ಸಿನೆ ನಿರ್ದೇಶಕರು, ಪಿ. ಶೇಷಾದ್ರಿ, ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವ -೨೩ ಹಿರಿಯ ಸಂಯೋಜಕರೂ ಆದ ಪಿ. ಶೇಷಾದ್ರಿ ಅವರ ಸಂದರ್ಶನ

ಬೆಂಗಳೂರು ಅಂತರಾಷ್ಟ್ರೀಯ ಸಿನೆಮೋತ್ಸವ ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ನಡೆಯುತ್ತದೆ. ಇದಕ್ಕೂ ಮೊದಲು ಗೋವಾ, ಪೂನಾ, ತ್ರಿವೇಂಡ್ರಂ, ಕೊಲ್ಕತ್ತಾ  ಫಿಲಂ ಫೆಸ್ಟಿವಲ್, ಗಳು ಆಗಿರುತ್ತವೆ. ಇಲ್ಲಿ ಪ್ರದರ್ಶನಗೊಂಡ ಸಿನೆಮಗಳಲ್ಲಿಯೇ ಅತ್ಯುತ್ತಮ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಬೆಂಗಳೂರು ಫಿಲಂ ಫೆಸ್ಟಿವಲ್ ಗೆ ಇಉತ್ತದೆ.  ಇದಲ್ಲದೇ ಅಲ್ಲೆಲ್ಲೂ ಪ್ರದರ್ಶನಗೊಂಡಿರದ ಉತ್ತಮ ಸಿನೆಮಗಳೂ ಇಲ್ಲಿ ಪ್ರದರ್ಶನಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಇಲ್ಲಿ ಫೆಸ್ಟಿವಲ್ ನಡೆಯುವುದು ಒಂದು ರೀತಿಯಲ್ಲಿ ಅನುಕೂಲ.

ಹಿಂದಿನ ಫೆಸ್ಟಿವಲ್ ಗಳಲ್ಲಿ ಪ್ರೇಕ್ಷಕರು, ವಿಮರ್ಶಕರಿಂದ ಶ್ಲಾಘನೆಗೆ ಒಳಗಾದ ಸಿನೆಮಗಳನ್ನು ಆಯ್ಕೆ ಮಾಡಿ ಕನ್ನಡಿಗರಿಗೆ ತೋರಿಸುವ ಸದಾವಕಾಶ ದೊರೆಯುತ್ತದೆ.  ಹಾಗಾಗಿ ಕ್ರೀಮ್ ಆಫ್ ಗುಡ್ ಫಿಲಂಸ್ ಬೆಂಗಳೂರಿನಲ್ಲಿ ಸಿಗುತ್ತವೆ.  ಇದಲ್ಲದೇ ಅವರುಗಳು  ಉತ್ಸವದಲ್ಲಿ ಏನು ಮಾಡಿದ್ದಾರೆ ಅವುಗಳನ್ನು ಬಿಟ್ಟು ಹೊಸದಾಗಿ ಯೋಚನೆ ಮಾಡಲು ಸಹ ಇಲ್ಲಿ ಅವಕಾಶ ದೊರೆಯುತ್ತದೆ.

ಪ್ರತಿಬಾರಿಯೂ ಇನ್ನೂ ಬಹಳ ಬಹಳ ವಿಭಿನ್ನವಾಗಿ ಮಾಡುವ ಅವಕಾಶ ನಮಗೆ ಇದೆ. ಆದರೆ ಕಾರಣಾಂತರಗಳಿಂದ ಸಿನೆಮೋತ್ಸವ ಅಧಿಕೃತವಾಗಿ ಕರ್ನಾಟಕ ಸರಕಾರದಿಂದ ಘೋಷಣೆ ಆಗುವುದು ಪ್ರತಿಬಾರಿಯೂ ತಡವಾಗುತ್ತಿದೆ.  ಈ ರೀತಿ ತಡವಾಗುವುದಕ್ಕೆ ರಾಜಕೀಯ ಕಾರಣಗಳೇ ಎಂದು ಹೇಳುತ್ತೇನೆ.

ಕಳೆದ ಬಾರಿ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು  ಮಾರ್ಚ್ 03 ವಿಶ್ವ ಕನ್ನಡ ಸಿನೆಮಾದಂದು ಚಿತ್ರೋತ್ಸವ ಆರಂಭಿಸಲಾಗುವುದು ಎಂದು ಹೇಳಿದ್ದರು. ಈ ಬಾರಿ ಮಾರ್ಚ್ 03 ಶುಕ್ರವಾರದಂದೇ ಬಂದಿತ್ತು. ಆದರೆ ಘೋಷಣೆಯಾದಂತೆ ಆಗಲಿಲ್ಲ ಕಳೆದ  ಬಾರಿ ಮಾರ್ಚ್ 02ರಂದು ಸಿನೆಮೋತ್ಸವ ಆರಂಭವಾಗಿತ್ತು.

ಮಾರ್ಚ್ 03 ವಿಶ್ವ ಕನ್ನಡ ಸಿನೆಮಾದಂದೇ 90 ವರ್ಷಗ ಇತಿಹಾಸ ಇರುವ ಕನ್ನಡ ಚಿತ್ರರಂಗದ ಬೆಳವಣಿಗೆಗಳನ್ನು ನೆನಪಿಸಿಕೊಳ್ಳುವುದಿದೆಯಲ್ಲ ಅದೊಂದು ರೋಮಾಂಚನಕಾರಿ ಸಂಗತಿಯಾಗುತ್ತಿತ್ತು.  ದೊಡ್ಡ ಸಂಗತಿಯೂ ಆಗುತ್ತಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮಾರ್ಚ್ ಕೊನೆಯ ವಾರಕ್ಕೆ ಬಂದಿದೆ.  ಅದಕ್ಕಿರುವ ಕಾರಣಗಳೂ ಸಹ ನಿಮಗೆಲ್ಲರಿಗೂ ಗೊತ್ತಿದೆ.  ಅಷ್ಟಕ್ಕೂ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿಯಾದರೂ ಆಗುತ್ತಿದೆಯಲ್ಲ ಎಂಬುದೇ ಸಮಾಧಾನಕಾರ !

ಈ ವರ್ಷ ಕೂಡ ಒಳ್ಳೆಯ ಸಿನೆಮಾಗಳಿವೆ. ಈ ಬಾರಿ ಸುಮಾರು 280 ಪ್ರದರ್ಶನಗಳಿಗೆ ಅವಕಾಶವಿದೆ. ಒರಾಯನ್ ಮಾಲ್ ನಲ್ಲಿ 11 ಸ್ಕ್ರೀನ್ ಗಳು,  ಸುಚಿತ್ರಾ ಫಿಲಮ್ ಸೊಸೈಟಿ, ಚಾಮರಾಜಪೇಟೆಯ ಕಲಾವಿದರ ಸಂಘ ಇವುಗಳನ್ನು ಲೆಕ್ಕ ಹಾಕಿದರೆ 280ಕ್ಕೂ ಹೆಚ್ಚು ಪ್ರದರ್ಶನಗಳು ಆಗುತ್ತವೆ.  ನಾವು ಆಯೋಜಕರು ಏನು ಮಾಡುತ್ತೇವೆಂದರೆ ಕೆಲವು ಆಯ್ದ ಚಿತ್ರಗಳನ್ನು ಎರಡು  ಬಾರಿ ಪ್ರದರ್ಶನ ಮಾಡುತ್ತೇವೆ.

ಸಿನೆಮಾ ಆಫ್ ದ ವರ್ಲ್ಡ್ ವಿಭಾಗದಲ್ಲಿ ಪ್ರಪಂಚದ ಅತ್ತುತ್ತಮ ಎನಿಸಿದ  60 ಸಿನೆಮಾಗಳನ್ನುಾಯ್ಕೆ ಮಾಡಿ ಪ್ರದರ್ಶನ ಮಾಡುತ್ತೇವೆ. ಕಾಂಪಿಟೇಶನ್ ವಿಭಾಗದಲ್ಲಿ 42 ಸಿನೆಮಾಗಳು ಇರುತ್ತವೆ.  ಸೌತ್ ಕೊರಿಯಾ ಸಿನೆಮಾಗಳ ಕುರಿತು ಕಂಟ್ರಿ ಬರ್ಡ್ ಎಂಬ ವಿಶೇಷ ಪ್ರದರ್ಶನಗಳನ್ನು ಮಾಡುತ್ತಿದ್ದೇವೆ. ಅಲ್ಲಿ ಸುಮಾರು ಏಳು ಚಿತ್ರಗಳು ಇವೆ.  ವಾಂಕರ್ ವಾಯ್ಸ್ ಸಿನೆಮಗಳು ಇವೆ.  ಈ ಸಾಧಕನ ಮಹತ್ವದ ಕಾರ್ಯಗಳೇನು, ಅವನ ಸಿನೆಮಾಗಳ ವಿಶೇಷತೆಯೇನು ? ಎಂಬ ಬಗ್ಗೆಯೂ ಇಲ್ಲಿ ಚರ್ಚೆ ನಡೆಯಲು ಆಸ್ಪದವಿದೆ.

ಮುಖ್ಯವಾಗಿ ಇಬ್ಬರು ಅತಿಥಿಗಳು ವಿದೇಶಗಳಿಂದ ಇಲ್ಲಿಗೆ ಬರುತ್ತಿದ್ದಾರೆ.  ಓರ್ವ ಅತಿಥಿ ಜಾಫರ್ ಫನ್ಹಾಹಿ ಅವರ ಮಗ ಫನ್ಹ ಫನ್ಹಾಹಿ,  ಆತ ಬರುವುದು ಏಕೆ  ಮುಖ್ಯವಾಗುತ್ತದೆ ಎಂದರೆ ಜಾಫರ್ ಫನ್ಹಾಹಿ ಅವರು ತಮ್ಮ ಸಿನೆಮಾಗಳ ಮೂಲಕ ವಿಶಿಷ್ಟ ರೀತಿಯಲ್ಲಿ ಇರಾನ್ ದೇಶದಲ್ಲಿ ಪ್ರತಿಭಟನೆ ಮಾಡಿದವರು. 15 ವರ್ಷಗಳಿಂದ ಹೌಸ್ ಆರೆಸ್ಟ್ ನಲ್ಲಿರುವ ವ್ಯಕ್ತಿಯ ಸಿನೆಮಗಳು ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಆಗುತ್ತಿರುವುದು ಮಹತ್ವದ ಸಂಗತಿ. ಜೈಲಿನಲ್ಲಿ ಇದ್ದುಕೊಂಡೇ ಆತ ಎರಡು ಸಿನೆಮಾಗಳನ್ನು ಮಾಡುತ್ತಾರೆ, ಫನ್ಹಾಹಿ ಇಲ್ಲಿಗೆ ಬರುವುದಕ್ಕೆ ಸಾಧ್ಯ ಇಲ್ಲ.  ಹಾಗಿದಿದ್ದರೆ ಆತನನ್ನೇ ಇಲ್ಲಿಗೆ ಕರೆಸಬಹುದಿತ್ತು.  ತಾಂತ್ರಿ ಸಮಸ್ಯೆಗಳ ಕಾರಣದಿಂದ ಅದು ಸಾಧ್ಯವಾಗುತ್ತಿಲ್ಲ.

ಜಾಫರ್ ಫನ್ಹಾಹಿ ಅವರ ಮಗ ಕೂಡ ಒಂದು ಸಿನೆಮಾ ಮಾಡಿದ್ದಾರೆ.  ಅವರು ಒಂದು ಮಾಸ್ಟರ್ ಕಾಸ್ಟ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ.  ಇದು ಪ್ರಮುಖವಾದ ಅಂಶ.  ಶ್ರೀಲಂಕಾದಿಂದ ವಿಮುಕ್ತಿ ಜಯಸಂದರ ಎಂಬುವರು ಬರುತ್ತಿದ್ದಾರೆ.  ನಾನು ಈ ಮಾಸ್ಟರ್ ಕ್ಲಾಸ್ ಗಳ ನಿರ್ವಹಣೆ ಮಾಡುತ್ತಿದ್ದೇನೆ.

ನಿರೂಪಣೆ: ಕುಮಾರ ರೈತ

Similar Posts

Leave a Reply

Your email address will not be published. Required fields are marked *