ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತದ ( India )ಲ್ಲಿ ಅತ್ಯಧಿಕ ಸಂಖ್ಯೆಯ  ಹೃದಯ ಸಂಬಂಧಿ  ರೋಗಿಗಳಿದ್ದಾರೆ. ಲಕ್ಷಾಂತರ ವ್ಯಕ್ತಿಗಳು ಹೃದಯ ಸಂಬಂಧಿ ಕಾಯಿಲೆಗಳಿಂದ (CVD- cardiovascular diseases)  ಬಳಲುತ್ತಿದ್ದಾರೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿಯೇ ಹೃದ್ರೋಗಿಗಳು̈ (heart patients ) ಹೆಚ್ಚು ! ಗ್ರಾಮೀಣ ಪ್ರದೇಶಗಳಲ್ಲಿ 1.6% ರಿಂದ 7.4% ರವರೆಗೆ ಮತ್ತು ನಗರ ಪ್ರದೇಶಗಳಲ್ಲಿ 1% ರಿಂದ 13.2% ರವರೆಗೆ ಇದೆ ಎಂದು ಅಧ್ಯಯನಗಳು  ಹೇಳುತ್ತವೆ.

ಭಾರತದಲ್ಲಿಯೇ ಹೆಚ್ಚು ಮಂದಿ ಹೃದ್ರೋಗಿಗಳು (heart patients) ಇರುವುದಕ್ಕೆ ಮತ್ತು ಪ್ರತಿವರ್ಷವೂ ಅವರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳೇನು ? ಭಾರತೀರ ಮಸಾಲೆ ಪ್ರಿಯ ಆಹಾರ ಪದ್ದತಿ ಕಾರಣವೇ ? ಗುಣಮಟ್ಟದ ಅಡುಗೆ ಎಣ್ಣೆ ಬಳಸದೇ ಇರುವುದು ಕಾರಣವೇ ? ದಿನನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡದಿರುವುದು ಕಾರಣವೇ ? ಮಾನಸಿಕ – ಆರ್ಥಿಕ ಜಂಜಾಟಗಳು ಕಾರಣವೇ ? ಅತಿಯಾಗಿ ಸಿಹಿ ತಿನ್ನುವುದು ಕಾರಣವೇ ?

ಮಧುಮೇಹ (Diabetic) ವನ್ನು ಹೃದಯ ಸಂಬಂಧಿ ಕಾಯಿಲೆಗಳು ಹಿಂಬಾಲಿಸುತ್ತವೆಯೇ ? ಬೊಜ್ಜಿನ ಸಮಸ್ಯೆ ಕಾರಣವೇ ? ಕೃಷಿಯಲ್ಲಿ ಅತ್ಯಧಿಕ ಕೀಟನಾಶಕ ಸಿಂಪಡಿಸುತ್ತಿರುವುದು ಕಾರಣವೇ ? ಭಾರತೀಯರ ವಂಶವಾಹಿ ತಳಿಗಳಲ್ಲಿಯೇ ಹೃದಯ ಸಂಬಂಧಿ ತೊಂದರೆಗಳ ಲಕ್ಷಣಗಳಿದ್ದು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿದೆಯೇ ?

ಸಾಮಾನ್ಯವಾಗಿ ಐವತ್ತು ವರ್ಷ ದಾಟಿದವರಲ್ಲಿ ಹೃದಯ ಸಂಬಂಧಿ ಕಾಯಿಲೆ ಅಥವಾ ತೊಂದರೆ ಅಂದರೆ ವೈದ್ಯಕೀಯ ಭಾಷೆಯಲ್ಲಿ ಹೇಳುವ CVD  ಹೆಚ್ಚುತ್ತಿತ್ತು ! ಕಳೆದ ದಶಕದಿಂದ ಯುಜನತೆಯಲ್ಲಿಯೂ ಹೃದ್ರೋಗಗಳು ಹೆಚ್ಚುತ್ತಿವೆ. ಇದಕ್ಕೇನು ಕಾರಣ. ಮುಂಚಿನಿಂದಲೂ ಇಂಥ ತೊಂದರೆಗಳು ಇದ್ದು ನಮ್ಮ ಬಳಿ ಅಂಕಿಅಂಶ ಇರಲಿಲ್ಲವೇ

ಭಾರತದಲ್ಲಿ CVD- cardiovascular diseases ನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಪ್ರತಿವರ್ಷವೂ ಹೆಚ್ಚುತ್ತದೆ. ಮೊದಲೆಲ್ಲ ಮಹಿಳೆಯರಲ್ಲಿ ಹೃದ್ರೋಗಗಳು ಅಪರೂಪ ಎನ್ನುತ್ತಿದ್ದರು. ಇತ್ತೀಚೆಗೆ ಅವರಲ್ಲಿಯೂ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ !

 ಹೃದ್ರೋಗಗಳಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳ ಅನುಪಾತದಲ್ಲಿ ಗಣನೀಯ ವ್ಯತ್ಯಾಸವಿತ್ತು. ಆ ಅಂತರ ವರ್ಷದಿಂದ ವರ್ಷಕ್ಕೆ  ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ. ಹೃದ್ರೋಗಗಳಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದ್ದರೆ ಅದು ಒಟ್ಟಾರೆ ದೇಶದ ಸಾಮಾಜಿಕ- ಆರ್ಥಿಕ  ಆರೋಗ್ಯ ಸ್ಥಿತಿಯ ಮೇಲೂ ನಕಾರಾತ್ಮಕ (Negative)  ಪರಿಣಾಮ ಬೀರುತ್ತದೆ.

ಮೇಲಿನ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಂಡು ಅದನ್ನು ಭಾರತೀಯರು (Indians) ಅಳವಡಿಸಿಕೊಳ್ಳುವಂತೆ ಮಾಡುವ ವೈದ್ಯಕೀಯ ಸಂಶೋಧನೆಗಳು (Medical Research)  ಭಾರತದ ಪ್ರಯೋಗಾಲಯಗಳಲ್ಲಿ ನಡೆಯುತ್ತಿದ್ದೆಯೇ ? ಅಂದ ಹಾಗೆ ಇಂಥ ವೈದ್ಯಕೀಯ ಸಂಶೋಧನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಾರ್ಷಿಕ ಬಜೆಟಿನಲ್ಲಿ ಎಷ್ಟು ಪ್ರಮಾಣದ ಹಣ ಮೀಸಲಾಗಿಡುತ್ತಿವೆ ?

Similar Posts

Leave a Reply

Your email address will not be published. Required fields are marked *