಮ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ನೀವು ವೈದ್ಯರನ್ನು ಸಂಪರ್ಕಿಸಬಹುದು. ವೈದ್ಯರು ಔಷಧಗಳ ಕುರಿತ ಸಲಹೆಯನ್ನು ಆನ್ಲೈನ್ನಲ್ಲಿ ನೀಡುತ್ತಾರೆ. ಇದನ್ನು . ಮೆಡಿಕಲ್ ಫಾರ್ಮಸಿ ಅಂಗಡಿಯಲ್ಲಿ ತೋರಿಸಿ ಔಷಧ ತೆಗೆದುಕೊಳ್ಳಬಹುದು.

ನೀವು ಈ ಸೇವೆಯನ್ನು ಭಾನುವಾರ ಸೇರಿದಂತೆ ಪ್ರತಿದಿನ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ರವರೆಗೆ ಬಳಸಬಹುದು.

ಆಪ್ (mobile App )
ಈ ಸೇವೆಗಾಗಿ ಆಪ್ ಕೂಡ ಲಭ್ಯವಿದೆ. ನಿಮ್ಮ ಮೊಬೈಲಿನಲ್ಲಿ ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ ಆಪ್ ಡೌನ್ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಹಿರಿಯ ನಾಗರಿಕರಿಗೆ ಈ ಪ್ರಕ್ರಿಯೆ ನಡೆಸಲು ತಿಳಿದಿರದೇ ಇದ್ದರೆ ಕುಟುಂಬದ ವಿದ್ಯಾವಂತ ಕಿರಿಯರ ಸಹಾಯ ಪಡೆಯಬಹುದು.
https://play.google.com/store/apps/details?id=in.hied.esanjeevaniopd

ದಯವಿಟ್ಟು ಈ ವಿವರಗಳನ್ನು ನಿಮ್ಮ ಸಂಪರ್ಕದಲ್ಲಿರುವ ಹಿರಿಯ ನಾಗರಿಕರಿಗೆ, ಸ್ನೇಹಿತರ ವಲಯಗಳಿಗೆ (Relatives and friends )ಕಳುಹಿಸಿ. ಸಾಧ್ಯವಾದಷ್ಟೂ ಫಾರ್ವರ್ಡ್ ಮಾಡಿ
-ಕುಮಾರ ರೈತ

Similar Posts

Leave a Reply

Your email address will not be published. Required fields are marked *