ಬೆಂಗಳೂರು ಅಂತರಾಷ್ಟ್ರೀಯ ೧೬ನೇ ಸಿನೆಮೋತ್ಸವ – ೨೦೨೫ರ ಘೋಷವಾಕ್ಯ “ಸರ್ವಜನಾಂಗದ ಶಾಂತಿಯ ತೋಟ” ! ವಿಶ್ವವಿಂದು ಹಲವು ಸಮಸ್ಯೆಗಳು, ಬಿಕ್ಕಟ್ಟುಗಳ ನಡುವೆ ತೊಳಲಾಡುತ್ತಿದೆ. ಈಗ ನಮಗೆ ಬೇಕಿರುವುದು ಸರ್ವ ಧರ್ಮ ಸಮನ್ವಯ. ಅಂಥ ನೀತಿಯನ್ನು ಪ್ರತಿಪಾದಿಸುವ, ಪ್ರೀತಿ, ವಿಶ್ವಾಸ ಮತ್ತು ಭಾತೃತ್ವಕ್ಕಾಗಿ ತುಡಿಯುವ ಮಾನವಧರ್ಮ ಪ್ರತಿಪಾದಿಸುವ ಸಿನೆಮಾಗಳ ಮೆರವಣಿಗೆಯೇ ನಡೆಯಲಿದೆಯಂತೆ !

ಹೀಗೆಂದು ಇಂದು ಸಿನೆಮೋತ್ಸವ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ತಿಳಿಸಿದರು. “ಸರ್ವ ಜನಾಂಗದ ಶಾಂತಿಯ ತೋಟ” ಪರಿಕಲ್ಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಮಾರ್ಚ್‌ ೦೧ ರಂದು ಸಂಜೆ ವಿಧಾನಸೌಧದ ಮುಂಭಾಗ ಚಿತ್ರೋತ್ಸವಕ್ಕೆ ಚಾಲನೆ ನೀಡುತ್ತಾರೆ ಎಂದು ಹೇಳಿದರು.

ಚಲನಚಿತ್ರೋತ್ಸವ ನಡೆಯುವ ದಿನಗಳಲ್ಲಿ ಚಲನಚಿತ್ರ ಮಾಧ್ಯಮ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸದ, ಮಾಸ್ಟರ್‌ ಕ್ಲಾಸ್‌ ಮೊದಲಾದ ಸಿನೆಮಾ ಶೈಕ್ಷಣಿಕ ಕಾರ್ಯಕ್ರಮಗಳಿರುತ್ತವೆ.

ಶೈಕ್ಷಣಿಕ ಚಟುವಟಿಕೆಗಳು:

ಮಾರ್ಚ್‌ ೦೩ ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನ ಬಿಡುಗಡೆಯಾದ ದಿನ. ಆ ದಿನವನ್ನು ಸಿನೆಮಾ ದಿನವಾಗಿ ಆಚರಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ೯೧ ವರ್ಷಗಳ ನಡೆದುಬಂದ ದಾರಿಯನ್ನು ಮೆಲುಕು ಹಾಕುವ ವಿಚಾರ ಸಂಕಿರಣ, ಸಂವಾದ ನಡೆಯಲಿದೆ !

ಚಲನಚಿತ್ರ ನಿರ್ಮಾಣದಲ್ಲಿ ವಿವಿಧ ಕೃತಕ ಬುದ್ದಿಮತ್ತೆ (ಎಐ) ಬಳಕೆ ಕುರಿತಂತೆ ಇಡೀ ದಿನದ ಕಾರ್ಯಾಗಾರ- ಸಂಯೋಜನೆ: ವಿದ್ಯಾಸಾಗರ್‌

ಪ್ರಾದೇಶಿಕ ಸಿನೆಮಾದ ಪ್ರದರ್ಶಕ ಸಮಸ್ಯೆಗಳ ಬಗ್ಗೆ ಚರ್ಚೆ- ಮುಖೇಶ್‌ ಮೆಹ್ತಾ

ಫಿಲಂಲ್ಯಾಬ್‌ ಮತ್ತು ಫಿಲಂ ಪ್ರೊಡಕ್ಷನ್‌ ಕಾರ್ಯವಿಧಾನಗಳ ಬಗ್ಗೆ ಥೈಲ್ಯಾಂಡಿನ ಸಿನೆಮಾ ನಿರ್ಮಾಪಕ ರೇಮಂಡ್‌ ಪಠಾಣ್‌ ವಿರಂಗೂನ್‌ ಅವರಿಂದ ಉಪನ್ಯಾಸ

ಸಿನೆಮಿಯ ಪ್ರತಿಪಾದಕತೆ ಮತ್ತು ಪ್ರೇಕ್ಷಕರ ಮೇಲೆ ಅದರ ಪ್ರಭಾವ ಕುರಿತಂತೆ ವಿಚಾರ ಸಂಕಿರಣ ಸಂಯೋಜನೆ – ಶ್ರೀಮತಿ ಶಮಂತ ಡಿ.ಎಸ್.‌

ಸ್ಮರಣೆ:

ಶತಮಾನೋತ್ಸವ ಸ್ಮರಣೆಯಲ್ಲಿ ನಟರು – ನಿರ್ದೇಶಕರು ಆದ ರಾಜ್‌ ಕಪೂರ್‌, ಗುರುದತ್‌, ಹೊಸ ಅಲೆ ಸಿನೆಮಾಕ್ಕೆ ಗಟ್ಟಿ ನೆಲೆ ಒದಗಿಸಿದ ನಿರ್ದೇಶಕ ರಿತ್ವಿಕ್‌ ಘಟಕ್‌ ಮತ್ತು ಕನ್ನಡದ ಖ್ಯಾತನಟ ಕೆ.ಎಸ್.‌ ಅಶ್ವಥ್‌ ಅವರ ಸಾಧನೆ ಕುರಿತು ಉಪನ್ಯಾಸ

ಇತ್ತೀಚೆಗೆ ನಿಧನರಾದ ನಿರ್ದೇಶಕ ಶ್ಯಾಮ್‌ ಬೆನೆಗಲ್‌, ಕುಮಾರ್‌ ಸಹಾನಿ, ಡಾ. ರಾಜೀವ್‌ ತಾರಾನಾಥ್‌, ದ್ವಾರಕೀಶ್‌, ಸದಾನಂದ ಸುವರ್ಣ, ಎಂ.ಟಿ. ವಾಸುದೇವ ನಾಯರ್‌ ಅವರ ಸಂಸ್ಮರಣೆ

ಇಂಟರ್‌ ನ್ಯಾಷನಲ್‌ ಫೆಡರೇಷನ್‌ ಆಫ್‌ ಫಿಲಂ ಕ್ರಿಟಿಕ್ಸ್‌ (ಫಿಪ್‌ ರೆಸ್ಕಿ) ಸಂಸ್ಥೆಯವರಿಂದ ಆರ್.ವಿ. ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿಚಾರ ಸಂಕಿರಣ

ಖ್ಯಾತ ಛಾಯಾಗ್ರಾಹಕ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ. ಮೂರ್ತಿ ನೆನಪಿನ ವಿಶೇಷ ಉಪನ್ಯಾಸ.

ಸಂಗೀತ ಮತ್ತು ಸಿನೆಮಾ ಕುರಿತು ವಿಶೇಷ ಉಪನ್ಯಾಸ

ಕ್ಲಾಸಿಕ್‌ ಸಿನೆಮಾಗಳ ಸಂರಕ್ಷಣೆ, ಸಂಗ್ರಹ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಜೊತೆಗೆ ಮರೆಯಲಾಗದ ಸಿನೆಮಾಗಳು ಕುರಿತು ಚರ್ಚೆ

ಈ ಚಿತ್ರೋತ್ಸವದಲ್ಲಿ ಏಷಿಯನ್‌, ಇಂಡಿಯನ್‌ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗವಿರುತ್ತದೆ. ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಸಿನೆಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಒಟ್ಟು ಕಾರ್ಯಕ್ರಮಗಳ ನೋಟ:

ಏಷಿಯನ್‌ ಸಿನೆಮಾ ಸ್ಪರ್ಧಾ ವಿಭಾಗ, ಚಿತ್ರ ಭಾರತಿ- ಸಿನೆಮಾ ಸ್ಪರ್ಧಾ ವಿಭಾಗ, ಕನ್ನಡ ಸಿನೆಮಾ ಸ್ಪರ್ಧಾ ವಿಭಾಗ, ಸಮಕಾಲೀನ ವಿಶ್ವ ಸಿನೆಮಾ, ಕನ್ನಡ ಜನಪ್ರಿಯ ಸಿನೆಮಾ, ವಿಮರ್ಶಕರ ವಾರ, ಜೀವನಾಧಾರಿತ ಚಿತ್ರಗಳು, ದೇಶಕೇಂದ್ರಿತ ವಿಶೇಷ: ಜಾರ್ಜಿಯಾ ಮತ್ತು ಬ್ರೆಜಿಲ್‌ ದೇಶಗಳ ಸಿನೆಮಾಗಳು, ಪುನರಾವಲೀಕನ – ಜಮರ್ಮನಿಯ ಖ್ಯಾತ ನಿರ್ದೇಶಕ ವಿಮ್‌ ವೆಂಡರ್ಸ್‌ ಮತ್ತು ಪೋಲೆಂಡಿನ ಕ್ರಿಸ್ತಾಫ್‌ ಕಿಸ್ಲಾವ್‌ ಮತ್ತು ಭಾರತದ ಶ್ಯಾಮ್‌ ಬೆನಗಲ್‌, ಸಂರಕ್ಷಿಸಲ್ಪಟ್ಟ ಸಿನೆಮಾಗಳ ವಿಭಾಗದಲ್ಲಿ ಕನ್ನಡದ ಘಟಶ್ರಾದ್ಧ, ಪಲ್ಲವಿ ಮತ್ತು ಇತರ ಭಾರತೀಯ ಭಾಷೆಗಳ ಸಿನೆಮಾಗಳ ಪ್ರದರ್ಶನ, ಶತಮಾನೋತ್ಸವ ಸ್ಮರಣೆ ಶ್ರದ್ಧಾಂಜಲಿ ನೆನಪು

ಮಾರ್ಚ್‌ ೮, ೨೦೨೫ರಂದು ಸಮಾರೋಪ ಸಮಾರಂಭ.

ಪ್ರತಿನಿಧಿ ನೋಂದಣಿ:

ಫೆಬ್ರುವರಿ ೧೨ ರಿಂದ ಪ್ರತಿನಿಧಿ ನೋಂದಣಿ ಆರಂಭವಾಗಿದೆ. ೧೮ ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ.

ಸಾರ್ವಜನಿಕರಿಗೆ – ರೂ.೮೦೦

ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು ಮತ್ತು ಚಿತ್ರ ಸಮಾಜಗಳ ಸದಸ್ಯರಿಗೆ ರೂ.೪೦೦

ಆನ್‌ ಲೈನ್‌ ನಲ್ಲಿ ನೋಂದಾಯಿಸಿಕೊಂಡವರು ಫೆಬ್ರುವರಿ ೧೮ ರಿಂದ ನಂದಿನಿ ಲೇಔಟ್‌ ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿ, ಶಿವಾನಂದ ಸರ್ಕಲ್‌ ಬಳಿ ಇರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪಾಸುಗಳನ್ನು ಪಡೆಯಬಹುದು.

ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ಇಲಾಖೆಯ ಆಯುಕ್ತ ಹೇಮಂತ್‌ ನಿಂಬಾಳ್ಕರ್‌,ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಸಿನೆಮೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್, ಅಕಾಡೆಮಿ ರಿಜಿಸ್ಟ್ರಾರ್‌ ಹಿಮಂತರಾಜು ಉಪಸ್ಥಿತರಿದ್ದರು.

Similar Posts

Leave a Reply

Your email address will not be published. Required fields are marked *