ಈ ಬಾರಿ (2023) ನೈರುತ್ಯ ಮುಂಗಾರು (Southwest Monsoon) ವಾಡಿಕೆಗಿಂತ ತುಸು ತಡವಾಗಿ ಕೇರಳ ಕರಾವಳಿ (Kerala costal area)ಗೆ ಜೂನ್ 10ರಂದು ಪ್ರವೇಶಿಸಿದೆ. ಈ ನಂತರ ಅಲ್ಲಿನ ಕರಾವಳಿಯಲ್ಲಿ ಉತ್ತಮ ಮಳೆ (Rain )ಯಾದರೂ ಇದು ಕರ್ನಾಟಕದ ಕರಾವಳಿ (Karnataka costal area )ಯಲ್ಲಿ ಹೆಚ್ಚಿನ ಪರಿಣಾಮ ಉಂಟು ಮಾಡಲಿಲ್ಲ. ಬಿಪೊರ್ ಜಾಯ್ ಚಂಡಮಾರುತ (cyclone biporjoy ) ವೂ ಇದಕ್ಕೆ ಕಾರಣವಾದ ಅಂಶಗಳಲ್ಲಿ ಒಂದಾಗಿದೆ.
ಮುಂಗಾರು ಮಾರುತ (Southwest Monsoon) ಗಳು ಕೇರಳ ಕರಾವಳಿಯನ್ನು ಪ್ರವೇಶಿಸಿದ ಮೂರ್ನಾಲ್ಕು ದಿನಗಳ ಒಳಗೆ ಕರ್ನಾಟಕದ ದಕ್ಷಿಣ ಒಳನಾಡು (South interland of Karnataka) ಉತ್ತರ ಒಳನಾಡಿ (north interland of Karnataka) ನಲ್ಲಿಯೂ ಮಳೆ ಆರಂಭವಾಗುತ್ತದೆ. ಆದರೆ ಈ ಬಾರಿ ಈ ಪ್ರದೇಶಗಳಲ್ಲಿ ಮಳೆ ಶುರುವಾದರೂ ಸಮಾನವಾಗಿ ಹಂಚಿಕೆಯಾಗುತ್ತಿಲ್ಲ. ಅಲ್ಲಲ್ಲಿ ಭಾರಿಮಳೆ ಸುರಿದು ತಟಸ್ಥವಾಗುತ್ತಿದೆ. ಒಂದು ವಾರ ಅಥವಾ 10 ದಿನಗಳಿಗೆ ಹಂಚಿಕೆಯಾಗಬೇಕಾದ ಮಳೆ ಒಂದೇ ದಿನ ಸುರಿದಿದೆ.
ದಕ್ಷಿಣ ಒಳನಾಡಿ (South interland of Karnataka)ನ ಬಹುತೇಕ ಪ್ರದೇಶಗಳಲ್ಲಿ ಮೋಡಗಳ ಸಂದಣಿಯಾಗಿ ಮಳೆ ಸುರಿಯುವ ನಿರೀಕ್ಷೆ ಉಂಟು ಮಾಡಿ ನಂತರ ನಿರಾಶೆ ಮೂಡಿಸುತ್ತಿದ್ದವು. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಉಂಟಾಗುತ್ತಿತ್ತು.
ಜೂನ್ 19 ರಿಂದ ಪರಿಸ್ಥಿತಿ ಬದಲಾಗಿದೆ. ಬೆಂಗಳೂರು (Bengaluru) ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾಗಲು ಆರಂಭವಾಗಿದೆ. ಜೂನ್ 20 ರಂದು ಬೆಳಗ್ಗೆ ಉತ್ತಮ ಮಳೆ (Good Rain) ಯಾಗಿದೆ. ಇನ್ನೂ ನಾಲ್ಕುದಿನ ಇದೇ ರೀತಿ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
“ಜೂನ್ (ಜೂನ್ 18ರ ನಂತರ) ಮತ್ತು ಜುಲೈ ತಿಂಗಳಿನಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆ(South interland of Karnataka) ಗಳಲ್ಲಿ (ಕರಾವಳಿ ಜಿಲ್ಲೆಗಳು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಹೊರತುಪಡಿಸಿ) ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಈ ಪ್ರದೇಶಗಳಲ್ಲಿ ಬಿತ್ತನೆಕಾರ್ಯಕ್ಕೂ ಹೆಚ್ಚಿನ ತೊಂದರೆಯಾಗುವುದಿಲ್ಲ. ಏಕೆಂದರೆ ಇಲ್ಲಿ ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿಯೇ ಹೆಚ್ಚು ಬಿತ್ತನೆಕಾರ್ಯಗಳು ನಡೆಯುತ್ತವೆ ಎಂದು ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಹವಾಮಾನ ತಜ್ಞ ಡಾ. ತಿಮ್ಮೇಗೌಡ (Dr. Thimmegowda) ಅವರು “ ಅಗ್ರಿಕಲ್ಚರ್ ಇಂಡಿಯಾ (Agriculture India) ಪ್ರತಿನಿಧಿಗೆ ತಿಳಿಸಿದರು.
ಇಂದು (ಜೂನ್ 19) ರಂದು ಡಾ. ತಿಮ್ಮೇಗೌಡ (Dr. Thimmegowda) ಅವರು ಅಗ್ರಿಕಲ್ಚರ್ ಇಂಡಿಯಾ (Agriculture India ಪ್ರತಿನಿಧಿಯೊಂದಿಗೆ ಮಾತನಾಡಿದರು. ಆಗಸ್ಟ್ ಮೊದಲ ವಾರದ ನಂತರ ದಕ್ಷಿಣ ಒಳನಾಡಿನಲ್ಲಿ (South interland of Karnataka) ಮಳೆ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಬಾರಿ ಕರ್ನಾಟಕದ ಕರಾವಳಿ ಹಾಗೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆಗಳು ಕಡಿಮೆ ಇವೆ ಎಂದು ವಿವರಿಸಿದರು.
ಸಾಮಾನ್ಯವಾಗಿ ಪ್ರತಿ ನಾಲ್ಕು ಅಥವಾ ಐದು ವರ್ಷಕ್ಕೊಮ್ಮೆ ಮುಂಗಾರು ಮಳೆ(Southwest Monsoon) ಯಲ್ಲಿ ಇಂಥ ಆವರ್ತನಗಳು ಉಂಟಾಗುತ್ತವೆ. 2018ರಿಂದ 2022ರವರೆಗೂ ಕರ್ನಾಟಕವೂ ಸೇರಿದಂತೆ ರಾಷ್ಟ್ರದ ಇತರೆಡೆ ಉತ್ತಮ ಮಳೆಯಾಗಿದೆ. ಆದರೆ ಇಷ್ಟು ವರ್ಷಗಳಲ್ಲಿಯೂ ಮುಂಗಾರು ಮಳೆ ವಾಡಿಕೆಯಂತೆ ಸಮಾನವಾಗಿ ಹಂಚಿಕೆಯಾಗದಿರುವುದು ಗಮನಾರ್ಹ. ಇದಕ್ಕೆ ಸೂಕ್ಷ್ಮ ನಿಸರ್ಗದ ಮೇಲೆ ಆಗುತ್ತಿರುವ ಮನುಷ್ಯ ನಿರ್ಮಿತ ಹಲ್ಲೆಯೂ ಕಾರಣ ಎಂದು ಅವರು ವಿಶ್ಲೇಷಿಸಿದರು.
ಪ್ರತಿ ನಾಲ್ಕರಿಂದ ಐದು ವರ್ಷಗಳಿಗೆ ಲಾ ನಿನೋ, (La Nino) ಎಲ್ ನಿನೋ(El Nino) ಉಂಟಾಗುತ್ತಿರುತ್ತದೆ. 2018 ರಿಂದ ಭಾರತ ಸೇರಿದಂತೆ ಏಷ್ಯಾದ ಬಹುತೇಕ ಕಡೆ ಲಾ ನಿನೋ (La Nino) ಪ್ರಭಾವವಿತ್ತು. ಇದರಿಂದ ಇಲ್ಲಿನ ಹೆಚ್ಚಿನ ದೇಶಗಳಲ್ಲಿ ಉತ್ತಮ ಮಳೆಯಾಗುತ್ತಿತ್ತು. ಈ ಸಂದರ್ಭದಲ್ಲಿ ಯುರೋಪ್, ಅಮೆರಿಕಾಗಳಲ್ಲಿ ವಾಡಿಕೆಯಷ್ಟು ಉತ್ತಮ ಮಳೆಯಾಗಿಲ್ಲ. ನಿಸರ್ಗದ ಈ ಆವರ್ತನ ಈ ವರ್ಷ ಬದಲಾಗಿದೆ. ಈಗ ಫೆಸಿಫಿಕ್ ಸಾಗರ (Pacific Ocean) ದಲ್ಲಿ ಉಂಟಾಗಿರುವ ಬಿಸಿಗಾಳಿಯ ಪ್ರಭಾವದಿಂದ ಎಲ್ ನಿನೋ (El Nino) ಪರಿಸ್ಥಿತಿ ಉಂಟಾಗಿದೆ. ಇದು ಭಾರತ (India) ದಲ್ಲಿ ಆಗುವ ಮುಂಗಾರು ಮಳೆ ಪ್ರಮಾಣದಲ್ಲಿ ನಕಾರಾತ್ಮಕ ಪ್ರಭಾವ ಬೀರಿದೆ. ಇದರಿಂದಲೇ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ ಎಂದು ಡಾ. ತಿಮ್ಮೇಗೌಡ ಅವರು ಅಗ್ರಿಕಲ್ಚರ್ ಇಂಡಿಯಾಕ್ಕೆ ವಿವರಿಸಿದರು.
ಹವಾಮಾನ ಮುನ್ಸೂಚನೆಯ ಖಾಸಗಿ ಸಂಸ್ಥೆ ಸ್ಕೈಮೆಟ್ ಈ ಬಾರಿಯ (2023) ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ನೀಡಿದೆ. ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಭಾರತವು ದೀರ್ಘಾವಧಿಯ ಸರಾಸರಿ ಮಳೆಯ 94% ಅನ್ನು ಪಡೆಯುವ ಸಾಧ್ಯತೆಯಿದೆ ಎಂದು ಹವಾಮಾನ ಸಂಸ್ಥೆ ಹೇಳಿದೆ.
ಸ್ಕೈಮೆಟ್ ಪ್ರಕಾರ, ಈ ಬಾರಿಯ (2023) ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ 40%, ಸಾಮಾನ್ಯ ಮಳೆಗೆ 25% ಮತ್ತು ಅನಾವೃಷ್ಟಿಯ ಸಾಧ್ಯತೆ 20%. ಭಾರತದ ಉತ್ತರ ಮತ್ತು ಮಧ್ಯ ಭಾಗಗಳ ಪ್ರದೇಶಗಳಲ್ಲಿ ಮಳೆ ಅಭಾವ ಉಂಟಾಗುವ ಸಾಧ್ಯತೆ ಇದೆ. ಎಲ್ ನಿನೋ (El Nino) ಮತ್ತು ಹಿಂದೂ ಮಹಾಸಾಗರದ ದ್ವಿಧ್ರುವಿ ಪರಿಸ್ಥಿತಿ (Indian Ocean Dipole) ಸ್ಕೈಮೆಟ್ ದೂಷಿಸಿದೆ.
ಬೆಂಗಳೂರು ಮಹಾನಗರದಲ್ಲಿ ಈ ಬಾರಿಯ ನೈರುತ್ಯ ಮುಂಗಾರಿನಲ್ಲಿ ಸೂಕ್ತವಾಗಿ ಮಳೆ ಹಂಚಿಕೆಯಾಗದೇ ಒಮ್ಮೆಲೇ ಅಧಿಕ ಮಳೆ ಸುರಿಯುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಅಂದರೆ ಒಂದು ವಾರ ಅಥವಾ ಹತ್ತು ದಿನದಲ್ಲಿ ಸುರಿಯಬೇಕಾದ ಮಳೆ ಪ್ರಮಾಣ ಒಂದೇ ದಿನದಲ್ಲಿ ಆಗಿಬಿಡಬಹುದು. ಆದ್ದರಿಂದ ಈ ಬಗ್ಗೆಯೂ ಮುಂಜಾಗ್ರತೆ ವಹಿಸುವುದು ಅಗತ್ಯ