ಹವಾಮಾನ ಎನ್ನುವುದು ಸೈಕಲ್‌ ಚಕ್ರವಿದ್ದ ಹಾಗೆ. ಒಮ್ಮೆ ಎಲ್‌ ನಿನೋ ಕಾಲಾವಧಿಯಿದ್ದರೆ ಮತ್ತೊಮ್ಮೆ ಲಾ ನಿನೋ ಕಾಲಾವಧಿ ಇರುತ್ತದೆ. ೨೦೨೩ ರ ಅವಧಿಯಲ್ಲಿ ಭಾರತವೂ ಸೇರಿದಂತೆ ಏಷಿಯಾದ ರಾಷ್ಟ್ರಗಳಲ್ಲಿ ಎಲ್‌ ನಿನೋ ಪ್ರಭಾವ ಇತ್ತು. ಇದರಿಂದ ಮುಂಗಾರು ದುರ್ಬಲವಾಗಿ ಹಲವೆಡೆ ಸಮರ್ಪಕವಾದ ಪ್ರಮಾಣದ ಮಳೆಯಾಗಲಿಲ್ಲ.

ಈಗ ಲಾ ನಿನೋ ಕಾಲಾವಧಿ. ಆದರೂ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚು ಅಸಮಾನ ಹಂಚಿಕೆಯಾಗುತ್ತಿದೆ. ಕೆಲವೆಡೆ ಅತೀ ಭಾರಿ ಮಳೆ, ಕೆಲವೆಡೆ ತೀರಾ ಸಾಧಾರಣ, ಇನ್ನೂ ಹಲವೆಡೆ ಮಳೆಯಿಲ್ಲ. ಇದು ಇನ್ನೂ ಎಲ್‌ ನಿನೋ ಪ್ರಭಾವ ಅಳಿದಿಲ್ಲವೇ ಎಂಬ ಸಂಶಯ ಮೂಡಿಸುತ್ತದೆ. ಏಕೆಂದರೆ ಇದರ ಕಾಲಾವಧಿ ಮುಗಿದರೂ ಕೆಲವೊಮ್ಮೆ ಅದರ ಪ್ರಭಾವ ಕನಿಷ್ಠ ಮಟ್ಟದಲ್ಲಾದರೂ ಉಳಿದಿರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಹಲವೆಡೆ ಮುಂಗಾರು ಮಾರುತಗಳು ಹಂಚಿಕೆಯಾಗಿಲ್ಲ ಎನ್ನಲಾಗಿದೆ.

ಓಷಿಯಾನಿಕ್ ನಿನೊ ಸೂಚ್ಯಂಕವು (ONI) 0.5 ° C ನ ಥ್ರೆಶೋಲ್ಡ್ ಮಾರ್ಕ್‌ನ ಕೆಳಗೆ ಇಳಿಯುವ ಸಾಧ್ಯತೆಯಿದೆ, ಇದು ಎಲ್ ನಿನೊ ಅಂತ್ಯ ಮತ್ತು ಎನ್ಸೋ (ENSO) ತಟಸ್ಥತೆಯ ಪ್ರಾರಂಭವನ್ನು ಸೂಚಿಸುತ್ತದೆ. ಹೀಗಿದ್ದರೂ ಕ್ಷೀಣವಾದ ಎಲ್ ನಿನೋ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಒಂದು ವೇಳೆ ಹೀಗಾದರೆ ಭಾರತವೂ ಸೇರಿದಂತೆ ಹಲವು ದೇಶಗಳ ಮುಂಗಾರು ಸ್ಥಿತಿ ದುರ್ಬಲವಾಗಬಹುದು.

ಇವೆಲ್ಲದರ ನಡುವೆಯೂ ಈ ಬಾರಿ ಸಾಮಾನ್ಯಕ್ಕಿಂತ ಅಧಿಕ ಮುಂಗಾರು ಮಳೆಯನ್ನು ನಿರೀಕ್ಷಿಸಲಾಗಿದೆ. ಜುಲೈ ಮಾಸದಲ್ಲಿ ಮುಂಗಾರು ಚುರುಕುಕಾಗುವ ಸಾಧ್ಯತೆ ಇದೆ. ಇದು ಇಡೀ ದೇಶವನ್ನು ಆವರಿಸುವ ಸಾಧ್ಯತೆ ಇದೆ.

ಹಿಂದೂ ಮಹಾಸಾಗರ ದ್ವಿಧ್ರುವಿ (IOD) ಪ್ರಸ್ತುತ ತಟಸ್ಥವಾಗಿದೆ ಮತ್ತು ಹೆಚ್ಚಿನ ಹವಾಮಾನ ಮಾದರಿಗಳು ಮಾನ್ಸೂನ್ ಋತುವಿನಲ್ಲಿ IOD ತಟಸ್ಥವಾಗಿರಬಹುದು ಎಂದು ಸೂಚಿಸುತ್ತವೆ. “ಹಿಂದೂ ಮಹಾಸಾಗರದ ದ್ವಿಧ್ರುವಿಯು ಲಾ ನಿನಾದೊಂದಿಗೆ ರಚನಾತ್ಮಕವಾಗಿ ಆಧಾರವಾಗಿರಲು ಮತ್ತು ಸಂಯೋಜಿಸಲು ಅಸಂಭವವಾಗಿದೆ. MJO ಯ ಪೂರಕ ಸಹಾಯವಿಲ್ಲದೆ ಬಂಪರ್ ಮಾನ್ಸೂನ್ ಹೊಂದುವ ಸಾಧ್ಯತೆಗಳು ಅನಿರ್ದಿಷ್ಟವಾಗಿ ಉಳಿಯುತ್ತವೆ” ಎಂದು ಖಾಸಗಿ ಹವಾಮಾನ ಸಂಸ್ಥೆಯ ವರದಿ ಹೇಳುತ್ತದೆ.

ಈ ನಡುವೆ ನೈಋತ್ಯ ಮಾನ್ಸೂನ್  ಜೂನ್‌ ೨೯ ರಂದು ಪೂರ್ವ ಉತ್ತರ ಪ್ರದೇಶದ ಉಳಿದ ಭಾಗಗಳಿಗೆ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ಮತ್ತಷ್ಟು ಮುಂದುವರೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ  ತಿಳಿಸಿದೆ.

 ಮುಂದಿನ ೨-೩ ದಿನಗಳಲ್ಲಿ ಪಶ್ಚಿಮ ರಾಜಸ್ಥಾನ, ಹರಿಯಾಣ-ಚಂಡೀಗಢ ಮತ್ತು ಪಂಜಾಬ್‌ನ ಕೆಲವು ಭಾಗಗಳು ಮತ್ತು ಪಶ್ಚಿಮ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಜಮ್ಮುವಿನ ಉಳಿದ ಭಾಗಗಳಿಗೆ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ.

Similar Posts

Leave a Reply

Your email address will not be published. Required fields are marked *